*೬ ಶ್ರೀ ತತ್ವ ಸಂಗ್ರಹ ರಾಮಾಯಣ fಸರ್ಗ ದ್ದವಾದ ನಿತ್ಯ ವಿಭೂತಿಯುಳ್ಳವನು ೯೮೭ ನಾರಾಯಣಃ ನಾರಾಯಣಾವತಾರಮಾಡಿದ ವನು ೯೮೮, ಸ್ವಾಮೀ ಸಮಸ್ತ ಪ್ರಪಂಚವೂ ತನ್ನದಾಗಿ ಉಳ್ಳವನು, ೯೮೯ ಜಗತಾಂ ಪ್ರಭುಃ ಸಮಸ್ತ ಜಗತ್ತುಗಳಿಗೂ ಪ್ರಭುವು ೯೯೦. ಈಶ್ವರಃ ಸಮಸ್ತ ಜಗತ್ತನ್ನೂ ತನ್ನ ಇಚ್ಛಾನುಸಾ ರವಾಗಿ ಮಾಡಲು ಸಮರ್ಧನಾದವನು ||೧೨೮|| (1) ಕೃಪೈವ ಪೀಯೂಷಮ್, ತಸ್ಯ ಜಲಧಿಃ ಮ|| ಅನನ್ತಃ ಶ್ರೀಪತೀರಾಮೋ ಗುಣಕೃನ್ನಿರ್ಗುಣೋ ಮರ್ಹಾ | ಶ್ರೀದಃ ಶರಣ್ಯ ಭಗರ್ವಾ ಸಂಸ್ತುತಾಭೀಷ್ಟದಾಯಕಃ | ೧೨೯| ೯೯೧ ಅನನ್ತಃ ಅನಂತರೂಪನಾದವನು ೯೯೨ ಶ್ರೀಪತಿಃ (1) ಲಕ್ಷ್ಮಿದೇವಿಗೆ ಪತಿ ಯಾದವನು. ಅಧವಾ, ಸಮಸ್ತರ ಜ್ಞಾನೈಶ್ವರವನ್ನೂ ಕಾಪಾಡತಕ್ಕವನು ೯೯೩ ರಾಮಃ () ಸಮಸ್ತರನ್ನೂ ಆನಂದಪಡಿಸತಕ್ಕವನು, ೯೯೪ ಗುಣಧೃತ () ಸಕಲಸದ್ಗುಣಗಳನ್ನೂ ಧರಿಸಿರತಕ್ಕವನು ಅಧವಾ, ಮಾಯಪಾಧಿಯಿಂದ ಸತ್ವ ರಜಸ್ತಮೋಗುಣಗಳನ್ನು ಧರಿಸತಕ್ಕ ವನು ೯೯೫ ನಿರ್ಗುಣ ವಸ್ತುತಃ ಯಾವ ಗುಣವೂ ತನ್ನಲ್ಲಿ ಇಲ್ಲದವನು ಅದವಾ ದುರ್ಗು ಇಶನ್ನನಾದವನು ೯೯೬ ಮರ್ಹಾ (4) ಸಮಸ್ಯರಿಂದಲೂ ಪೂಜಿಸಲ್ಪಡತಕ್ಕವನು ಅಧವಾ, ಮಹತ್ಯೆಂಬ ತತ್ವಸ್ವರೂಪನು « ೯೭ ಶ್ರೀದಃ (5) ಸಮಸ್ಯರಿಗ ಜ್ಞಾನಸಂಪತ್ತನ್ನು ಕೊಡತಕ ವನು, ೧೯೮ ಶರಣ 8 ಸಮಸ್ತರಿಗೂ ಗತಿಯಾದವನು ೯೯೯ ಭಗವಾ೯ ಲೋಕೋತ್ತರ ವಾದ ಮಾಹಾತ್ಮವುಳ್ಳವನು ೧೦೦೦ ಸಂಸ್ತುತಾಭೀಷ್ಟದಾಯಕಃ (6) ಸ್ತುತಿಸಲ್ಪಟ್ಟವ ನಾಗಿ ತನ್ನನ್ನು ಸ್ತುತಿಸಿದ ರಿಗಲ್ಲ ಅವರವರ ಇಷ್ಟಾರ್ಧಗಳನ್ನು ಕೊಡತಕ್ಕವನು ||೧೨೯|| (1) ಶ್ರೀಯುಃ ಪತಿಃ (2) ರಮಯತಿ ಇತಿ ರಾಮಃ (4) ಗುಣಾ೯ ಬೆಭರ್ತಿ ಇತಿ ಗುಣವೃತ್ (4) ಮಹನಿ, ಇಮಂ ಇತಿ ಮಣೆ ೯ ಮಹ ಪೂಜಾಯಾಮ (1) ಶ್ರೀ ಯಂ ದದಾತಿ ಇತಿ ಶ್ರೀದಃ (0) ಅಭೀಷ್ಟಂ ದದಾತಿ ಇತಿ ಅಭಿಷ್ಟದಾಯಕಃ, ಸಂಸ್ತು ತತ್ಸಾಸ್ ಅಭೀಷ್ಟದಾಯಕಶ್ಚ - + ಇಲ್ಲಿಗೆ ಸಹಸ್ರ ನಾಮ ಸ್ತೋತ್ರವು ಪರಿಪೂರ್ಣವಾಯ್ತು ಇಲ್ಲಿ ಒಂದು ವಿಶೇಷವುಂಟು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಪಕ್ರಮ ಪದಕ್ಕೂ ಉಪಸಂಹಾರಪದಕ್ಕೂ ಆನುರೂಪ್ಯವಿರಬೇಕೆಂದು ಅಭಿಯುಕ್ತರು ಅಭಿಪ್ರಾಯ ಪಟ್ಟಿರುವರು ಈ ರಾಮಸಹಸ್ರನಾಮ ಸ್ತುತಿಯಲ್ಲಿ ಪ್ರಾಥಮಿಕವಾದ “ರಾಮಃ' ಎಂಬ ಪದವನ್ನೂ ಅಂತಿಮವಾದ * ಸಂಸ್ತುತಾಭೀಷ್ಟದಾಯಕಃ ' ಎಂಬ ಪದವನ್ನೂ ಸೇರಿಸಿದರೆ : ರಾಮಃ ಸಂಸ್ತುತಾಭೀಷ್ಟದಾಯಕಃ ' ಎಂದು ಆಗು ವುದು ಅಂತು, ಶ್ರೀರಾಮನು ಸ್ತುತಿಸಲ್ಪಟ್ಟು ಸಕಲರಿಗೂ ಅವರವರ ಇಷ್ಟಾರ್ಥಗಳನ್ನು ಕೊಡತಕ್ಕವನೆಂಬ ಬಹು ಗಂಭೀರವಾದ ಅತ್ಯಮೂಲ್ಯವಾದ ಅರ್ಥವು ಉಪದೇಶಿಸಲ್ಪಟ್ಟಂತಾಗುವುದು ಶ್ರೀ ಶಿವಉವಾಚ ಮ! ಏಕತ್ ತೇ ಕಥಿತಂ ದೇವಿ ರಾಮನಾಮಸಹಸ್ತಕಮ್ | ಗುಹ್ಯಾದ್ದು ಹೃತಮಂ ಪ್ರಣ್ಯಂ ನ ವಾಚ್ಯಂ ಯಸ್ಯಕಸ್ಯಚಿತ || ೧೩೦|| ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು ಎಲ್ ಪಾರ್ವತಿ! ಇದೋ ಈರೀತಿಯಾಗಿ ನಿನಗೆ ಶ್ರೀರಾಮಸಹಸ್ರವನ್ನು ಹೇಳಿರುವೆನು. ಇದು ರಹಸ್ಯಗಳಲ್ಲೆಲ್ಲ ಅತಿ ರಹಸ್ಯವಾದುದು , ಮಹಾ ಪಾವನವಾದುದು. ಸಾಮಾನ್ಯವಾಗಿ ದಾರಹಿತನಾದ ಯಾವನೊಬ್ಬನಿಗೂ ಇದನ್ನು ಹೇಳಬಾರದು ||೧೦||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೦೦
ಗೋಚರ