ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಣ್ಯಕಾಂಡಃ ಪತಿದಾನೀಮೇವೈಷಃ ರಾಮೋ ದಾಶರಥಿಃ ಪ್ರಭುಃ | ದಣ್ಣಾ : ಸ್ವದೇಹಂ ಗಚ್ಚಾಮಿ ಬ್ರಹ್ಮಲೋಕನಕಪಃ | 8೩|| ಅಯೋಧ್ಯಾಧಿಪತಿಮೆಗಸ್ತು ಹೃದಯೇ ರಾಘವಃ ಸದಾ | ಯಡ್ರಾಮಾ ಸ್ಥಿತಾ ನೀತಾ ಮೇಘುಸ್ಥವ ತಟಲ್ಲತಾ ||೪|| ಇತಿ ರಾಮಂ ಜೆರಂ ಧ್ಯಾತ್ಯಾ ದೃಷ್ಟಾಚ ಪುರತಃ ಸ್ಥಿತಮ್ | ರಾಘವೇಣಾಭ್ಯನುಜ್ಞಾತೋ ದದಾಹ ಸಕಳೇಬರವು | ೪೫| ತಸ್ಯ ರೋಮಾಣಿ ಕೇಶಾಂಶ್ಚ ದದಾಹಾಗ್ನಿರ್ಮಹಾತ್ಮನಃ | ಜೀರ್ಣಾ೦ ತಚಂ ತಥಾಸ್ಥಿನಿ ಯಚ್ಚ ಮಾಂಸಂ ಸಶೋಣಿತಮ್ ೪೬| ರಾಮಸ್ತು ವಿಸ್ಮಿತೋ ಭ್ರಾತಾ ಭಾರ್ಯಯಾ ಚ ಮಹಾತ್ಮರ್ವಾ ! ಸ ಚ ಪಾವಕಸಬುಶಃ ಕುಮಾರ ಸಮಪತ ||೪೭ ಸ ಲೋಕಾನಾಹಿತಾಗ್ನಿನಾಂ ತ್ರೀಣಾಂ ಚ ಮಹಾತ್ಮನಾಮ್ | ದೇವಾನಾಂ ಚ ವ್ಯತಿಕಮ್ರ ಬ್ರಹ್ಮಲೋಕಂ ವ್ಯರೋಹತ ||೪|| ಸರ್ವ ಲೋಕಮಹೇಶ್ವರನಾದ ದಶರಥಪುತ್ರನಾದ ಈ ರಾಮನು ಈಗಲೇ ನೋಡುತಿರಲಿ, ನಾನು ಇವನೆದುರಿಗೇ ನನ್ನ ದೇಹವನ್ನು ಅಗ್ನಿಯಲ್ಲಿ ಸುಟ್ಟು ಬಿಟ್ಟು ನಿಷ್ಕಲ್ಮಷನಾಗಿ ಬ್ರಹ್ಮ ಲೋಕಕ್ಕೆ ಹೋಗುವೆನು ||೪೩|| ಮೇಘದಲ್ಲಿ ವಿದ್ಯುಲ್ಲತೆಯಿರುವಂತೆ-ಯಾವನ ವಾಮಾಂಕದಲ್ಲಿ ಸೀತಾದೇವಿ ಯಿರುವಳೂ, ಅಂತಹ ಅಯೋಧ್ಯಾಧಿಪತಿಯಾದ ಶ್ರೀರಾಮನು ಸರ್ವದಾ ನನ್ನ ಹೃದಯದಲ್ಲಿ ವಾಸವಾ ಡಲಿ ||೪೪|| ಈರೀತಿಯಾಗಿ ಶ್ರೀರಾಮನನ್ನು ಬಹಳ ಹೊತ್ತು ಧ್ಯಾನಮಾಡಿ, ಮುಂದುಗಡೆ ನಿಂತಿರುವ ಆ ಶ್ರೀರಾಮಚಂದ್ರಮೂರ್ತಿಯ ದರ್ಶನವನ್ನು ಮಾಡಿ, ಅವನಿಂದ ಅಪ್ಪಣೆಪಡೆದವನಾಗಿ, ಶರ ಭಂಗಮುನಿಯು ತನ್ನ ದೇಹವನ್ನು ಅಗ್ನಿ ಯಲ್ಲಿ ದಹಿಸಿಬಿಟ್ಟನು ||೪೫|| ಆಗ ಅಗ್ನಿಯು, ಮಹಾತ್ಮನಾದ ಶರಭಂಗಮುನಿಯ ರೋಮಗಳನ್ನೂ ಕೇಶಗಳನ್ನೂ ಜೀರ್ಣವಾದ ಚರ್ಮವನ್ನೂ ಅಸ್ಥಿಗಳನ್ನೂ ಮಾಂಸವನ್ನೂ ರಕ್ತವನ್ನೂ ಸುಟ್ಟು ಬಟ್ಟನು ||೪೬|| ಆಗ ಇದನ್ನು ನೋಡಿ ಶ್ರೀರಾಮಚಂದ್ರನು ತನ್ನ ಪತ್ನಿಯೊಡನೆಯ ಅನುಜನೊಡ ನೆಯ ಕೂಡಿದವನಾಗಿ ಆಶ್ಚರ್ಯಪಟ್ಟನು ಆ ಶರಭಂಗಮುನಿಯಾದರೋ, ಅಗ್ನಿಯಂತೆ ಪ್ರಜ್ವಲಿಸುತ್ತಿರುವ ಬಾಲಕನಾಗಿಬಿಟ್ಟನು ||೪೭|| ಬಳಿಕ, ಅವನು ಆಹಿತಾಗ್ನಿಗಳ ಲೋಕವನ್ನೂ ಮಹಾತ್ಮರಾದ ಮುನಿಗಳ ಲೋಕವನ್ನೂ ದೇವಲೋಕವನ್ನೂ ದಾಟಿಹೋಗಿ, ಬ್ರಹ್ಮಲೋಕವನ್ನು ಆಶ್ರಯಿಸಿದನು ||೪||