೧೩೩ ಅರಣ್ಯಕಾಂಡ ಇತ್ಯುಕ್ತಾಂ ಸುಮುಖೀಂ ಸೀತಾಂ ದೃಷ್ಟಾ ರಾಮೋ ದಯಾಮ್ಯುಧಿಃ | ಭಕ್ತಾರ್ತಿನಾಶನೋ ಗಾಢಂ ಸೀತಾಮಾಲಿ" ಸತ್ವ ರಮ್ ॥೪೦। ಉಪ್ಪತ್ತಕಫರಪಯೇ ನೇತ್ರ ಕಜ್ಜಲಸುನ್ದರೇ | ಶಿಹಕ್ಕೇನೈವ ಸಂಸ್ಕೃಶ್ಯ ಪ್ರಮಮಾರ್ಜಾಕು, ನಿರ್ಗತಮ್ ||೧|| ತತಃ ಸೀತಾಂ ಸಮೊಶ್ಚಾಸ್ಯ ವಾಚಾ ಮಧುರಯಾ ಹರಿಃ | ಶ್ರೀಹಸ್ಯ(ರ್ಕನಂ ಕೃತ್ಸಾ ಪಠ್ಯಪಶ್ಯತಿ ಚಾಬ್ರವೀತ್ ॥೨। ಅನುಗ್ರಹೇಣ ಸಾ ಪತ್ಯುದಿವ್ಯಜ್ಞಾನಸಮತಾ || ಅವಶ್ಯತ್ ತಾಂ ಮೃತ್ಯುದೇವೀಂ ಮಾಯಾನೀತಾಂ ಪ್ರಕಲ್ಪಿತಾಮ್ |೪೩! ತಾಂ ದೃಷ್ಟಾ ತತಃ ಸೀತಾ ಭಾವಿ ಕಾರ್ಯಂ ಚ ವಿಸ್ತರಮ್ | ಭಯಂ ತ್ಯಾ ಸುಸ್ಥಿರಾಜ್ ಹಸ ಪ್ರಾಹ ರಾಸುವನಮ್ || 88 ಇನ್ನು ನೀನು ಎಲ್ಲಿಂದ ತಂದೆ ? ರಾಮ ! ಮಿಧಿಲಾಧಿಪತಿಯಾದ ನನ್ನ ತಂದೆಯು, ನಿನ್ನಲ್ಲಿ ನಂಜು ಗೆಯಿಟ್ಟು ನನ್ನನ್ನು ನಿನಗೆ ಕೊಟ್ಟಿರುವನು ನನ್ನಲ್ಲಿ ಯಾವುದೊಂದು ಅಪರಾಧವನ್ನೂ ಕಾಣದ ನನ್ನನ್ನು ಬಿಟ್ಟು ಬಿಡುವುದು ನಿನಗೆ ಯುಕ್ತವಲ್ಲ ' ಎಂದು ಹೇಳಿದಳು ||೩೮-೩೯|| ಹೀಗೆ ಹೇಳುತಿರುವ ಸುಮುಖಿಯಾದ ಸೀತೆಯನ್ನು ನೋಡಿ, ದಯಾಸಮುದ್ರನಾಗಿರುವ ಭಕ್ತಾರ್ತಿನಾಶಕನಾದ ರಾಮಭದ್ರನು, ಬೇಗನ ಸೀತೆಯನ್ನು ಗಾಢವಾಗಿ ಆಲಿಂಗಿಸಿಕೊಂಡು, ಚಲಿತವಾದ ಮಾನುಗಳಿಗೆ ಸಮಾನವಾಗಿ ಕಜ್ಜಲ(ಕಾಡಿಗೆ)ದಿಂದ ಸುಂದರವಾಗಿರುವ ಅವಳ ನೇತ್ರಗಳನ್ನು ತನ್ನ ದಿವ್ಯಹಸ್ತದಿಂದ ಪರಾಮರ್ಶಿಸಿ, ಅವಳ ಕಣ್ಣುಗಳಿಂದ ಹೊರಟಿದ್ದ ನೀರನ್ನು ಒರೆಸಿದನು ||೪೦-೪೧|| ಅನಂತರ, ಆ ಶ್ರೀಹರಿಯು ಮೃದುಮಧುರವಾದ ಮಾತಿನಿಂದ ಸೀತೆಯನ್ನು ಸಮಾಧಾನ ಪಡಿಸಿ, ತನ್ನ ದಿವ್ಯಕರದಿಂದ ಅವಳನ್ನು ಸ್ಪರ್ಶಮಾಡಿ, ಅಲ್ಲಿ ನೋಡುನೋಡು ಎಂದು ಹೇಳಿ ದನು ||೪೨|| ಆಗ ಅವಳು ತನ್ನ ಪತಿಯ ಅನುಗ್ರಹದಿಂದ ದಿವ್ಯದೃಷ್ಟಿಯುಕ್ತಳಾಗಿ, ಆ ಮೃತ್ಯುದೇ ವತೆಯು ಮಾಯಾಸೀತೆ ಯಾಗಿ ಕಲ್ಪಿಸಲ್ಪಟ್ಟಿರುವುದನ್ನು ಕಂಡಳು ||೪೩|| ಹೀಗೆ ಸೀತೆಯು ಅವಳನ್ನು ನೋಡಿ, ಮುಂದೆ ನಡೆಯಬೇಕಾಗಿರುವ ವಿಶಾಲವಾದ ಕಾರವನ್ನೂ ಪರ್ಯಾಲೋಚಿಸಿ, ಭಯವನ್ನು ಬಿಟ್ಟು ಸ್ಥಿರವಾದ ಶರೀರವುಳ್ಳವಳಾಗಿ, ಮಂದ ಭಾಸಮಾಡುತ ರಾಮನನ್ನು ಕುರಿತು ಹೀಗೆ ಹೇಳಿದಳು ||೪೪||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೩೭
ಗೋಚರ