ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ದತ್ಸಾ ವರಂ ಚಾಪಿ ತಪೋಧನಾನಂ ಧರ್ಮ ಧೃತಾತ್ಮಾ ಸಹ ಲಕ್ಷ್ಮಣನ| ತಪೋಧನೈಶ್ಚಾಪಿ ಸಭಾಜ್ಯ ಸಂವೃತಃ ಸುತೀಕ್ಷ್ಮಮೇವಾಭಿಜಗಾಮ ವೀರಃ ||೧೬|| ತತ್ರ ತಾಪಸಮಾಸೀನಂ ಮಲಪಬ್ಬಜಟಾಧರಮ್ || ಕೋಟಿಸೂರ್ಯಪ್ರಕಾಶಂ ಸುನ್ದರಾಬ್ಲಿಂ ಶುಚಿತಮ್ ||೧೬|| ಶ್ರೀರಾಮಮೇವ ಧ್ಯಾಯನ್ಯಂ ಸಸೀತಂ ಲಕ್ಷ್ಮಣಾನ್ನಿತಮ್ | ರಾಮಃ ಸುತೀಕ್ಷ್ಯ ವಿಧಿವತ ತಪೋವೃದ್ದಮಭಾಪತ ||೧vi ರಾಮೋಹಮಸ್ಮಿ ಭಗರ್ವ ಭವನ್ತಂ ದುಷ್ಟುವಾಗತಃ | ರಾಮವಾಗತನಾಜ್ಞಾಯ ಸುತೀಕ್ಷಃ ಸಹಸೋತ್ತಿತಃ || ೧೯|| ಅಗಸ್ಯಶಿಸ್ಕೋ ರಾಮಸ್ಯ ಮನೋಪಾಸನತತ್ಪರಃ | ಯಥಾ ಹೃದಬ್ಬೆ ಶ್ರೀರಾಮನಿತ್ಯಪೂಜಾಂ ಕರೋತ್ಕಲಮ್ ||೨೦|| ತಥಾಪರೋಕ್ಷಂ ತಂ ದೃಪ್ಲಾ ಪ್ರಸಾದಶ್ರವಣಂ ಮುನಿಃ | ಅಗಸ್ಟೋಕ್ಕೇನ ವಿಧಿನಾ ಕೃತಾರ್ಚಾ೦ ಪ್ರೋತುರ್ಮಾಭತ' !:೨೧: ಹಿಗೆ ಆ ತಪೋಧನರಿಗೆ ವರವನ್ನು ಕೊಟ್ಟು, ಕೇವಲ ಧರೆ ಕನಿಷ್ಠ ನಾಗಿರುವ ಮಹಾ ವೀರನಾದ ರಾಮಭದ್ರನು, ತನಗೆ ಪೂಜೆಯನ್ನು ಮಾಡಿದ ಆ ತಪೋಧನರಿಂದ ಪರಿವೃತನಾಗಿ, ಲಕ್ಷ್ಮಣನೊಡನೆ ಸುತೀಕ್ಷ್ಯಮುನಿಯ ಆಶ್ರಮಕ್ಕೆ ಹೋದನು ||೧೬|| ಅಲ್ಲಿ ಕೊಳೆಯಿಂದ ಮಲಿನವಾದ ಜಡೆಯನ್ನು ಧರಿಸಿರತಕ್ಕವನಾಗಿಯ ಸುಂದರ ಶರೀರ ನಾಗಿಯ-ನಿರ್ಮಲವಾದ ಮಂದಹಾಸವುಳ್ಳವನಾಗಿಯ ಸರ್ವದಾ ಸೀತಾಲಕ್ಷ್ಮಣಯುಕ್ತ ನಾದ ಶ್ರೀರಾಮಚಂದ್ರಮೂರ್ತಿಯನ್ನೇ ಧ್ಯಾನಿಸುತಿರುವನಾಗಿಯೂ ಇರುವ ತಪೋವೃದ್ಧ ನಾದ ಸುತೀಕ್ಷ್ಯಮುನಿಯನ್ನು ಯಧಾಧಿಯಾಗಿ ದರ್ಶನಮಾಡಿ, ಶ್ರೀರಾಮನು “ ಪೂಜ್ಯರೆ ! ನಾನು ರಾಮನು , ತಮ್ಮನ್ನು ನೋಡುವುದಕ್ಕಾಗಿ ಬಂದಿರುವೆನು' ಎಂದು ವಿಜ್ಞಾಪಿಸಿದನು ||೧೭-೧೮|| ಹೀಗೆ ಶ್ರೀರಾಮನು ಬಂದಿರುವುದನ್ನು ತಿಳಿದು, ಆಗಮುನಿಗೆ ಶಿಷ್ಯನಾದ ರಾಮೋ ಪಾಸನೆಯಲ್ಲಿ ನಿರತನಾಗಿರುವ ಆ ಸುತೀಕ್ಷ್ಯಮುನಿಯು, ತಟ್ಟನೆ ಎದ್ದವನಾಗಿ, ತಾನು ಪ್ರತಿ ದಿನವೂ ತನ್ನ ಹೃದಯ ಕಮಲದಲ್ಲಿ ಯಾವ ವಿಧವಾಗಿ ಶ್ರೀರಾಮಚಂದ್ರನನ್ನು ಧ್ಯಾನಿಸಿ ಪೂಜಿಸು ತಿರುವನೋ-ಹಾಗೆಯೇ ಈಗ ಅನುಗ್ರಹವಿಟ್ಟು ಎದುರಿಗೆ ಬಂದು ನಿಂತಿರುವ ಶ್ರೀರಾಮಚಂದ್ರ ನನ್ನು ಪ್ರತ್ಯಕ್ಷವಾಗಿ ನೋಡಿ, ತನಗೆ ಹಿಂದೆ ಅಗಸ್ಯಮುನಿಗಳು ಉಪದೇಶಿಸಿದ್ದ ವಿಧಿಯಿಂದ ಅವನಿಗೆ ಪೂಜೆಯನ್ನು ಮಾಡಿ, ಒಳಿಕ ಈ ರೀತಿಯಾಗಿ ಸ್ತೋತ್ರಮಾಡಲುಪಕ್ರಮಿ ಸಿದನು ||೧೯-೨೧||