ಕಿಂಧಾಕಾಂಡ ಅಥ ಶ್ರೀಮನ್ನಾಕಾಣ್ ಪಹ್ಮ ಸರ್ಗಃ,
- * ಶ್ರೀ ಶಿವ ಉವಾಚ
ನಿಹತಂ ವಾಲಿನಂ ಶ್ರುತ್ತಾ ತಾರಾ ದುಃಖಸಮನ್ವಿತಾ | ಯಯ್ ಸಾ ಪತಿಶೋಕಾರ್ತಾ ಯತ್ರ ಭರ್ತೃಕಳೇಬರಮ್ ||p|| | ಪತಿತಂ ವಾಲಿನಂ ದೃಪ್ಲಾ ಭೂಮೌ ಪಾಂಸುಭಿರಾವೃತಮ್ || ರುದ ನಾಧನಾಥೇತಿ ಪತಿತಾ ತಸ್ಯ ಪಾದಯೋಃ ||೨|| ತಾಂ ಚಾರುನೇತ್ರಾ ಕಸಿನಿಂಹಪತ್ನಿ ಪತಿಂ ಸಮಾ ತಥಾ ಶಯಾನಾಮ | ಉತ್ಪಾಪಯಾಮಾಸುರದೀನಸಾ ಮಂತ್ರಿ ಪ್ರಧಾನಾಃ ಕಪಿವೀರಪಟ್ನಮ್ |೩| ಸಾ ವಿಸ್ಸುರ ಪರಿರಭ್ಯಮಾಣಾ ಭರ್ತು ಸಕಾಶಾದಪನೀಯಮಾನಾ | ರಾಮಂ ಸಮಾಸಾದ್ಯ ವಿಶುದ್ಧ ಸತ್ವಂ ಶೋಕೇನ ಸಂಭ್ರಾಂತಶರೀರಭಾವಾ || ಮನಸ್ಸಿನೀ ವಾಕ್ಯಮುವಾಚ ತಾರಾ ರಾಮಂ ರಣೋತ್ಕರ್ಷಣಲಬ್ಧ ಲಕ್ಷಮ್ ||೪|| ಕಿಂಧಾಕಾಂಡದಲ್ಲಿ ಆರನೆಯ ಸರ್ಗವ. ಪುನಃ ಶ್ರೀ ಪರಮೇಶ್ವರನು ಪಾಶ್ವತೀದೇವಿಯನ್ನು ಕುರಿತು ಹೇಳುವನು - ಎಲ್ ಪಾಶ್ವತಿ ! ಆ ಒಳಿಕ, ವಾಲಿಯು ರಾಮಚಂದ್ರನಿಂದ ಹತನಾದುದನ್ನು ಕೇಳಿ, ಮಹಾ ದುಃಖಯುಕ್ತಳಾದ ತಾರೆಯು, ಪತಿಶೋಕ ಪೀಡಿತಳಾಗಿ, ತನ್ನ ಪತಿಯ ದೇಹವಿರುವ ಬಳಿಗೆ ಬಂದಳು ||೧|| ಅಲ್ಲಿ, ಧೂಳಿಯಿಂದ ಮಲಿನನಾಗಿ ಭೂಮಿಯ ಮೇಲೆ ಬಿದ್ದಿರುವ ವಾಲಿಯನ್ನು ಕಂಡು * ಹಾ ನಾಧ | ನಾಧ !! ” ಎಂದು ಅಳುತ, ಅವನ ಕಾಲುಗಳ ಮೇಲೆ ಬಿದ್ದು ಬಿಟ್ಟಳು |೨|| ಆಗ ಹಾಗೆ ತನ್ನ ಪತಿ ಕಳೇಬರವನ್ನು ತಬ್ಬಿಕೊಂಡು ಭೂಮಿಯ ಮೇಲೆ ಬಿದ್ದು ಹೊರಳು ತಿರುವ ತಾರೆಯನ್ನು ಕಂಡು, ಮಹಾಸತ್ವ ಸಂಪನ್ನರಾದ ಮುಖ್ಯಮಂತ್ರಿಗಳು ಅವಳನ್ನು ಮೇಲಕ್ಕೆ ಎಬ್ಬಿಸಿದರು ||೩|| ಹೀಗೆ ಪತಿಯ ದೇಹವನ್ನು ಕಟ್ಟಿಕೊಂಡು ಹೊರಳುತಿರುವಾಗ ಮಂತ್ರಿ ಮೊದಲಾದವರು ಪತಿಯ ಸಮೀಪದಿಂದ ಈಚೆಗೆ ತನ್ನನ್ನು ಕರೆದುಕೊಂಡು ಬಂದ ಬಳಿಕ, ಮನಸ್ವಿನಿಯಾದ ಆ ತಾರೆಯು, ಶೋಕದಿಂದ ದೇಹವೆಲ್ಲವೂ ನಡುಗುತ-ಮನಸ್ಸಿನಲ್ಲಿಯೂ ಉದ್ವಿಗ್ನಳಾಗಿ, ರಣ ವಿಜಯ ವಿಚಕ್ಷಣನಾದ ಶ್ರೀರಾಮನನ್ನು ಕುರಿತು ಹೀಗೆ ಹೇಳಿದಳು ||೪||