ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರೆಹ ರಾಮಾಯಣ fಸರ್ಗ ತಯಾಹಂ ಪುರುಷವ್ಯಾರು ಧಾರ್ಮಿಕ ಮಹಾತ್ಮನಾ | , ಸಮಾಗಮ್ಯ ಗಮಿಮಾಮಿ ತ್ರಿದಿವಂ ದೇವಸಮ್ಮಿತಮ್ ||೩|| ಅಕ್ಷಮ್ಯಾನರಶಾರ್ದೂಲ ಮಯಾ ಲೋಕಾಜಿತಾಃ ಶುಭಾಃ | ಬ್ರಾಹ್ಮಾಂಕ್ಷ ನಾಕದೃಷ್ಟಾಂಚ ಪ್ರತಿಕೃಷ್ಟ ಮಾಮಕಾ೯ ೩೯॥ ಸಮರ್ಥ ರಾಮಸ್ಯ ಮಹತ್ ಸ ಪುಣ್ಯಫಲಂ ವಿರಕ್ಕೆ ಶರಭಜ್ಜ ಯೋಗೀ | ಚಿತಿಂ ಸಮಾರೋಹಯದಪಮೇಯಂ ರಾಮಂಸಸೀತಂಸಹಕಾಪ್ರಣಮ್ಯ! ದ‌ಜೆರರಾಮಮಶೇಪಹಂದೂರ್ವಾದಳಶ್ಯಾಮಲಮಾಯತಾಕ್ಷಮ್ | ಚೀರಾಮೃರಂ ನಿಗ್ಧ ಜಟಾಕಲಾಪಂಸೀತಾಸಹಾಯಂತ್ರಿತಲಕ್ಷ್ಮಣಂತಮ್ || ಕೋ ವಾ ದಯಾಳುಃ ಶಿತಕಾಮಧೇನುಃ , ಅಹೋ ಜಗತ್ಯಾಂ ರಘುನಾಯಕಾದೃತೇ | ಸ್ಮತೊ ನಯಾ ನಿತ್ಯಮನನ್ಯಭಾಜಾ ಜ್ಞಾತಾ ಮತಿಂ ಮೇ (ಯಮೇವವಾಗತ: || Aಆ ಎಲೈ ನರವ್ಯಾಘ್ರನೆ ! ಮಹಾ ಧರಿಷ್ಠ ನುಗಿಯ ಮಹಾತ್ಮನಾಗಿಯ ಇರುವ ನಿನ್ನೊ ಡನೆ ಈಗ ಸಮಾಗಮ ಸುಖವನ್ನು ಹೊಂದಿದವನಾಗಿ, ಇನ್ನು ನಾನು ದೇವಪೂಜಿತವಾದ ಸ್ವರ್ಗ ಲೋಕಕ್ಕೆ ಹೊರಡುವೆನು ||೩೮|| - ಎಲೈ ವರುಷಶ್ರೇಷ್ಟನೆ ! ಅಕ್ಷಯವಾದ ಪುಣ್ಯಲೋಕಗಳನ್ನು ನಾನು ತಪಸ್ಸಿನಿಂದ ಸಂಪಾ ಡಿಸಿರುವೆನು ಹೀಗೆ ನಾನು ಸಂಪಾದಿಸಿರುವ ಬ್ರಹ್ಮಲೋಕಗಳನ್ನೂ ಸ್ವರ್ಗಲೋಕಗಳನ್ನೂ ಈಗ ನೀನು ಸ್ವೀಕರಿಸುವನಾಗು ||೩೯|| ಹೀಗೆಂದು ಹೇಳಿ, ವಿರಕ್ತ ನಾದ ಆ ಶರಭಂಗಮುನಿಯು, ಅತ್ಯಧಿಕವಾದ ತನ್ನ ಪುಣ್ಯಪ ಲವನ್ನೆಲ್ಲ ಶ್ರೀರಾಮನಿಗೆ ಸಮರ್ಪಿಸಿ, ಅಪ್ರಮಯನಾದ ಸೀತಾಸಮೇತನಾಗಿರುವ ಶ್ರೀರಾಮ ನನ್ನು ಕೂಡಲೇ ನಮಸ್ಕರಿಸಿ, ಬಳಿಕ ಚಿತಿಯನ್ನು ಹತ್ತಿದನು ||10|| ಆಗ ಆ ಶರಭಂಗಮುನಿಯು, ಸರಭೂತಹೃದಯಕ್ಷನಾಗಿಯ ದೂರಾದಳಶ್ಯಾಮದೇ ಹನಾಗಿಯ ವಿಶಾಲನೇತ್ರನಾಗಿಯ ಚೀರಾಂಬರಧರನಾಗಿಯ ಸುಂದರವಾದ ಜಟಾಕಲಾಪ ವುಳ್ಳವನಾಗಿಯೂ ಸೀತಾ ಲಕ್ಷ್ಮಣ ಯುಕ್ತನಾಗಿಯೂ ಇರುವ ಶ್ರೀರಾಮಚಂದ್ರನನ್ನು ಬಹಳ ಹೊತ್ತು ಧ್ಯಾನಮಾಡಿದನು ||೪೧|| ಅಹಹ ! ಈ ಲೋಕದಲ್ಲಿ ಶ್ರೀರಾಮಚಂದ್ರನನ್ನು ಬಿಟ್ಟರೆ, ಆಶ್ರಿತರಿಗೆ ಕಾಮಧೇನು ವಾಗಿರುವ ದಯಾಳುವಾವನಿರುವನು ? ಅನನ್ಯ ಶರಣನಾಗಿರುವ ನನ್ನಿಂದ ಸ್ಮರಿಸಲ್ಪಟ್ಟ ಕೂಡಲೇ, ಈ ಸ್ವಾಮಿಯು ನನ್ನ ಅಭಿಪ್ರಾಯವನ್ನು ತಿಳಿದುಕೊಂಡು ತಾನೇ ಇಲ್ಲಿಗೆ ಬಂದುಬಿಟ್ಟಿರುವನು ||