೧೪ ಅರಣ್ಯಕಾಂಡ ಪರ್ಣಶಾಲಾಧಾರದೇಶೇ ನಿಯುಜ್ಯ ಸಕನೀಯಸಮ್ | ತತೋ ಗರ್ಚ್ಚ ರಘುವರೋ ದದರ್ಶ ಹರಿಣಂ ಮೃಗನ ೧೩॥ ಮಾರೀಚೋಪಿ ಹರಿಂ ದೃಷ್ಟಾ ಮಾಯಾವೀ ಮೃಗರೂಪದ್ಭಕ್' | ಮಾಯಾಂ ತನೋತಿ ದುರ್ಬುದ್ದಿ: ಮಾಯಿನಾಮಪಿ ಮಾಯಿನೀಮ್ ||೧೪|| ಕೆಜೆದುಕೃತ್ಯ ಚಲತಿ ಈಚೆದ್ದಾವತಿ ಭೀತವತ್ | ಅವಲೋಕ್ಯ ಕ್ಲಚಿತ್ ಪಕ್ಷಾತ್ ಶನೈರ್ಗಚ್ಚ ತ್ಯಭೀತವತ್ ||೧೫ ಹಸ್ತಪಾಪ ಇವಾಭಾತಿ ರಾಮಾಕರ್ಷಣತತ್ಪರಃ | ಏವಂ ದೃಶ್ಯಾವೃಶ್ಯ ರೂಪಃ ತಮಾಕರ್ಷತ್ ಸುರತಃ ||೧೬|| ಸಂಕುಸ್ತು ತದಾ ರಾಮಃ ಸೂರ್ಯ ಲಕ್ಷ್ಮಿ ಸಮಪಭಮ್ | ಮುಮೋಚ ಜೇಲಿತಂ ದೀಪ್ತಂ ಶಸ್ತಂ ಬ್ರಹ್ಮವಿನಿರ್ಮಿತವ' | ೧೭|| ತಾಳಮಾತ್ರ ಮರೋಳ್ಳುತ್ಯ ವ್ಯಸತತ' ಸ ತರಾತುರಃ | ಹಾ ಲಕ್ಷ್ಮಣೇತಿ ವಚನಂ ಸಮುಚ್ಚಾರ್ಯ ತತಸ್ತತಃ ||೧೪|| ತದ್ದೆ ಹಾದುತ್ತಿ ತಂ ತೇಜ, ಸರ್ವಲೋಕಸ್ಯ ಪತಃ | ರಾಮಮೇವಾವಿಕದ್ದೇವಾಃ ವಿಸ್ಮಯಂ ಪರಮಂ ಯಯುಃ || ೧೯ || ಬಳಿಕ, ಪರ್ಣಶಾಲೆಯಲ್ಲಿ ರಕ್ಷಣೆಗಾಗಿ ತನ್ನ ತಮ್ಮನನ್ನು ನಿಯೋಗಿಸಿ ಮುಂದಕ್ಕೆ ಹೋಗುತ, ರಘುಶ್ರಷ್ಟನು ಸುವರ್ಣಮಯವಾದ ಮೃಗವನ್ನು ಕಂಡನು ||೧೩| ಆಗ ಮೃಗರೂಪವನ್ನು ಧರಿಸಿದ್ದ ದುರ್ಬುದ್ದಿ ಯಾದ ಮಾರೀಚನೂಕೂಡ, ಆ ಶ್ರೀಹರಿ ಯನ್ನು ನೋಡಿ, ಎಂತಹ ಮಾಯವಂತರಿಗೂ ಮೋಹವುಂಟುಮಾಡತಕ್ಕ ಮಾಯೆಯನ್ನು ಮಾಡಿದನು ||೧೪|| ಒಂದುಕಡೆ ಹಾರಿಹಾರಿ ಹೋಗುವನು, ಒಂದು ಕಡೆ ಹದರಿದವನಂತ ಓಡುವನು. ಒಂದು ಕಡೆ ಹಿಂದೆ ನೋಡಿ ಹದರಿಕೆಯಿಲ್ಲದವನಂತೆ ಮೆಲ್ಲನೆ ನಡೆಯುವನು, ಮತ್ತೊಂದಕಡೆ ರಾಮನನ್ನು ಸೆಳೆದುಕೊಂಡು ಹೋಗಲೆಳಸಿ ಕೈಗೆ ಸಿಕ್ಕಿದಂತೆ ಕಾಣಿಸಿಕೊಳ್ಳುವನು ಹೀಗೆ ಒಂದುಸಮಯ ದಲ್ಲಿ ಕಾಣಿಸಿಕೊಳ್ಳುತಲೂ, ಮತ್ತೊಂದು ಸಮಯದಲ್ಲಿ ಕಾಣಿಸಿಕೊಳ್ಳದೆಯ, ಅವನನ್ನು ಬಹು ದೂರ ಸೆಳೆದುಕೊಂಡುಹೋಗಿಬಿಟ್ಟನು ||೧೫-೧ || ಆಗ ಶ್ರೀರಾಮನಾದರೋ, ಅತಿಕುಪಿತನಾಗಿ, ಸೂರಕಿರಣಕ್ಕೆ ಸಮಾನವಾಗಿ ಪ್ರಜ ಲಿಸುವ ಬ್ರಹ್ಮನಿರಿತವಾದ ದಿವ್ಯಾಸ್ತ್ರವನ್ನು ಬಿಟ್ಟು ಬಿಟ್ಟನು ||೧೭|| ಅನಂತರ, ಆ ಬಾಣದಿಂದ ಹತನಾದ ಮಾರೀಚನು, ಅಯ್ಯೋ ! ಲಕ್ಷ್ಮಣಾ ! ಎಂದು ಕೂಗಿಕೊಂಡು, ಒಂದು ತಾಳೆಯಮರದಷ್ಟು ಮೇಲಕ್ಕೆ ಹಾರಿ ಬಿದ್ದು ಬಿಟ್ಟನು ||೧೮|| ಆಗ ಅವನ ದೇಹದದೆಸೆಯಿಂದ ಉತ್ಪನ್ನವಾದ ಒಂದು ತೇಜಸ್ಸು, ಸಮಸ್ತಲೋಕವೂ ನೋಡುತಿರುವಾಗ, ರಾಮನೊಳಗೆಯೇ ಪ್ರವೇಶಿಸಿತು, ಇದನ್ನು ಕಂಡು ದೇವತೆಗಳೂ ಪರಮ ವಿಸ್ಮಯಭರಿತರಾದರು ||೯||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೪೩
ಗೋಚರ