ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಶ್ರೀ ತತ್ವ ಸಂಗ್ರಹ ರಾಮಾಯಣಂ fಸರ್ಗ ಅನ್ಯದಾಮಿ ತೇ ಪಕ್ಷಿಕ ಶೃಣು ಮೇ ಪರಮಂ ಹಿತಮ್ ||೭|| ಪ್ರೇತಾಯುಗೇ ದಾಶರಥಿಃ ಭೂತ್ವಾ ನಾರಾಯಣೋವ್ಯಯಃ | ರಾವಣಸ್ಯ ವಿನಾಶಾಯ ದಣ್ಣಕಾವನಮೇಷ್ಯತಿ | ಸೀತಯಾ ಭಾರ್ಯಯಾ ಸಾರ್ಧಂ ಲಕ್ಷ್ಮಣೇನ ಸಮನ್ವಿತಃ ||8|| ತತ್ರಾಶ್ರಮೇ ಜನಕಜಾಂ ಭಾತೃಭ್ಯಾಂ ರಹಿತಾಂ ವನೇ | ರಾವಣಶ್ಮೀರವನ್ನಿತ್ರಾ ಲಜ್ಞಾಯಾಂ ಸ್ಥಾಪಯಿಷ್ಯತಿ ||೪|| ತಸ್ಯಾಃ ಸುಗ್ರೀವನಿರ್ದೆಶಾತ್ ವಾನರಾಃ ಪರಿಮಾರ್ಗಣೇ ! ಆಗಮಿಪ್ಯ ಜಲಧೇಃ ತೀರಂ ತತ್ರ ಸಮಾಗಮಃ | ತವ ಶೈಕಿ ಕಾರಣವಶಾತ್ ಭವಿಷ್ಯತಿ ನ ಸಂಶಯಃ ||೫|| ತದಾ ಸೀತಾಸ್ಥಿತಿಂ ತೇಭ್ಯಃ ಕಥಯಸ್ಸು ಯಥಾರ್ಧತಃ | ತದೈವ ತವ ಪಕ್ಷ ದೌ ಉತ್ಪತ್ತೈತೇ ಪುನರ್ಭಮೌ ||೨|| ಏವಂ ಮಂ ಬೋಧಯಾಮಾಸ ನಿಶಾಕರಮುನೀಶ್ವರಃ | ಪಶ್ಯನ್ನು ಪಕ್ಕ ಮೇ ಜಾತ್‌ ನೂತನವತಿಕೋಮಲ್‌ 14{೨|| ಪಕ್ಷೇತೃತ್ವ ವೋ ಜಾನೇ ಕಾರ್ಯಸಿದ್ಧಿಂ ಕರೇ ಸ್ಥಿತಾ ||೩|| - - -


ಎಲೈ ಪಕ್ಷಿಯ ! ನಿನಗೆ ಇನ್ನೂ ಒಂದು ಹಿತವಾದುದನ್ನು ಉಪದೇಶಿಸುವೆನು, ಕೇಳು ಮುಂದೆ ತ್ರೇತಾಯುಗದಲ್ಲಿ ಅವ್ಯಯನಾದ ಶ್ರೀಮನ್ನಾರಾಯಣನು, ರಾವಣನ ವಧೆಗೋಸ್ಕರ ವಾಗಿ, ಹೆಂಡತಿಯಾದ ಸೀತೆಯೊಡನೆಯ ಅನುಜನಾದ ಲಕ್ಷ್ಮಣನೊಡನೆಯ ಕೂಡಿಕೊಂಡು, ದಂಡಕಾವನಕ್ಕೆ ಬರುವನು ||೪೭-೪೮|| ಅಲ್ಲಿ ಆಶ್ರಮದೊಳಗೆ ಈ ರಾಮಲಕ್ಷ್ಮಣರಿಬ್ಬರೂ ಇಲ್ಲದಿರುವಾಗ ರಾವಣನು ಕಳ್ಳ ನಂತೆ ಸೀತೆಯನ್ನು ಅಪಹರಿಸಿಕೊಂಡು ಹೋಗಿ ಲಂಕಾಪಟ್ಟಣದಲ್ಲಿ ಇರಿಸುವನು ||೪೯|| ಬಳಿಕ ಸೀತೆಯನ್ನು ಹುಡುಕುವುದಕ್ಕಾಗಿ ಸುಗ್ರೀವನ ಅಪ್ಪಣೆಯಿಂದ ಹೊರಟು, ವಾನ ರರು ಸಮುದ್ರತೀರಕ್ಕೆ ಬರುವರು ಅಲ್ಲಿ ನಿನಗೆ ಕಾರಣಾಂತರದಿಂದ ಅವರೊಡನೆ ಸಮಾಗಮವಾ ಗುವುದು , ಇದರಲ್ಲಿ ಸಂಶಯವಿಲ್ಲ {೫೦|| ಆಗ ನೀನು ಅವರಿಗೆ ಸೀತೆಯ ವೃತ್ತಾಂತವನ್ನು ಯಧಾವತ್ತಾಗಿ ಹೇಳು ಆ ಕ್ಷಣವೇ ನಿನ್ನ ಎರಡು ಕೈಗಳೂ ಪುನಃ ಉತ್ಪನ್ನವಾಗುವುವು |೫೧|| ಅಯ್ಯಾ ! ವಾನರಾಧಿಪತಿಗಳಿರಾ ! ಹೀಗೆಂದು ಆ ನಿಶಾಕರನೆಂಬ ಮುನಿಶ್ರೇಷ್ಠನು ಆಗ ನನಗೆ ಹೇಳಿದನು. ಇದೋ- ಇಲ್ಲಿ ನೋಡಿ , ನನಗೆ ಈಗ ಹೊಸದಾಗಿ ಅತಿ ಕೋಮಲವಾದ ರಕ್ಕೆಗಳು ಹುಟ್ಟಿದುವು. ನನಗೆ ರಕ್ಕೆ ಹುಟ್ಟಿದುದರಿಂದಲೇ, ನಿಮ್ಮ ಕಾರೈಸಿದ್ದಿ ಹಸ್ತಗತವಾಗಿ ರುವುದೆಂದು ನಾನು ನಂಬುವೆನು ||೫೨-೫೩||