ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಆರಣ್ಯಕಾಂಡಃ ಅಥ ಶ್ರೀಮದರಕಾ ದ್ವಿತೀಯ ಸರ್ಗಃ, ಶಿಶಿವಉವಾಚ - ಶರಭ ದಿನ ಯಾತೇ ಮುನಿಸಚ್ಛಾ ಸಮಾಗತಾಃ | ಅಭ್ಯಗಚ್ಚ ನ ಕಾಕುತ್ನಂ ರಾಮಂ ಜ್ವಲಿತತೇಜಸಮ್ ||೧|| ವೈಖಾನಸವಾಲಖಿಲ್ಯಾ ಸನ್ನ ಕ್ಲಾಳಾಮರೀಚಪಾಃ | ಅತ್ಮ ಕುಟ್ಟಾಕ್ಷ ಬಹನ, ಪತ್ರಾಹಾರಾಷ್ಟ್ರ ತಾಪಸಾಃ ||೨| ದನ್ನೊಲೂಖಲಿನಕ್ಷೆವ ತಥೈವೋನ್ಮಜ್ಞಕಾಃ ಪರೇ | ಗಾತಕಯ್ಯಾ ಅಶಯ್ಯಾ ತಥೈವಾಭಾವಕಾಶಕಾಃ ||೩! ಅರಣ್ಯಕಾಂಡದಲ್ಲಿ ಎರಡನೆಯ ಸರ್ಗವು ಆಅಅ ಶ್ರೀ ಪರಮೇಶ್ವರನು ಪಾರ್ವತೀದೇವಿಯನ್ನು ಕುರಿತು ಹೇಳುವನು .. ಎಲ್‌ ಪಾರ್ವತಿ ! ಪೂರ್ವೋಕ್ತರೀತಿಯಾಗಿ ಶರಭಂಗರುನಿಯು ಸ್ವರ್ಗಲೋಕವನ್ನು ಕುರಿತು ಪ್ರಯಾಣಮಾಡಿದ ಬಳಿಕ, ಆ ಅರಣ್ಯದಲ್ಲಿದ್ದ ಸಮಸ್ತ ಮುನಿಗಳೂ ಗುಂಪುಗೂಡಿದವ ರಾಗಿ, ಮಹಾ ಪ್ರಕಾಶಯುಕ್ತನಾಗಿರುವ ಕಕುಕುಲದೀಪನಾದ ಶ್ರೀರಾಮಚಂದ್ರನ ಸಮಾ ಪಕ್ಕೆ ಬಂದರು ||೧|| ಆ ಮುನಿಗಳಲ್ಲಿ, ಕೆಲವರು ಭಗವಂತನ ನಲದಿಂದ ಸಂಭವಿಸಿ ವೈವಾನಸರೆಂಬ ಹೆಸರುಳ್ಳ ವರಾಗಿಯೂ, ಕೆಲವರು ಅವನ ರೋಮದಿಂದ ಸಂಭವಿಸಿ ವಾಲಖಿಲ್ಯರೆಂಬ ಹೆಸರುಳ್ಳವರಾಗಿಯೂ, ಕೆಲವರು ಸರ್ವದಾ ಅವಿಚ್ಛಿನ್ನವಾಗಿ ತಮ್ಮ ಶರೀರವನ್ನು ತೊಳದುಕೂಳ್ಳುವರಾಗಿಯ, ಕೆಲ ವರು ಸೂರ್ಯಚಂದ್ರರ ಕಿರಣಗಳನ್ನು ಪಾನಮಾಡುವರಾಗಿಯೂ, ಕೆಲವರು ನಿರಂತರವಾಗಿ ತಮ್ಮ ದೇಹವನ್ನು ಕಲ್ಲುಗಳಿಂದ ಕುಟ್ಟಿ ಕೊಳ್ಳತಕ್ಕವರಾಗಿಯೂ, ಇನ್ನೂ ಅನೇಕ ಮಂದಿ ತಾಪ ಸರು ಪತ್ರಾಹಾರರಾಗಿಯೂ ಇದ್ದರು ||೨|| ಮತ್ತು, ಕೆಲವರು ತಮ್ಮ ಹಲ್ಲುಗಳನ್ನೇ ಒರಳಕಲ್ಲಿನಂತೆ ಉಪಯೋಗಿಸಿಕೊಂಡು ಬತ್ತ ಮುಂತಾದುವುಗಳನ್ನು ಒರಳಿನಲ್ಲಿ ಕುಟ್ಟದೆ ಹಲ್ಲಿನಲ್ಲಿಯೆ ಬಿಡಿಸಿ ತಿನ್ನ ತಕ್ಕವರಾಗಿಯೂ, ಕೆಲವರು ತಲೆಯನ್ನು ಮಾತ್ರ ಎತ್ತಿ ಕೊಂಡು ಶರೀರವನ್ನೆಲ್ಲ ನೀರಿನಲ್ಲಿಯೇ ಮುಣುಗಿಸಿ ತಪಸ್ಸು ಮಾಡತಕ್ಕ ವರಾಗಿಯೂ, ಕೆಲವರು ತಮ್ಮ ಶರೀರವನ್ನೇ ಹಾಸಿಗೆಯಾಗಿ ಉಪಯೋಗಿಸತಕ್ಕವರಾಗಿಯೂ, ಕೆಲವರು ಯಾವಾಗಲೂ ಮಲಗದೆಯ ಇರತಕ್ಕವರಾಗಿಯೂ, ಕೆಲವರು ಸರ್ವದಾ ಆಕಾಶ ದಲ್ಲಿಯೇ ಇರತಕ್ಕವರಾಗಿಯೇ ಇದ್ದರು ||೩|| ಆಕಾಶ