ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ಅರಣ್ಯ ಕಾಂಡಃ ಅಥ ಶ್ರೀಮದರಕಾ ತೃತೀಯಃ ಸರ್ಗಃ ಶ್ರೀಸೂತಉವಾಚ ಏವಮುಕ್ಕೊ ಗಿರಿಜಯಾ ಲೋಕಾನುಗ್ರಹಕಾವ್ಯಯಾ || ತದಾ ಸದಾಶಿವಃ ಪ್ರತ್ಯಾ ಜಗಾದೇದಂ ವಚಃ ಶುಭಮ್ ||೧|| ಶ್ರೀ ಶಿವಉವಾಚ ರಾಮಪೂಜಾವಿಧಾನಸ್ಯ ನಾನ್ನೊ ಶುಭದರ್ಶನೇ | ಋವಿಭಿರ್ಬಹುಧೋಕ ತ್ಯಾತ್ ವೇದೈಕ ವಿವಿಧೈಸ್ತಥಾ ||೨|| ತಥಾಪಿ ವಕ್ಷೆ ರಾಮಸ್ಯ ಪೂಜಾವಿಧಿಯನುತ್ತಮವು | ಯಸ್ಯ ಸ್ಮರಣಮಾತ್ರೇಣ ತಾಜಾಫಲಭಾಗ್ಯವೇತ್ ||೩|| ಸ್ವಗೃಹ್ಮಕ ವಿಧಾನೇನ ಬೃಹತ್ಸಂ ಪ್ರಾಸ್ಯ ಮಾನವಃ | ಸಕಾರಾತ' ಸದ್ದು ರೋರ್ಮಗ್ರಂಲಬ್ಬಾ ತದ್ಭಕ್ತಿಸಂಯುತಃ | ತೇನ ಸಂದರ್ಶಿತವಿಧಿಃ ತತೋ ರಾಮಂ ಸಮರ್ಪಯೇತ್ ||೪|| ಅರಣ್ಯಕಾಂಡದಲ್ಲಿ ಮೂರನೆಯ ಸರ್ಗವು. - ಶ್ರೀಸೂತಪೌರಾಣಿಕರು ಶೌನಕಾದಿಖುಷಿಗಳನ್ನು ಕುರಿತು ಹೇಳುವರು - ಎಲೈ ಶೌನಕಾದಿಖುಷಿಗಳಿರಾ ! ಈ ರೀತಿಯಾಗಿ ಲೋಕಾನುಗ್ರಹದಲ್ಲಿ ಅಪೇಕ್ಷೆಯಿಟ್ಟು ಶ್ರೀಪಾರ್ವತಿಯಿಂದ ಪ್ರಾರ್ಥಿಸಲ್ಪಟ್ಟ ಪರಮೇಶ್ವರನು, ಆಗ ಪ್ರೀತಿಯಿಂದ ಸರ್ವಲೋಕಹಿತ ವಾದ ಈ ಮಾತನ್ನು ಹೇಳಿದನು ||೧|| ಶ್ರೀಪರಮೇಶ್ವರನು ಹೇಳಿದುದೇನೆಂದರೆ - ಎಲೌ ಶುಭದರ್ಶನೆಯೆ ! ಶ್ರೀರಾಮಪೂಜಾವಿಧಿಯನ್ನು ಋಷಿಗಳೂ ನಾನಾವಿಧ ವೇದ ಗಳೂ ಅನೇಕ ವಿಧವಾಗಿ ಹೇಳಿರುವುದರಿಂದ, ಇದಕ್ಕೆ ಕೊನೆಯೇ ಇಲ್ಲ ||೨|| ಆದರೂ, ಸರ್ವೋತ್ತಮವಾಗಿರುವ ಶ್ರೀರಾಮಪೂಜಾವಿಧಿಯನ್ನು ನಿನಗೆ ಹೇಳುವೆನು. ಇದನ್ನು ಸ್ಮರಿಸಿದಮಾತ್ರದಿಂದಲೇ, ಪುರುಷನು ಶ್ರೀರಾಮನ ಪೂಜೆಯನ್ನು ಮಾಡಿದ ಫಲಕ್ಕೆ ಪಾತ್ರನಾಗುವನು ||೩|| ಆ ಪೂಜಾವಿಧಿಯಾವುದೆಂದರೆ ಮನುಷ್ಯನು, ತನ್ನ ಗೃಹ್ಯ ಸೂತ್ರದಲ್ಲಿ ಉಕ್ತವಾದ ವಿಧಿ ಯಿಂದ ಉಪನಯನ ಪೂರ್ವಕವಾಗಿ ದ್ವಿಜತ್ವವನ್ನು ಪಡೆದು, ಸದ್ಗುರುವಿನ ಮುಖದಿಂದ ಶ್ರೀರಾಮಮಂತ್ರವನ್ನು ಉಪದೇಶತೆಗೆದು ಕೊಂಡು, ಆ ಗುರುವಿನಲ್ಲಿ ಭಕ್ತಿಯಿಟ್ಟು, ಅವನಿಂದ ರಾಮಪೂಜಾವಿಧಿಯನ್ನೆಲ್ಲ ತಿಳಿದುಕೊಂಡು, ಬಳಿಕ ಶ್ರೀರಾಮಚಂದ್ರನನ್ನು ಪೂಜಿಸಬೇಕು ||೪||