ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fಸರ್ಗ ೧೩೦ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಸುಖದುಃಖಾದಿಸಂಬದ್ಧಃ ಕಸ್ಯ ಸಾದಾಮ ಮೇ ವೇದ ||೧೬|| ಶ್ರೀರಾಮ ಉವಾಚ. ಅಹಲ್ಕಾರಾದಿಸಂಬನ್ನೋ ಯಾವದೇಹೇಂದ್ರಿಯ್ಯಃ ಸಹ | ಸಂಸಾರಸ್ತಾನದೇವ ಸ್ಯಾತ್ ಆತ್ಮನಸ್ಯವಿವೇಕತಃ ||೧೭|| ಮಿಥ್ಯಾಭೂತೋಪಿ ಸಂಸಾರೋ ನ ಸ್ವಯಂ ವಿನಿವರ್ತತೇ || ವಿಪರ್ಯಾ ಧ್ಯಾಯಮಾನಕ್ಕೆ ಸ್ಪಷ್ಟೇ ಮಿಥ್ಯಾಗಮೋ ಯಥಾ || ಅನಾದ್ಯವಿದ್ಯಾಸಂಬಾತ ತತ್ಕಾರಾಹಂಕೃತೇಸ್ತಥಾ | ಸಂಸಾರೋ ವ್ಯರ್ಥಕೋಪಿ ಸ್ಯಾತ್' ರಾಗದ್ವೇಷಾದಿಸಲ್ಕುಲಃ ||೧೯|| ಮನವಿನ ಹಿ ಸಂಸಾರೋ ಬನಶಾವಿ ಮನಃ ಶುಭೇ | ಆತ್ಮಾ ಮನಸ್ಸಮಾನತ್ನಂ ಏತ್ಯ ತತ್ತ ಬದ್ಧ ಭಾಕ್ ||೨೦| ಚಿತೃರೂಪನೂ ಆಗಿರುವನೆಂದೂ, ನೀನು ಅಪ್ಪಣೆ ಕೊಡಿಸುವೆಯಲ್ಲವೆ? ಹಾಗಾದಮೇಲೆ, ಈ ಪ್ರಾಪಂಚಿಕವಾದ ಸುಖದುಃಖಾದಿ ಸಂಬಂಧವು ಯಾರಿಗಾಗಬೇಕು ? ಇದನ್ನು ನೀನು ನನಗೆ ಅಪ್ಪಣೆ ಕೊಡಿಸಬೇಕು ||೧೬|| ಇದಕ್ಕೆ ಶ್ರೀರಾಮನು ಉತ್ತರ ಹೇಳುವನು -- ಎಲ್‌ ತಾರೆ ! ನೀನು ಹೇಳಿದ ಅಹಂಕಾರ ಸುಖ ದುಃಖ ಮುಂತಾದ ಸಂಬಂಧವು ಆತ್ಮ ನಿಗೇ ಇರುವುದು , ಇದು ಅವನಿಗೆ ಅಜ್ಞಾನದಿಂದ ಪ್ರಾಪ್ತವಾಗುವುದು ಈ ಅಹಂಕಾರ ಸಂಬಂಧವೆಲ್ಲಿಯವರೆಗಿರುವುದೋ, ಅಲ್ಲಿಯವರೆಗೆಮಾತ್ರವೇ ಆತ್ಮನಿಗೆ ಸಂಸಾರವೂ ಇರುವುದು||೧೭|| ಈ ಸಂಸಾರವು ವಿಧ್ಯಾಭೂತವಾಗಿದ್ದ ಮೇಲೆ, ಇದು ತಾನಾಗಿಯೇ ಹೋಗಬಹು ದಲ್ಲವೆ ! ' ಎಂದರೆ, ಸ್ವಪ್ನದಲ್ಲಿ ಯಾವುದೋ ಒಂದು ಅಸತ್ಯವಾದ ವಿಷಯವೇ ಗೋಚರವಾಗು ತಿದ್ದರೂ, ಅದು ಆ ಸ್ವಪ್ನ ವಿರುವವರೆಗೂ ಸತ್ಯವಾಗಿಯೇ ತೋರುತ್ತಿರುವುದು , ಸ್ವಪ್ನ ಕಳೆದು ಜಾಗೃದವಸ್ಥೆಯುಂಟಾದ ಬಳಿಕ ಅದೂ ಹೋಗುವುದು ಅಂತು, ಸ್ಪಷ್ಟ ಕಾಲದೃಷ್ಟವಾದ ವಸ್ತುವು ಪ್ರಬೋಧಾನಂತರ ಅಸತ್ಯವೆಂದು ಗೊತ್ತಾಗಬೇಕಲ್ಲದೆ, ಸ್ವಪ್ನವಿರುವವರೆಗೂ ಅದು ಸತ್ಯವಾಗಿಯೇ ಕಾಣುತ್ತಿರುವುದಲ್ಲವೆ ಇದರಂತೆಯೇ, ಜಾಗೃದವಸ್ಥೆಯಲ್ಲಿದ್ದರೂ ಅಜ್ಞಾನವಶ ನಾಗಿ ವಿಷಯಗಳನ್ನು ಚಿಂತಿಸುತಿರುವ ಆತ್ಮನಿಗೆ, ಈ ಸಂಸಾರವು ಜ್ಞಾನೋದಯವಾದಮೇಲೆ ತೊಲಗಬೇಕಲ್ಲದೆ, ಅದುವರೆಗೆ ಇದು ಸ್ವಯಂ ನಿವೃತ್ತವಾಗುವುದಿಲ್ಲ ||೧೮|| ಆತನಿಗೆ ಈ ಸಂಸಾರವುಂಟಾಗುವ ಬಗೆ ಯಾವುದೆಂದರೆ,- ಅನಾದಿಯಾದ ಅವಿದ್ಯಾಸಂಬಂ ಧದಿಂದಲೂ, ಈ ಅವಿದ್ಯೆಯಿಂದ ಉಂಟಾಗುವ ಅಹಂಕಾರದಿಂದಲೂ, ರಾಗದ್ವೇಷಾದಿಮಯವಾ ಗಿರುವ ಈ ಮಿಧ್ಯಾಭೂತವಾದ ಸಂಸಾರವ ಆತ್ಮನಿಗುಂಟಾಗುವುದು ||೧೯|| ಸಂಸಾರವೆಂಬುದಾವುದೆಂದರೆ, ಎಲ್‌ ತಾರೆ! ಮನಸ್ಸೇ ಸಂಸಾರವು , ಈ ಸಂಸಾರಬಂಧ ವೆಂಬುದೂ ಮನಸ್ಸೇ ಅದು ಹೇಗೆಂದರೆ,-ಆತ್ಮನು ತಾನು ಮನಸ್ಸಿನ ರೂಪವನ್ನು ಹೊಂದಿ, ಈ 4 ಇಂಚ ತಗಾದ ಬಂದಕೆ ಗುರಿಯಾಗುವನು ||೨೦|