ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ . ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ (ಸರ್ಗ ಅಥ ಮಾಯಾಯವನಿಕಾಂ ಪ್ರಸಂಠ್ಯ ರಘುನನ್ನಃ | ಮೋಹರ್ಯ ಪ್ರಾಣಿನಃ ಸೀತಾಂ ವಿಜಿರ್ನ್ನ ಸಂಕ್ರಮಂ ಯಮ್ | ೧ | ಯಶಯಊಚುಃ. ಸೂತ ಜಾನಾಂ ಸರ್ವಂ ತಂ ವೇದಾಸಪ್ರಸಾದತಃ | ಬೃನಾಶಾವಾಗಮಂ ವಿಷ್ಯ ಯಾಥಾತಧ್ಯೆನ ನೋ ವದ ||೧೯|| ಸೂಉವಾಚ. ಪುರಾ ಜಲನ್ರೋ ರಾಮ ಸಮುದ್ರ ತನಯೋಸುರಃ | ತಲೋಕ್ಯಂ ಬಾಧಿತಂ ತೇನ ಸದೇವಾಸುರಮಾನುಪಮ್ ||೨೦|| ತತೋ ದೇವಾಃ ಸಗಣ್ಣರ್ವಾಃ ಸಂಪ್ರಾಪ್ಯ ಶರಣಂ ಹರಿಮ್ | ಊಚುಃ ಪ್ರಲಯೋ ಭೂತ್ವಾ ಜಲಸ್ಥರಕೃತಂ ಭಯಮ್ ||೧|| ವಯಂ ಜನ್ಮರಾಖೇನ ರಕ್ಷಸಾ ಹತಸಂಪದಃ | ತನ್ನಿಹತ್ಯ ಭಯಾತ್ ತಸ್ಮಾತ್‌ ಮೋಚಯಾರ್ಸಾ ಜಗತ್ಪತೇ ||೨.೨|| ಆಮೇಲೆ, ಆ ರಾಮಚಂದ್ರನು ಪುನಃ ತನ್ನ ಮಾಯೆಯೆಂಬ ತೆರೆಯನ್ನು ಪ್ರಸರಣೆಮಾಡಿ, ಪ್ರಾಣಿಗಳೆಗೆ ಮೋಹವನ್ನು ಂಟುಮಾಡುತ, ಸೀತೆಯನ್ನು ಹುಡುಕಿಕೊಂಡು ತನ್ನ ಆಶ್ರಮವನ್ನು ಕುರಿತು ಹೊರಟವನಾದನು ||೧೮|| ಶೌನಕಾದಿಗಳು ಸೂತಪೌರಾಣಿಕನನ್ನು ಪ್ರಾರ್ಥಿಸುವರು - ಎಲೈ ಸೂತಮುನಿಯೆ! ವೇದವ್ಯಾಸರ ಅನುಗ್ರಹಬಲದಿಂದ ನೀನು ಸಕಲವನ್ನೂ ತಿಳಿದವ ನಾಗಿರುವೆ, ಅದುಕಾರಣ, ವಿಷ್ಣುವಿಗೆ ಬೃಂದೆಯ ಶಾಪಬಂದ ಪ್ರಕ್ರಮವನ್ನು ನಮಗೆ ಯಧಾ ವತ್ತಾಗಿ ಹೇಳುವನಾಗು ||೧೯|| ಇದನ್ನು ಕೇಳಿ ಸೂತರು ಹೇಳುವರು - ಎಲೈ ಮಹರ್ಷಿಗಳಿರಾ! ಪೂತ್ವದಲ್ಲಿ ಸಮುದ್ರನಿಗೆ ಪುತ್ರನಾದ ಜಲಂಧರನೆಂಬ ರಾಕ್ಷಸ ನೊಬ್ಬನಿದ್ದನು ದೇವಾಸುರ ಮನುಷ್ಯ ಸಹಿತವಾದ ಲೋಕತ್ರಯವೂ ಅದರಿಂದ ಬಾಧೆಪಡಿಸಲ್ಪ ಟ್ಟಿತು ||೨೦|| ಅನಂತರ, ಗಂಧರಾದಿಸಮೇತರಾದ ಸಮಸ್ತ ದೇವತೆಗಳೂ ಶ್ರೀಹರಿಯನ್ನು ಮರೆಹೊಕ್ಕು ಅಂಜಲಿಬಂಧಮಾಡಿಕೊಂಡು 'ಹೇ ಜಗತ್ಪತೇ! ಜಲಂಧರನೆಂಬ ರಾಕ್ಷಸನು ನಮ್ಮ ಸಂಪತ್ತನ್ನೆಲ್ಲ ಅಪಹರಿಸಿಬಿಟ್ಟಿರುವನು ನೀನು ಅವನನ್ನು ಕೊಂದು ನಮಗೆ ಅವನ ಭಯವನ್ನು ಬಿಡಿಸಬೇಕು, ಎಂಬುದಾಗಿ, ಆ ಜಲಂಧರನ ಭಯವನ್ನು ಶ್ರೀಹರಿಗೆ ಅರಿಕೆಮಾಡಿಕೊಂಡರು ||೨೧-೨೨||