Ak8 ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಚಿತ್ರಗುಪ್ತ ವಚು ಕುತಾ ಕಾಲದ ಧರೋ ರುಪಾ | ದಂ ಮುದ್ರಾಂ ಚ ಸಂಗೃಹ್ಯ ವೇಧಸೋಕಮಾಯಯೌ ||೩೨| ಪ್ರಣಮ್ಯ ಸತ್ಯಲೋಕಸ್ಟಂ ಚತುರಾನನಮಬ್ರವೀತ್ | ಭಗರ್ವ ದೇವದೇವೇಕ ಮಹಾಪಾತಕಿನಾಂ ವರಃ | ವಿದ್ಯಾಧರಃ ಕಥಂ ವಿಸ: ಸಾಯುಜ್ಯಂ ಮೋಕ್ಷವನ್ನ ಗಾತ್' ||೩೩| ಬ್ರಹೋವಾಚ ಧರರಾಜ ಪವಾಮಿ ವಿಸ್ತಸ್ಯ ಚರಿತಂ ಮಹತ್ | ಯಕ್ಷ ಸ್ಮರಣಮಾತ್ರೇಣ ಜೇವನ್ನು ಕೈ ನ ಸಂಶಯಃ ||೩೪: ಅಯಂ ಬ್ರಾಹ್ಮದಾಬಾದೋ ರಾಮನಾಮ ಸದಾsಸ್ಕರತ್ | ಸಹಸ್ರನಾಮಸದೃಶೋ ರಾಮನಾಮಾತ್ಯ ಕೆ ಮನುಃ ||೩೫|| ಕೋಟಿಯಜ್ಞಸಮೋ ರಾಮಚಂದ್ರಭಯಂ ಮನುಃ | ನಮೋನಕುಂತಿನಾ ಪ್ರೊ ವೇದಾನ್ತೇಷು ಯಥಾಕ್ರಮಮ್॥೩೬॥ ಹಿಗೆ ವಿಜ್ಞಾಪಿಸಿದ ಚಿತ್ರಗುಪ್ತನ ಮಾತನ್ನು ಕೇಳಿ, ಯಮಧಮ್ಮರಾಜನು ಮಹಾ ಕೋಪ ಸಮನ್ವಿತನಾಗಿ ಕೈಯಲ್ಲಿ ದಂಡವನ್ನೂ ಅಧಿಕಾರಮುದ್ರಯನ್ನೂ ಹಿಡಿದುಕೊಂಡು ಬ್ರಹ್ಮದೇವನ ಹತ್ತಿರಕ್ಕೆ ಬಂದನು ||೩೨|| ಆಗ ಸತ್ಯಲೋಕದಲ್ಲಿರುವ ಬ್ರಹ್ಮನಿಗೆ ನಮಸ್ಕರಿಸಿ “ಭಗವಂತನೆ' ಏಕ ದೇವಾಧಿಪತಿಯೆ! ಮಹಾಪಾತಕಿಗಳಲ್ಲೆಲ್ಲ ಮೊದಲನೆಯವನಾಗಿದ್ದ ವಿದ್ಯಾಧರನೆಂಬ ಬ್ರಾಹ್ಮಣನು ಸಾಯುಜ್ಯಮು ಕ್ರಿಯನ್ನು ಹೇಗೆ ಪಡೆದನು? ಇಂಧವನಿಗೆ ಸಾಯುಜ್ಯವನ್ನು ನೀನು ಕೊಟ್ಟಿರುವುದಕ್ಕೆ ಕಾರಣ ವೇನು? ಇಂತಹ ಅಧಿಕಾರದಿಂದ ನಾನೇನು ಮಾಡಿಕೊಳ್ಳಲಿ? ನಿನ್ನ ಮುದ್ರೆಯನ್ನೂ ದಂಡವನ್ನೂ ಈಗ ಒಪ್ಪಿಸಿಬಿಡುವೆನು' ಎಂದು ಹೇಳಿದನು ||೩೩|| ಇದನ್ನು ಕೇಳಿ ಬ್ರಹ್ಮನು ಸಮಾಧಾನಪಡಿಸುವನು - ಧರರಾಜ! ಆ ವಿದ್ಯಾಧರನೆಂಬ ಬೃಹ್ಮಣನ ಚರಿತ್ರೆಯ ಬಲು ದೊಡ್ಡದಾಗಿರುವುದು, ಅದನ್ನು ನಿನಗೆ ಹೇಳುವೆನು, ಕೇಳು ಅವನು ಕೇವಲ ನಾಮಸ್ಮರಣಮಾತ್ರದಿಂದಲೇ ಜೀವನ್ಮುಕ್ತಿ ಪಡೆದಿರುವನು, ಇದರಲ್ಲಿ ಸಂಶಯವಿಲ್ಲ ||೩೪|| ಈ ಬ್ರಾಹ್ಮಣಕುಲೋತ್ಪನ್ನನು, ಸತ್ವದಾ ರಾಮನಾಮವನ್ನು ಸ್ಮರಿಸುತಿದ್ದನು ಈ ರಾಮ ನಾಮವೆಂಬ ಮಂತ್ರವು ಸಹಸ್ರನಾಮಕ್ಕೆ ಸಮಾನವಾದುದು ||೩೫|| “ರಾಮ ರಾಮಚಂದ್ರ ರಾಮಭದ್ರ' ಎಂಬ ಮಂತ್ರಕ್ಕೆ ಕೊನೆಯಲ್ಲಿ 'ನಮಃ' ಎಂಬು ದನ್ನು ಸೇರಿಸಿ 'ರಾಮಾಯನಮಃ ರಾಮಚಾಯನಮಃ ರಾಮಭದ್ರಾಯನಮಃ' ಎಂದು ಕ್ರಮವಾಗಿ ಜಪಮಾಡಿದರೆ, ಕೊಟಿಯಜ್ಞಫಲವುಂಟಾಗುವುದೆಂದು ವೇದಾಂತಗಳಲ್ಲಿ ಉಕ್ತವಾ ಗಿರುವದು ||೩೬||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೯೪
ಗೋಚರ