ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆ. ಶ್ರೀ ತತ್ವ ಸಂಗ್ರಹ ಕಾಮಾಯಣಂ ಹೃದಯೇ ಸ್ಥಲೇ ವಾರ್ಕೆ ಪ್ರತಿಮಾದೌ ವಿಭಾವಸ || ಸಾಲಗ್ರಾಮಶಿಲಾಯಾಂ ವಾ ಪೂಜಯೇತ್ ತಮತತಃ || ೫!! ಪ್ರಾತಃ ಸ್ನಾನಂ ಪ್ರಕುರ್ವೀತ ಪಥಮಂ ದೇಹಶುದ್ಧಯೇ | ವೇದತನ್ನೋದಿನೈರ್ಮತಿ ಮೃಲ್ಲೇಪನವಿಧಾನತಃ ||೬|| ಸನ್ನಾದಿಕರ್ಮ ಯನ್ನಿತ್ಯಂ ತತ್ ಕುರ್ಯಾದಿಧಿನಾ ಬುಧಃ ಆದೌ ಧ್ಯಾನಂ ಪ್ರಕುರ್ವೀತ ಮನಶ್ಯುದ್ಧಿಕರಂ ಪರಮ್ ||೭|| ಅಯೋಧ್ಯಾನಗರೇ ರಮ್ಯ ರತ್ನಮ ಪಮಧ್ಯಗಮ್ | ಧ್ಯಾಯೇತ್ ಕಲ್ಪತರೋರ್ಮ ಲೇ ರತ್ನಸಿಂಹಾಸನಂ ಶುಭಮ್ || ತನ್ಮಧೈಷ್ಟದಳ ಪದ್ಮಂ ನಾನಾರತ್ನಪ್ರವೇಷ್ಟಿತಮ್ | ತತ್ರ ಶ್ರೀರಾಮಚನ್ಯಾಖ್ಯಂ ಧ್ಯಾಯೇತ್ ತೇಜಃ ಪರಾತ್ಪರಮ್ || ಪಕೃತ್ಯಾ ಗೀತಾ ಶ್ಯಾಮಂ ಸ್ಥಿತ್ಯುತ್ಪತ್ತಿ ವ್ಯಯಾವಹವು | ದೇವಾಸುರಮುನೀ ಕ್ಷ ಯೋಗಿವೃಕ್ಷ ಸೇವಿತಮ್ ೧೦| ಹೃದಯದಲ್ಲಾಗಲಿ, ಅಧಪಾ ಸ್ಥಂಡಿಲದಲ್ಲಾಗಲಿ, ಅಥವಾ ಸೂರಿನಲ್ಲಿಯಾಗಲಿ, ಅಧವಾ ವಿಗ್ರಹದಲ್ಲಿಯಾಗಲಿ, ಅಥವಾ ಅಗ್ನಿ ಯಲ್ಲಾಗಲಿ, ಇಲ್ಲದಿದ್ದರೆ ಸುಲಗ್ರಾಮಶಿಲೆಯಲ್ಲಾ ಗಲಿ, ಆ ಶ್ರೀರಾಮಚಂದ್ರನನ್ನು ಭಕ್ತಿ ಪುರಸ್ಸರವಾಗಿ ಆಲಸ್ಯವಿಲ್ಲದೆ ಪೂಜಿಸಬೇಕು |||| ಪೂಜೆಯನ್ನು ಮಾಡತಕ್ಕವನು, ಮೊದಲು ದೇಹಶುದ್ದಿ ಗೊಸ್ಕರವಾಗಿ, ವೇದೋಕ್ತ ಮಂತ್ರಗಳಿಂದಲೂ ಪುರಾಣೋಕ್ತ ಮಂತ್ರಗಳಿಂದಲೂ ಮೃತ್ತಿಕಾಲೇಪನ ನಿಧಿಯಿಂದ ಪ್ರಾತಃ ಕಾಲದಲ್ಲಿ ಸ್ನಾನವನ್ನು ಆಚರಿಸಬೇಕು ||೬|| ಬಳಿಕ, ಸಂಧ್ಯಾವಂದನೆ ಮೊದಲಾದ ನಿತ್ಯಕರ್ಮವಾವುದುಂಟೋ- ಅದೆಲ್ಲವನ್ನೂ ಯಧಾ ವಿಧಿಯಾಗಿ ಮಾಡಬೇಕು , ಆ ಮೇಲೆ ಪ್ರಧವತಃ ಮನಸ್ಸು ದಿಯುಂಟಾಗುವಂತೆ ಉತ್ತಮ ವಾದ ಧ್ಯಾನವನ್ನು ಮಾಡಬೇಕು 11-11 ಆ ಧ್ಯಾನಕ್ರಮ ಹೇಗೆಂದರೆ, ದಿವ್ಯವಾದ ಅಯೋಧ್ಯಾ ಪಟ್ಟಣದಲ್ಲಿ ಕಲ್ಪವೃಕ್ಷದ ಕೆಳಗೆ ರತ್ನ ಮಂಚದ ಮಧ್ಯದಲ್ಲಿ ದಿವ್ಯವಾದ ರತ್ನ ಸಿಂಹಾಸನವನ್ನು ಧ್ಯಾನಿಸಬೇಕು ||೮|| ಅದರ ಮಧ್ಯದಲ್ಲಿ ನಾನಾರತ್ನ ಪರಿವೇಷ್ಟಿತವಾಗಿರುವ ಅಷ್ಟದಳಪದ ವನ್ನೂ, ಅದರ ಮದ್ಯದಲ್ಲಿ ಶ್ರೀರಾಮಚಂದ್ರನೆಂಬ ಪರಾತ್ಪರವಾದ ತೇಜಸ್ಸನ್ನೂ ಧ್ಯಾನಿಸಬೇಕು ||೯|| ಆ ತೇಜಸ್ಸು ಪಾರ್ಶದಲ್ಲಿರುವ ಮಲಪ್ರಕೃತಿಯಾದ ಸೀತಾದೇವಿಯಿಂದ ಶ್ಯಾಮಲವರ್ಣ ವಾಗಿರುವಂತೆಯ, ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣವಾಗಿರುವಂತೆಯ, ದೇವಾಸುರಮುನಿ ಗಳಿಗಳಿಂದಲೂ ಯೋಗಿವರ್ಯರಿಂದಲೂ ಸೇವಿಸಲ್ಪಡುತಿರುವಂತೆಯೂ ಧ್ಯಾನಿಸಬೇಕು ||೧೦||