hಳ ಕಿಂಧಾಕಾಂಡಃ ಸಾಯಂಪತರ್ಹುತಾಗ್ನಿ ನಂ ತ್ರಿವವಣಂ ತಥಾ | ಸಹ ಪತ್ನಾ ಶುಚಿಃ ಶಾನ್ತೋ ಯತವಾಕ್ಯಾಯಮಾನಸಃ ||೩|| ಪಿತೃದೇವಾರ್ಧೀ ಪೂಜ್ಯ ಸಣ್ಮಯಜ್ಞಾನಶೇಪಿತಮ್ | ಭುಕ್ಕಾ ಚ ಕಾಲಶೇಷಂ ತು ಪುರಾಣಪರನೈರ್ನಯೇತ್ |೩೩|| ಬೆತೇಯೋ ಜಿತಾಹಾರೋ ವಾನಪ್ರಸ್ಟೋ ಜಟೀ ಭವೇತ್ | ಏವಂವೃತ ಸಮಾರನ್ನ ಸ ಲೋರ್ಕಾ ಜಯತಿ ಧ್ರುವಮ್ ||೩೪|| ವೈರಾಗ್ಯಾಹಮುಜ್ಯ ಕಾಪಾಯವಸನಃ ಶುಚಿಃ | ಶಾ ದಾನ್ಯ ಸ್ಥಿತಿಕ್ಷುಕ ಸ್ಥಿರಬುದ್ಧಿರನಾಶ್ರಯಃ ||೩೫|| ಅಕೋಪನೋಸಂಗ್ರಹೀ ಚ ಬ್ರಹ್ಮಾಲೋಕನತತ್ಪರಃ | ನಿಸ್ಸಂಗೋ ನಿರ್ಮಮ ಶುದ್ಧತಿ ಸ್ನಾನಂ ಸವಣಂ ಸ್ಪರ್ಶ ||೩೬|| ಸಾಯಂಕಾಲಾಭಿಗಾಮಾ ಚ ಪಾತಾಪತಿತಭೋಜನಃ | - - ಬಿಟ್ಟು, ಆರಣ್ಯಕಪದಾರ್ಥಗಳಿಂದಲೇ ಆಹಾರ ಮಾಡಬೇಕು ಸಾಯಂಕಾಲ ಪ್ರಾತಃಕಾಲಗ ಇಲ್ಲಿ ಹೋಮವನ್ನೂ, ತ್ರಿಷವಣಸ್ನಾನವನ್ನೂ ಮಾಡುತ, ಪತ್ನಿಯುಕ್ತನಾಗಿ, ಶುಚಿಯಾಗಿಯೂ ಶಾಂತನಾಗಿಯೂ ಇರುತ, ಕರಣತ್ರಯವನ್ನೂ ಸ್ವಾಧೀನದಲ್ಲಿಟ್ಟು ಕೊಂಡು, ದೇವ ಪಿತೃ ಅತಿಧಿಗ ಳನ್ನು ಪೂಜಿಸುತ, ಸಂಚಯಜ್ಞಾನಶಿಷ್ಟವಾದ ಆಹಾರವನ್ನು ಭುಜಿಸುತ, ಉಳಿದ ಕಾಲವನ್ನೆಲ್ಲ ಪುರಾಣಪರನದಲ್ಲಿ ಕಳೆಯಬೇಕು ||೩೧-೩೩ ವಾನಪ್ರಸ್ಥನಾದವನು, ಇಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಳ್ಳಬೇಕು , ಸೈಜ್ಞೆಯಾಗಿ ಆಹಾರವನ್ನು ತಿನ್ನಬಾರದು , ಜಟಾವಕ್ಕಲಗಳನ್ನು ಧರಿಸಿರಬೇಕು ಈವಿಧವಾದ ವ್ಯಾಪಾರ ವುಳ್ಳ ವಾನಪ್ರಸ್ಪನು, ಸಕಲ ಪುಣ್ಯಲೋಕಗಳನ್ನೂ ವಶಪಡಿಸಿಕೊಳ್ಳುವನು, ಇದರಲ್ಲಿ ಸಂಶ ಯವಿಲ್ಲ ||೩೪|| ಸಮಸ್ತ ಲೋಕವ್ಯಾಪಾರದಲ್ಲಿಯೂ ವಿರಕ್ತಿಯುಂಟಾಗಿ ಗೃಹವನ್ನು ಪರಿತ್ಯಜಿಸಿ ಕಾಪಾ ಯವಸ್ತ್ರವನ್ನು ಧರಿಸಿದವನೇ ಸನ್ಯಾಸಿಯು ಇವನು, ಸತ್ವದಾ ಶುಚಿಯಾಗಿರಬೇಕು, ಅಂತ ರಿಂದ್ರಿಯ ಬಹಿರಿಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಂಡಿರಬೇಕು , ಕೋಶವನ್ನು ಸಹಿಸಬೇಕು, ಚಿತ್ರವನ್ನು ಸ್ಥಿರಪಡಿಸಿಕೊಳ್ಳಬೇಕು ಇವನಿಗೆ ನಿಯತವಾದ ವಾಸಸ್ಥಾನವೇ ಇಲ್ಲ ||೩೫| ಸನ್ಯಾಸಾಶ್ರಮವನ್ನು ಸ್ವೀಕರಿಸಿದವನು, ಸುತರಾ೦ ಕೋಪವನ್ನು ಪರಿತ್ಯಜಿಸಬೇಕು, ಯಾವುದೊಂದನ್ನೂ ಸಂಗ್ರಹಿಸಕೂಡದು, ಸತ್ವದಾ ಬ್ರಹ್ಮ ವಿಚಾರದಲ್ಲಿಯೇ ನಿರತನಾಗಿರಬೇಕು, ಯಾವ ಸಂಬಂಧವನ್ನೂ ಮಾಡಕೂಡದು, ಯಾವುದೊಂದನ್ನೂ ತನ್ನದೆಂದು ತಿಳಿಯಕೂಡದು , ತ್ರಿಕರಣಶುದ್ಧನಾಗಿ ಕಾಲತ್ರಯದಲ್ಲಿಯ ಸ್ನಾನವನ್ನು ಮಾಡಬೇಕು ||೩೬|| ಇವನು ಭಿಕ್ಷಾರ್ಥವಾಗಿ ಮಾತ್ರವೇ ಗ್ರಾಮಪ್ರವೇಶ ಮಾಡಬೇಕು. ಸಾಯಂಕಾಲ ದಲ್ಲಿ ಗ್ರಾಮದ ಹೊರಗಿರುವ ತನ್ನ ಪರ್ಣಶಾಲೆ ಮುಂತಾದ ವಾಸಸ್ನಾನಕ್ಕೆ ಹಿಂದುಬಿಡಬೇಕು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೫೧
ಗೋಚರ