೧೪೦ ಸಂಗ್ರಹ ರಾಮಾಯಣಂ ವನೇ ದವಾಗ್ನಯಃ ಕಾನಾಃ ಶೀತಾಛದ್ಮವಿಭಿರ್ಧರಾ | ಮದ್ಭಕ್ಕಾ ಸಾದ್ಯಥಾ ಬುದ್ಧಿ ಶೀತಾ ತಾಪತ್ರಯಕ್ಷಯಾತ್ ||೩೫|| ತ್ಯಾ ವನಜಲಂ ಹಂಸಾ ಗತಾಸ್ತಾನಸಂ ಸರಃ | ಗಾಢಷಣವತಾಂ ಸಜ್ಜಿಂ ತ್ಯಕ್ಕೆವ ಪರಹಂಸಕಾಃ |೩೩|| ಪಠ್ಯ ಶಿಕ್ಷಣ ಮಕಾಃ ಶುಷ್ಕತರ್ಕರತಾಇವ ! ವೃಥಾ ಘೋಷಂ ಕುರ್ವನ್ನಿ ಪರಸ್ಪರರವೋತ್ಸುಕಾಃ ||೩೭|| ಕುಮಾರ್ಗಗತಲಕ್ಷ್ಮಿಕಾವ ಕುಲ್ಯಾಗಿರಿಜಾಃ | ಕ್ಷಣಾದ್ದುಸ್ತರತಾಂ ಯಾ ಕ್ಷಣಾತ್ ತೋಯವಿವರ್ಜಿತಾಃ ||೭vi ಗೂಢಂ ಚರ ತತ್ತ್ವಜ್ಞಾಃ ದೇಶೀ ಮೂಢಜನೇ ಯಥಾ | ತದ್ದನ್ನು ಕ್ಯಾತ್ಮಸನ್ನಾರ್ದಾ ಪಿಕಾ ಪ್ರಚ್ಛನ್ನ ಚಾರಿಣ೯ ೩೯ || ನನ್ನಲ್ಲಿ ಭಕ್ತಿಯಿಟ್ಟರೆ ಆಧ್ಯಾತ್ಮಿಕ ಆಧಿದೈವಿಕ ಆಧಿಭೌತಿಕಗಳಂಒ ತಾಪತ್ರಯವು ಕ್ಷಯಿಸಿ ಮನಸ್ಸು ಶಾಂತವಾಗುವಂತೆ, ಕಾಡಿನಲ್ಲಿ ಕಾಡುಗಿಚ್ಚುಗಳೆಲ್ಲ ಶಾಂತವಾಗಿ ಭೂಮಿಯೆಲ್ಲವೂ ವೃಷ್ಟಿಯಿಂದ ಶೀತಲವಾಗಿರುವುದು ||೩೫|| ಪ್ರಪಂಚದಲ್ಲಿ ಪರಮಹಂಸಪದವಿಯನ್ನು ಪಡೆದ ಜ್ಞಾನಿಗಳು ಪ್ರತ್ಯೇಷಣಾದಿಗಳಲ್ಲಿ ಅತಿ ಪ್ರಬಲವಾಗಿ ಮಗ್ನರಾಗಿರುವವರ ಸಹವಾಸವನ್ನು ಬಿಟ್ಟು ಹೊರಟುಹೋಗುವಂತೆ, ಹಂಸಪಕ್ಷಿ ಗಳು ಈ ವನದಲ್ಲಿರುವ ಜಲಾಶಯಗಳನ್ನು ಬಿಟ್ಟು ಬಿಟ್ಟು ಆ ದಿವ್ಯವಾದ ಮಾನಸಸರೋವರಕ್ಕೆ ಹೊರಟುಹೊದುವು ||೩|| ವತ್ಸ ! ಲಕ್ಷ್ಮಣ ! ಇಲ್ಲಿ ನೋಡು ಲೋಕದಲ್ಲಿ ಶುಷ್ಕ ತರ್ಕನಿರತರಾದವರು ಒಬ್ಬರು ಮಾಡಿದ ವಾದವನ್ನು ಕೇಳಿ ತಾವೂ ಅವರಿಗಿಂತ ಗಟ್ಟಿಯಾಗಿ ವಾದಮಾಡುತ ಕೋಲಾಹಲದಲ್ಲಿ ಉತ್ಸುಕರಾಗಿ ವ್ಯರ್ಥವಾಗಿ ಕೂಗಾಡುವಂತೆ, ಈ ಕಪ್ಪಗಳು ಒಂದು ಕೂಗುವುದನ್ನು ಕೇಳಿ ಮತ್ತೊಂದೂ ಕಿರಿಚುತ ವ್ಯರ್ಧವಾಗಿ ಕೋಲಾಹಲಮಾಡುತ್ತಿರುವುವು ||೩೭|| ತಮ್ಮ ಸಂಪತ್ತನ್ನು ದುಮಾರ್ಗದಲ್ಲಿ ವಿನಿಯೋಗಿಸುತ್ತಿರುವ ದುಷ್ಟರು ಒಂದು ಕ್ಷಣಕಾಲ ಯಾರಿಗೂ ಅಪ್ರದೃಷ್ಯರಾಗಿದ್ದುಕೊಂಡು ಉತ್ತರಕ್ಷಣದಲ್ಲಿಯೇ ಧನವಿಹೀನರಾಗುವಂತೆ, ಈ ಖುಶ್ಯಮ ಕಪರ್ವತದಲ್ಲಿ ಹುಟ್ಟಿರುವ ನಿರ್ಝರಗಳು ಒಂದು ಕ್ಷಣ ಸುತರಾಂ ದಾಟಿಹೋಗಲಸಾ ಧಗಳಾಗಿದ್ದು ಗೊಂಡು ಉತ್ತರಕ್ಷಣದಲ್ಲಿಯೇ ಜಲವಿಹೀನವಾಗುತಿರುವುವು ||೩೮|| ಮಧಜನಭರಿತವಾದ ಪ್ರದೇಶದಲ್ಲಿ ತತ್ವಜ್ಞಾನಿಗಳು ತಮ್ಮ ಆತ್ಮವಿಚಾರವಿಷಯಕವಾದ ಮಾತೊಂದನ್ನೂ ಹೊರಗೆ ಹೊರಡಿಸದೆ ರಹಸ್ಯವಾಗಿ ಸಂಚರಿಸುವಂತೆ, ಇಲ್ಲಿ ಕೋಗಿಲೆಗಳು ತಮ್ಮ ಮಧುರವಾದ ಧ್ವನಿಯನ್ನೆಲ್ಲ ಬಿಟ್ಟು ಬಿಟ್ಟು ನಿಗೂಢವಾಗಿ ಸಂಚರಿಸುವುವು. (ಎಂದು ಶ್ರೀರಾ ಮನು ಲಕ ಣನಿಗೆ ಹೇಳಿದನು) || ೩೯||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೪೪
ಗೋಚರ