ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ (ಸಗಳ ಮಣಿಕಣಕೇಯರಮುದಿಕಾಭಿರಂತಮ್ | ಪೀತಾಮೃಶಾನುಸನ್ನದ್ಧರತ್ನಧಾಮವಿಭೂಷಿತಮ್ ॥೨೬॥ ಪಾದಾಜಿ ದಾದಿಸನ್ನದ ಪದಯುಗ್ಯಂ ಪರಾತ್ಪರಮ್ || ದಿವ್ಯ ಚನ್ದನಲಿಪ್ತ ಪುಷ್ಪಮನ್ನರಮಾಲಿಕಮ್ ॥೨V ಸನಕಾದಿಮುನಿಸ್ತುತ್ಯ ದಿಕ್ಕಾಲಗಣಿಸೇವಿತಮ್ | ಬ್ರಹ್ಮಾದಿಮಕುಟೆಸ್ಸಷ್ಟಪಾದಪದ್ಮಂ ಮಹಾದ್ಯುತಿಮ್ ॥೨೯ ; ಏವಂ ಧ್ಯಾತ್ವಾ ತತಃ ಸರ್ವೈಃ ಉಪಚಾರೈಃ ಸಮರ್ತಯ ; ತತೋ ನಾಮ್ರಾಂ ಸಹಸ್ರೇಣ ಜಪಂ ಕುರು ಸಮಾಹಿತಃ ||೩೦|| ಇತ್ಯುಕೂಪದಿಕದಾಮಃ ಸಸ್ಯ ನಾಮ್ರಾಂ ಸಹಸ್ತಕಮ್ | ಸದೀಕ್ಷಾವಿಧಿ ಸಧ್ಯಾನಂ ಸನ್ಯಾಸಂ ಸರಹಸ್ಯಕಮ್ ||೩೧|| ಉಪದೇಶಮವಾಸ್ಥೆವಂ ಸಾಕಾದ್ರಾಮಮುಖಾಮ್ಯುಜಿತ್ | ಮೇನೇ ಕೃತಾರ್ಥಮಾತ್ಮಾನಂ ಸುಗ್ರೀವೋ ದೃಷ್ಟಮಾನಸಃ ॥ ೩೨| ಇತಿ ಶ್ರೀಮನ್ನಾ ಕಾಣೇ ಸುಗ್ರೀವಾಯ ರಾಮೇಣ ವಿಶ್ವರೂಪಪ್ರದರ್ಶನಂ ನಾಮ ತೃತೀಯಃ ಸರ್ಗಃ ಟದಿಂದ ಪ್ರಕಾಶಮಾನವಾಗಿರುವಂತೆಯ, ಮುಖದಲ್ಲಿ ಮಂದಹಾಸಮಾಡುತ ದೀರ್ಘಬಾಹು ವಾಗಿ ಕರ್ಣಾಂತವಿಸ್ಯತನಯನನಾಗಿರುವಂತೆಯೂ ಧ್ಯಾನಿಸು ||೨೬|| ರತ್ನ ಖಚಿತವಾದ ಕಟಕ ಆಂಗದ ಮುದ್ರಿಕೆ (ಉಂಗುರ) ಗಳಿಂದ ಅಲಂಕೃತನಾಗಿಯ, ಪೀತಾಂಬರವನ್ನುಟ್ಟು ಕೊಂಡು ಅದರಮೇಲೆ ರತ್ನಗಳನ್ನು ಪವಣಿಸಿ ಮಾಡಿರುವ ರಶನೆ(ಉಡಿದಾರ) ಯನ್ನು ಕಟ್ಟಿ ಕೊಂಡೂ ಇರುವಂತೆ ನನ್ನನ್ನು ಧ್ಯಾನಿಸು ||೨೭|| ನೂಪುರ(ಕಾಲು ಸರ)ಗಳಿಂದ ವಿರಾಜಮಾನವಾದ ಪಾದಯುಗ್ಯವುಳ್ಳವನಾಗಿಯ, ದಿವ್ಯ ಚಂದನವನ್ನು ಶರೀರದಲ್ಲೆ ಲೇಪಿಸಿಕೊಂಡವನಾಗಿಯ, ಮಂದಾರಪ್ಪ ಮಾಲಿಕೆಯನ್ನು ಧರಿಸಿದವನಾಗಿಯೂ ಇರುವಂತೆ, ಪರಾತ್ಪರನಾದ ನನ್ನನ್ನು ಧ್ಯಾನಿಸುವನಾಗು || ೨೦ || - ಸನಕಾದಿಮುನಿಗಳು ನನ್ನನ್ನು ಸ್ತುತಿಸುತಿರುವಂತೆಯೂ, ದಿಕ್ಕಾಲಸಮೂಹವೂ ಸೇವಿಸು ತಿರುವಂತೆಯ, ಬ್ರಹ್ಮಾದಿ ದೇವತೆಗಳು ತಮ್ಮ ಕಿರೀಟಗಳಿಂದ ನನ್ನ ಪಾದಪದ್ಮಗಳನ್ನು ಸ್ಪರ್ಶಿ ಸುತಿರುವಂತೆಯ ಧ್ಯಾನಿಸು ||೨೯||

  • ಈರೀತಿಯಾಗಿ ಧ್ಯಾನಮಾಡಿ, ಬಳಿಕ ಸಕಲೋಪಚಾರಗಳಿಂದ ನನ್ನನ್ನು ಪೂಜಿಸು. ಆಮೇಲೆ ಸ್ಥಿರಚಿತ್ತನಾಗಿ ನನ್ನ ಸಹಸ್ರನಾಮದಿಂದ ಜಪಮಾಡುವನಾಗು (ಎಂದು ಶ್ರೀರಾಮನು ಸುಗ್ರೀವನಿಗೆ ಹೇಳಿದನು) ||೩೦||

' ಹೀಗೆಂದು ಹೇಳಿ, ಬಳಿಕ ಆ ಸುಗ್ರೀವನಿಗೆ ದೀಕ್ಷಾವಿಧಿ ಧ್ಯಾನ ನ್ಯಾಸ ರಹಸ್ಯಗಳೊಡನೆ ತನ್ನ ಸಹಸ್ರನಾಮವನ್ನು ಪ್ರವೇಶಿಸಿದನು ||೩||

  • ಈರೀತಿಯಾಗಿ ಶ್ರೀರಾಮನ ಮುಖಕಮಲದಿಂದಸೇ ಉಪದೇಶವನ್ನು ಹೊಂದಿ, ಆನಂದಿತ ಹೃದಯನಾದ ಸುಗ್ರೀವನು, ಆಗ ತಾನು ಕೃತಾರ್ಧನಾದೆನೆಂದು ತಿಳಿದುಕೊಂಡನು ||೩೨|| ಇದು ಕಿಂಧಾಕಾಂಡದಲ್ಲಿ ಸುಗ್ರೀವನಿಗೆ ಶ್ರೀರಾಮನು ಎಶ್ವರೂಪಪ್ರದರ್ಶನ ಮಾಡಿಸಿದ

ನಂಒಳಗೆ ಮೂರನೆಯ ಸರ್ಗವು.