ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧&h ಕಿಕ್ಕಿಂಧಾಕಾಂಡಃ ಯಥಾ ವಿಶುದ್ಧಸ್ಪಟಿಕೋ೭ಲಕ್ಕಾದಿಸಮಾಪಗಃ | ತಕ್ಕದ್ದಣ-ಇವಾಭಾತಿ ವಸ್ತುತೋ ನಾಸ್ತಿ ರಜ್ಞನಾ ||೨೧|| ಬುದ್ಧಿ ಯಾದಿಸುವಿಖ್ಯಾತ ಆತ್ಮನಃ ಸಂಸ್ಕೃತಿರ್ಬಲಾತ್ |೨|| ಆತ್ಮಾ ಸ್ವರೂಪಂ ತು ಮನಃ ಪರಿಚ್ಛಜ್ಯ ತದುದ್ದರ್ವಾ | ಕಾರ್ಮಾ ಜುರ್ಥ ಗುಣೈರುಕ್ತಃ ಸಂಸಾರೇ ವರ್ತತೇವಠಃ ||೨೩| ಆದೌ ಮನೋಗುಣಾಃ ಸೃಷ್ಟಾಃ ತತಃ ಕರ್ವಾಣ್ಯನೇಕಧಾ | ಶುಕಲೋಹಿತಕೃಷ್ಣಾದಿಗತಯಸ್ತತ್ಸಮಾಸಜಾಃ |೨|| ಏವಂ ಕರ್ಮವಶಾದ್ದೇವೋ ಭವತ್ಯಾಭೂತಸಂಸ್ಥವನ | ಸರ್ವೋಪಸಂಹೃತ್ ದೇವೋ ವಾಸನಾಭಿಃ ಸ್ವಕರ್ಮಣಾಮ್ | ಅನಾದ್ಯ ವಿದ್ಯಾವಶಗಳ ತಿವೃತ್ಯಭಿನಿವೇಶಿತಃ ||| ಸೃಷ್ಟಿ ಕಾಲೇ ಪುನಃ ಪೂರ್ವವಾಸನಾಮಾನಸೈ ಸಹ | ಜಾಯತೇ ಪುನರಪ್ರೈವಂ ಫುಟೀಯನ್ನ ವಿವಾವಶಃ ||೨೬||


-- - ಇದಕ್ಕೊಂದು ಉದಾಹರಣೆಯನ್ನು ಕೊಡುವೆನು, ಸ್ಪಟಿಕ ಮಣಿಯು ಸ್ವಯಂ ನಿಕ್ಕಲ ವಾಗಿ ಶುಭ್ರವಾಗಿದ್ದರೂ, ಅರಗು ಮುಂತಾದ ಪದಾರ್ಥಗಳ ಸಮೀಪದಲ್ಲಿದ್ದಾಗ ಆಯಾ ಬಣ್ಣ ವುಳ್ಳುದರಂತೆ ಭಾಸಿಸುವುದಲ್ಲವೆ! ವಾಸ್ತವವಾಗಿ ಸ್ಪಟಿಕದಲ್ಲಿ ಆ ಬಣ್ಣವಿರುವುದೂ ಇಲ್ಲ , ಅದರಲ್ಲಿ ಆ ಬಣ್ಣವು ಅಂಟಿಕೊಳ್ಳುವುದೂ ಇಲ್ಲ ಇದರಂತೆಯೇ, ಬುದ್ದಿ ಇಂದ್ರಿಯ ಮೊದಲಾ ದುವುಗಳ ಸಾನ್ನಿಧ್ಯದಿಂದ ಆತ್ಮನಿಗೆ ಈ ಸಂಸಾರ ಭ್ರಾಂತಿಯುಂಟಾಗುವುದಲ್ಲದೆ, ಇದು ಅವ ನಲ್ಲಿ ವಾಸ್ತವಿಕವಾಗಿಲ್ಲ ||೨೧-೨೨||

  • ಈ ಆತ್ಮನು, ತನ್ನ ರೂಪಾಂತರವಾದ ಮನಸ್ಸಿನೊಡನೆ ಸ್ವಲ್ಪ ಸಂಪರ್ಕ ಮಾಡಿ, ಬಳಿಕ ಈ ಮನಸ್ಸಿನಲ್ಲಿ ಹುಟ್ಟುವ ಕಾಮಾದಿ ಗುಣಗಳನ್ನು ತಾನು ಪಡೆದು, ಕೊನೆಗೆ ಇವುಗಳಿಗೆ ಪರವ ಶನಾಗಿ ಸಂಸಾರದಲ್ಲಿ ಸುತ್ತುತಿರುವನು ||೨೩||

ಪ್ರಧಮದಲ್ಲಿ ಮನಸ್ಸಿನ ಗುಣಗಳು ಉತ್ಪನ್ನವಾಗುವುವು , ಆಮೇಲೆ ನಾನಾವಿಧ ಕರ ಗಳು ಉತ್ಪನ್ನವಾಗುವುವು, ಅನಂತರ, ಈ ಗುಣಕರಗಳ ಸಂಯೋಗದಿಂದ, ಸಾತ್ವಿಕ ರಾಜಸ ತಾಮಸ ಮುಂತಾದ ಕರಗತಿಗಳೂ ಉಂಟಾಗುವುವು ||೨೪|| ಹೀಗೆ ಕರವಶದಿಂದ ಜೀವನು ಮಹಾಪ್ರಳಯದವರೆಗೂ ಈ ಸಂಸಾರದಲ್ಲಿ ಸುತ್ತುತಲೇ ಇರುವನು ಪ್ರಳಯದಲ್ಲಿ ಸಮಸ್ತ ಜಗತ್ತೂ ಉಪಸಂಕೃತವಾದಾಗ, ಅನಾದಿಯಾದ ಅವಿದ್ಯೆಗೆ ವಶನಾದ ಜೀವನು, ತನ್ನ ಕರ ವಾಸನೆಯಿಂದ ಪ್ರತಿನಿವಿಷ್ಟನಾಗಿ ಇರುವನು ||೨೫|| ಸೃಷ್ಟಿ ಕಾಲದಲ್ಲಿ, ಹಿಂದಣ ವಾಸನೆಯೊಡನೆಯೂ ಆ ವಾಸನೆಯುಳ್ಳ ಮನಸ್ಸಿನೊಡನೆಯ ಮತ್ತೆ ಜನಿಸುವನು, ಆಮೇಲೆ ಮತ್ತೆ ಮರಣಹೊಂದುವನು ಈರೀತಿಯಾಗಿ, ಭಟೀಯಂತ್ರವು (ಏತ) ಒಂದಾವೃತ್ತಿ ಮೇಲಕ್ಕೆ ಹೋಗುತಲೂ ಮತ್ತೊಂದಾವೃತ್ತಿ ಕೆಳಕ್ಕೆ ಇಳಿಯುತಲೂ ಇರು ವಂತೆ, ಈ ಜೀವನ ದಾಸನಾಪರವಶನಾಗಿ ಜನನ ಮರಣ ಪ್ರವಾಹದಲ್ಲಿ ಸುತ್ತುತಿರುವನು || ೨೬ ||