ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ ಅರಣ್ಯಕಾಂಡ ಜಾನನ್ನು ರಾಮ ತವ ರೂಪಮಶೇಪದೇಶ ಕಾಲಾದ್ಯುಪಾಧಿರಹಿತ ಫನಚಿತ್ರ ಕಾಶಮ್ | ಪ್ರತ್ಯಕ್ಷತೋದ್ಯ ಮತ್ತು ಗೋಚರಮೇತದೇವ ರೂಪಂ ವಿಭಾತು ಹೃದಯೇ ನ ಪರಂ ವಿಕಾಂಕ್ಷೆ ||೨೯|| ಇತ್ಯೇವಂ ಸ್ತು ವತಸ್ತಸ್ಯ ರಾಮಃ ಸನ್ನಿ ತಮಬ್ರವೀತ್ | ಮುನೇ ಜಾನಾಮಿ ತೇ ಚಿತ್ತಂ ನಿರ್ಮಲಂ ಮದುಪಾಸನಾತ್ ||೩೦|| ಮನ್ಮನೊಪಾಸಕಾಲೋಕೇ ವಾಮೇವ ಶರಣಂ ಗತಾಃ | ನಿರಪೇಕ್ಷಾನನ್ಯಗತಾಃ ತೇಷಾಂ ದೃಶೂಹವನ್ನಹನು ||೩೧|| ತ್ವಂ ಮಮೋಪಾಸನಾದೇವ ವಿಮುನೀಹ ಸರ್ವತ | ದೇಹಾನೈ ಮನ ಸಾಯುಜ್ಯಂ ಲಸ್ಸಸೇ ನಾತ್ರ ಸಂಶಯಃ ||೩೨|| ಇತಿ ದತ್ವಾ ವರಂ ರಾಮಃ ಸುತೀಕ್ಷಾಯ ಮಹಾತ್ಮನೇ | ತದ್ಧಕ್ಕಿಯನ್ನಿತೋವಾ' ಕಂಚಿತ್ ಕಾಲಂ ತದಾಶಮೇ ||೩೭|| ಹೇ ರಾಘವ ! ತತ್ವಜ್ಞಾನಶಾಲಿಗಳಾದವರು, ನಿನ್ನ ರೂಪವನ್ನು, ಸಕಲವಾದ ದೇಶ ಕಾಲಾದ್ಯುಪಾಧಿಗಳಿಂದ ಶೂನ್ಯವನ್ನಾಗಿಯೂ, ಕೇವಲ ಚಿನವನ್ನಾಗಿಯೂ ತಿಳಿದುಕೊಳ್ಳಲಿ ನನಗಾದರೋ, ಈಗ ಪ್ರತ್ಯಕ್ಷವಾಗಿರುವ ಈ ನಿನ್ನ ರೂಪವೇ ಸರೈದಾ ಹೃದಯದಲ್ಲಿ ಸ್ಪುರಿಸು ತಿರಲಿ , ಇದುಹೂರತು ನಾನು ಮತ್ತಾವುದನ್ನೂ ಅಪೇಕ್ಷಿಸುವುದಿಲ್ಲ ||೨೯|| ಹೀಗೆಂದು ಸ್ತೋತ್ರಮಾಡುತಿರುವ ಆ ಸುತೀಕ್ಷ್ಯನನ್ನು ಕುರಿತು, ಶ್ರೀರಾಮನು ಮಂದ ಹಾಸಯುಕ್ತನಾಗಿ * ಎಲೈ ಮುನಿಯ ' ನಿನ್ನ ಚಿತ್ತವು ನನ್ನ ಉಪಾಸನೆಯಿಂದ ನಿರ್ಮಲವಾಗಿ ರುವುದನ್ನು ನಾನು ಬಲ್ಲೆನು ಯಾರು ಈ ಲೋಕದಲ್ಲಿ ನನ್ನ ಮಂತ್ರವನ್ನು ಉಪಾಸಿಸುತ ನನ್ನನ್ನೇ ಮರೆಹೊಕ್ಕು ನಿರಪೇಕ್ಷರಾಗಿ ಅನನ್ಯ ಶರಣರಾಗಿರುವರೋ, ಅವರಿಗೆ ನಾನು ಸದಾ ಪ್ರತ್ಯಕ್ಷನಾಗಿರುವೆನು ನೀನು ನನ್ನ ಉಪಾಸನೆಯಿಂದಲೇ ಈ ಲೋಕದಲ್ಲಿ ಸಕಲ ಪಾಶದಿಂದ ಮುಕ್ತನಾಗಿರುವೆ , ಈ ದೇಹ ದ ಕೊನೆಯಲ್ಲಿ ನನ್ನ ಸಾಯುಜ್ಯವನ್ನೂ ಪಡೆಯುವೆ ಇದರಲ್ಲಿ ಸಂಶಯವಿಲ್ಲ' ಎಂದು ಅನುಗ್ರಹಿಸಿದನು || ೩೦ ೩೨|| ಎಲ್‌ ಪಾರ್ವತಿ ! ಈರೀತಿಯಾಗಿ ಶ್ರೀರಾಮನು ಮಹಾತ್ಮನಾದ ಸುತೀಕ್ಷ್ಯನಿಗೆ ವರಪ್ಪ ದಾನಮಾಡಿ, ಅವನ ಭಕ್ತಿಗೆ ಪರವಶನಾಗಿ, ಸ್ವಲ್ಪ ಕಾಲ ಅವನ ಆಶ್ರಮದಲ್ಲಿಯೇ ವಾಸಮಾಡಿ ಕೊಂಡಿದ್ದನು || ೩೩|| M