ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ (ಸರ್ಗ N ಶ್ರೀ ತತ್ವ ಸಂಗ್ರಹ ರಾಮಾಯಣಂ ಸೋಪಿ ಮೋಹಾತ್ಮಕಜ್ಞಾನಾತ್ ತಚ್ಛಾಧ್ಯಸ್ತಂ ನಿಜಾತ್ಮನಿ ||೨೨|| ಏವಮಜ್ಞಾನಜೇ ದೇಹೇ ಜನ್ನಮೃತ್ಯು ಜರಾದಯಃ | ಸ್ಥಿತಾಸ್ತಾನೇವ ಹಿ ಭ್ರಾನ್ನ ಕಲ್ಪನೇ ಪಾಮರಾಃ ಪರೇ ||೨೩|| ಸಣ್ಣ ರಹಿತಾಃ ಶಾಸ್ತ್ರವಿಚಾರಪರಿವರ್ಜಿತಾಃ ||8|| ಏವಮ್ಮ ತಸ್ಯ ದೇಹಸ್ಯ ಜನನಂ ಮರಣಂ ತಥಾ | ವಕ್ಷ್ಯಾಮಿ ಪಕ್ಷಿಃ ತತ್ ಸರ್ವ೦ ಸಾವಧಾನಮನಾಃ ಶೃಣು ||೧೫|| ಮೃತಿಕಾಲೋತ್ತಿ ತೋದಾನವತಾವಿತರೋಣಿತಮ್ | ಜಲಂ ಸ್ಯಾತ್ ತವನಾಧಾರೋ ವ್ಯಾನೋ ಗಾತ್ರಂ ತ್ಯಜೇಚ ನೈಃ ||೧೬| ತತಃ ಸವನ್ನು ದಾನೇನ ಸುತ್ತ ಸೋಪಾನದೇತತಃ | ಅಪಾನಂ ಪ್ರೇರಯೇತ್ ಸೋಪಿ ಪ್ರಣಬಣ್ಣಂ ತ್ಯಜತ್ಯಥ ||೨೭|| ತೇ ನಾಳಿಗಾ ಸೆರಯ ಸಮಾನಂ ಸ ಚ ಸಹ | ಪ್ರಣಂ ಕ್ಷಿಪೇತ್ ಸ ಚಾಸ್ವಾನಃ ಪಿತ್ತಂ ತಚ್ಛ ಕಥಂ ತತಃ ||೨೮|| - -- -- -- ---- ---- ಅಎವೇಕದಿಂದ ಹುಟ್ಟುವುದು , ಆ ಅವಿವೇಕವೆಂಬುದು ಮೂವರೂಪವಾದ ಅಜ್ಞಾನದಿಂದ ಹುಟ್ಟುವುದು , ಈ ಅಜ್ಞಾನವಾದರೋ, ಆತ್ಮನಲ್ಲಿ ಆರೋಪಿತವಾಗಿರುವುದು ||೨೨|| ಹೀಗೆ ಅಜ್ಞಾನ ಜನವಾಗಿರುವ ಈ ದೇಹದಲ್ಲಿ ಜನನ ಮರಣಾದಿಗಳುಂಟಾಗಿರುವುವು ಇವುಗಳನ್ನ, ಅಜ್ಞಾನಿಗಳು, ಸತ್ಸಂಗವೂ ಶಾಸ್ತ್ರ ವಿಚಾರವೂ ಇಲ್ಲದೆ ಮೋಹದಿಂದ ಪರಮಾತ್ಮ ನಲ್ಲಿ ಕಲ್ಪಿಸಿಕೊಳ್ಳುವರು ||೨೩-೨೪|| ಎಕ್ಕ ಗೃಧ್ರನ ! ಈ ರೀತಿಯಾಗಿರುವ ದೇಹಕ್ಕೆ ಜನನ ಮರಣಗಳುಂಟಾಗುವ ಬಗೆ ಯನ್ನು ಹೇಳುವನು , ಇದನ್ನೆಲ್ಲ ನೀನು ಸಾವಧಾನ ಚಿತ್ತನಾಗಿ ಕೇಳುವನಾಗು |೨೫|| ಪ್ರಾಣಿಗಳಿಗೆ ಮರಣಕಾಲದಲ್ಲಿ ಉದಾನನಾಮಕವಾದ ವಾಯುವು ವಿಶೇಷವಾಗಿ ಉಲ್ಪಣವಾಗುವುದು , ಆಗ ಅದು ಅಗ್ನಿ ರೂಪವಾಗಿ ದೇಹದಲ್ಲಿರುವ ರಕ್ತವನ್ನೆಲ್ಲ ಕಾಯಿಸಿಬಿಟ್ಟು ನೀರಾಗುವುದು. ಆಗ ವ್ಯಾನವಂಬ ವಾಯುವು ಆಧಾರಶೂನ್ಯವಾಗಿ ಮೆಲ್ಲಗ ಶರೀರವನ್ನು ಬಿಟ್ಟು ಬಿಡುವುದು ||೨೬|| ಆರುಲೆ ಅಗ್ನಿ ರೂಪವಾದ ಉದಾನವಾಯುವಿನಿಂದ ಪ್ರೇರಿತವಾಗಿ, ಆ ವ್ಯಾನವಾಯುವು ಅಪಾನದೇಶಕ್ಕೆ ಹೋಗಿ, ಅಲ್ಲಿ ಅಪಾನವಾಯುವನ್ನು ಪ್ರೇರಿಸುವುದು , ಬಳಿಕ ಅದೂ ಪ್ರಾಣ ಬಂಧವನ್ನು ಬಿಟ್ಟು ಬಿಡುವನು ||೨೭|| ಹೀಗ ಈ ಉವಾನ ವ್ಯಾನ ಅಪಾನಗಳಲ್ಲವೂ ಸೇರಿ ನಾಭಿಸ್ಥಾನಕ್ಕೆ ಹೋಗಿ, ಅಲ್ಲಿ ಸಮಾನ ವೆಂಬ ವಾಯುವನ್ನು ಪ್ರೇರಿಸುವುವು ಆಮೇಳ ಈ ಉದಾನಾದಿಗಳೊಡನೆ ಸೇರಿದ ಸಮಾನ ವಾಯುವ, ಪ್ರಾಣವಾಯುವನ್ನು ಪ್ರೀತಿಸುವುದು ಬಳಿಕ ಆ ಪ್ರಾಣವಾಯುವೂ ನಿರಾಧಾರ ವಾಗಿ ಪಿತ್ಯವನ್ನು ಸೇರಿಸುವುದು, ಆಮೇಲೆ ಸಿತ್ಯವು ಕಸವನ್ನು ಪ್ರೇರಿಸುವುದು ||೨೮||