೧೬P [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಮಾತ್ರೆವಮುಕ್ತ ಶು –ಂ ಉದ್ಯಂ ಸೂರ್ಯಮಣ್ಣಲಮ್ | ದೃಷ್ಟಾಹಾರಂ ಪರಂ ಮತ್ಸಾ ಸಂಭ್ರಮೇಣ ಸಮುತ್ತಿತಃ ||೧೬|| ಚಕ್ರವಾಳಂ ಸಮುದ್ದಿಶ್ಯ ಸಮುತ್ಸತಿತವಾನಸಿ | ಭೂಚಕವಲಯಂ ಭೀಮ ಸಪ್ತಸಿನ್ನು ಬಹಿಸ್ಸಿ ತಮ' |೨೭| ಸೂಕ್ಕೊಸ್ತಮಗಮದೀತ್ಯಾ ತವ ವೇಗಂ ದುರಾಸದಮ್ | ಅಸಹಿಷ್ಣುಃ ಪರಂ ತೇಜಃ ಚಕ್ರವಾಳಾನ್ಮಹಾಗಿರೇ || ತಮುತ್ತಂಭೌಲ್ಯಾದರ್ಧೀ ಸಪ್ತ ಗೋಪ್ಪದಪ್ರಾಯವದ್ಭುತಮ್ | ಚಕ್ರವಾಳತಟಂ ಪಾಪ್ಯ ವಿಚರ್ರ ವಿಸ್ಮಿತಃ ಸ್ಥಿತಃ ||೨೯|| ಜಗದಣ್ಣಂ ತನೋವ್ಯಾಪ್ತಂ ನ ಸಣ್ಣಾರಃ ಶರೀರಿಣಾಮ್ |೩೦| ಸ್ನಾನಂ ಸನ್ನಾ ಜಪೋ ಹೋಮಃ ಸ್ವಾಧ್ಯಾಯಃ ಪಿತೃತರ್ಪಣಮ್ | ಸಾಹಾಕಾರಃ ಸಧಾಕಾರಃ ತೀರ್ಥಯಾತ್ರಾದಿಸಯಾಃ | ಸರ್ವ ವಿಲೋಪಮಾಪನ್ನಂ ಸೂರಸ್ಯಾದರ್ಶನಾದ್ಭುವಿ ||೩೧|| ಕುಪಿತೋ ದೇವರಾಜಸ್ತು ಗಜಾರೂಢ ಭಯಾದ್ಭುತಃ ||೩|| --- ---- - - ಅಯ್ಯಾ ! ಹನುಮಂತನೆ ! ಆಗ ನಿನ್ನ ತಾಯಿಂದ ಹೀಗೆ ಹೇಳಲ್ಪಡಲಾಗಿ, ನೀನು ಆಗ ತಾನೆ ಉದಯಿಸುತ್ತಿರುವ ಸೂರಮಂಡಲವನ್ನು ಕಂಡು, ಇದು ನನಗೆ ಉತ್ತಮವಾದ ಆಹಾರ ವೆಂದು ತಿಳಿದು, ಸಂಭ್ರಮದಿಂದ ಮೇಲಕ್ಕೆ ಹಾರಿದವನಾದೆ ||೨೬|| ಆಗ ನೀನು ಸಪ್ತ ಸಮುದ್ರದ ಹೊರಗಿರುವ ಭೂಮಂಡಲವನ್ನೂ ದಾಟಿ, ಚಕ್ರವಾಳಪಶ್ವತ ವನ್ನು ಗುರಿಮಾಡಿಕೊಂಡು ಹಾರಿಹೋದೆ ||೨೭|| ಅನಂತರ, ನಿನ್ನ ದುರಾಸದವಾದ ವೇಗವನ್ನೂ -ಅತ್ಯಧಿಕವಾವ ತೇಜಸ್ಸನ್ನೂ ಸಹಿಸಲಾರ ದವನಾಗಿ, ಸೂರನು ಭಯಪಟ್ಟು ಆ ಚಕ್ರವಾಳಪಶ್ವತದ ದೆಸೆಯಿಂದ ಅಸ್ತ ಹೂಂದಿಬಿಟ್ಟನು ||೨೮|| ಆಗ ನೀನು, ಸರ್ವರೂ ಆಶ್ಚಯ್ಯಪಡುವ ರೀತಿಯಲ್ಲಿ ಸಪ್ತ ಸಮುದ್ರಗಳನ್ನೂ ಒಂದು ಗೋಷ್ಟ್ರ ದಂತೆ ದಾಟಿಬಿಟ್ಟು, ಚಕ್ರವಾಳಪರ್ವತದ ತಟವನ್ನು ಸೇರಿ, ಅಲ್ಲಿ ಎಸ್ಕಯಯುಕ್ತನಾಗಿ ಸಂಚರಿಸು ತಿದ್ದ ||೨೯|| ಆ ಬಳಿಕ, ಸೂದ್ಯೋದಯವೇ ಇಲ್ಲವಾಗಲಾಗಿ, ಬ್ರಹ್ಮಾಂಡವಲ್ಲವೂ ತಮಸ್ಸಿನಿಂದ ವ್ಯಾಪ್ತವಾಯ್ತು, ಪ್ರಾಣಿಗಳಿಗೆ ಸಂಚಾರವಿಲ್ಲವಾಯ್ತು, ಸ್ನಾನ ಸಂಧ್ಯೆ ಜಪ ಹೋಮ ವೇದಾ ಧ್ಯಯನ ಪಿತೃತರ್ಪಣ ಸ್ವಾಹಾಕಾರ ಸ್ವಧಾಕಾರ ತೀರ್ಥಯಾತ್ರಾದಿ ಸತ್ಕರ-ಇವೇ ಮೊದಲಾದ ಸಮಸ್ತವೂ ಲೋಪಹೊಂದಿಬಿಟ್ಟಿತು ||೩೦-೩೧|| ಆಗ ಭೂಮಿಯಲ್ಲಿ ಯಜ್ಞಾದಿಗಳೊಂದೂ ನಡೆಯದಿರುವಕಾರಣ, ಹವ್ಯಭೋಜ್ಯಗಳಾದ ದೇವತೆಗಳಿಗೆ ಆಹಾರವೇ ತಪ್ಪಿಹೋಗಲಾಗಿ, ದೇವರಾಜನಾದ ಇಂದ್ರನು ಮಹಾಪಸಮ
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೭೮
ಗೋಚರ