ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಂದರಕಾಂಡಃ ಪ್ರೇರಿತ ದೇವತಾಸಲ್ಸ್ಕಿ ಸುರಸಾಸೀತ್ ತದಾಗ್ರತಃ | ಬಲಂ ಜಿಜ್ಞಾಸಮಾನಾ ವೈ ನಾಗಮಾತಾ ಹನೂಮತಃ |kno!! ತತಃ ಪ್ರಯಾನಂ ತಂ'ವೀಕ್ಷ ಸುರಸಾ ವಾಕ್ಯಮಬ್ರವೀತ್ | ಪವಿಠ್ಯ ವದನಂ ಮೇದ್ಯ ಗಸ್ತವ್ಯಂ ವಾನರೋತ್ತಮ | ವರವಿಷ ಪುರಾ ದತ್ತೋ ಮಮ ಧಾತ್ರೆತಿ ಸತ್ಪರಾ ||೧೦|| ವಿಂಶದ್ರೋಜನವಾ ಸಾ ಭುಕುಟೀಕುಲಾನನಾ | ತಸೊಚಿತಶರೀರೇಣ ಸಾಕ್ಷಾದಿಷ್ಟು ಇವ ಸ್ಥಿತಾ ||೧೩|| ದೃಷ್ಟಾ ತಾಂ ಸುರಸಾಂ ದೇವೀಂ ಹರಾನ್ನಾರ್ಗನಿರೋಧಿನೀಮ್ | ತಾಂ ಹೇತುಕಾಮೋ ನಿರ್ಭಿಕೋ ಬಹುವ್ಯಾಪಾರವಾನಭೂತ್ [78] ಮತ್ಸಾ ವಿಜೇತುಂ ತಾಂ ದೇವೀಂ ಅಶಕ್ಕಾಂ ಮಾರುತಾತ್ಮಜಃ | ವಕ್ತಾಧಿಗುಣದೇಹೋಭೂತ ತದ ಕಾದಿಳನಾಯ ಸಃ ||೧೫|| ಸುರಸಾ ತದ್ವಿಗುಣಿತಂ ವಕ್ಕಲ ವ್ಯಾದಾಯ ನಿಷ್ಠಿತಾ | ಆಗ ನಾಗಮಾತೆಯಾದ ಸುರಸೆಯು, ದೇವಸಮೂಹದಿಂದ ಪ್ರೇರಿತಳಾಗಿ, ಹನುಮಂತನ ಬಲವನ್ನು ತಿಳಿದುಕೊಳ್ಳಬೇಕೆಂದು ಅವನ ಮುಂದೆ ಬಂದು ನಿಂತಳು ||೧೧|| ಬಳಿಕ, ತಾನು ಮುಂದೆ ಬಂದು ನಿಂತರೂ ಲಕ್ಷ್ಯವಿಲ್ಲದೆ ಹನುಮಂತನು ಹೊರಟುಹೂ ಗುತಿರುವುದನ್ನು ನೋಡಿ, ಅತಿ ವೇಗಸಂಪನ್ನ ಯಾದ ಆ ಸುರಸೆಯು, ಹನುಮಂತನನ್ನು ಕುರಿತು * ಅಯ್ಯಾ ! ಕಸಿಶ್ರೇಷ್ಟ ! ಈಗ ನೀನು ನನ್ನ ಮುಖದೊಳಗೆ ಪ್ರವೇಶಮಾಡಿಯೇ ಮುಂದಕ್ಕೆ ಹೋಗಬೇಕಾಗಿರುವುದು ಈ ರೀತಿಯಾಗಿ ನನಗೆ ಬ್ರಹ್ಮದೇವನಿಂದ ವರವಾಗಿರುವುದು ' ಎಂದು ಹೇಳಿದಳು ||೧೨|| ಹೀಗ ಬಾಯಲ್ಲಿ ಹೇಳುತಲೇ, ಅವಳು ಇಪ್ಪತ್ತು ಗಾವುದದಗಲ ಬಾಯನ್ನು ತೆರೆದು ಕೊಂಡು, ಮುಖದಲ್ಲಿ ವಕ್ರವಾಗಿ ಹುಬ್ಬು ಗಂಟು ಹಾಕಿಕೊಂಡು, ವಿಘ್ನವೇ ಶರೀರಗ್ರಹಣಮಾಡಿ ಸಾಕ್ಷಾತ್ತಾಗಿ ಬಂದಿದೆಯೋ ಎಂಬಂತ, ಆ ಹನುಮಂತನನ್ನು ನುಂಗಲು ತಕ್ಕಂತೆ ಶರೀರವನ್ನು ಸ್ವೀಕರಿಸಿ ನಿಂತುಗೊಂಡಳು ||೧೩|| ಈ ರೀತಿಯಲ್ಲಿ ಹರಾತ್ತಾಗಿ ಸುರಸೆಯು ಮಾರ್ಗನಿರೋಧ ಮಾಡುತಿರುವುದನ್ನು ಕಂಡು, ಅವಳನ್ನು ಜಯಿಸಲಿಚ್ಛೆಯಿಂದ, ಹನುಮಂತನು ನಿರ್ಭಯನಾಗಿ ಬಹುವಿಧವಾದ ವ್ಯಾಪಾರಗಳನ್ನು ನಡೆಯಿಸಿದನು ||೧೪|| ಕೊನೆಗೆ ಅವಳನ್ನು ಗೆಲ್ಲುವುದಸಾಧ್ಯವೆಂದು ತಿಳಿದುಕೊಂಡು, ಆ ಹನುಮಂತನು, ಆ ಸುರಸೆಯನ್ನು ನುಂಗಿಬಿಡಬೇಕೆಂದು ಯೋಚಿಸಿ, ಅವಳ ಮುಖಕ್ಕೆ ಎರಡರಷ್ಟು ಅಗಲವಾಗಿ ತನ್ನ ಮುಖವನ್ನು ಮಾಡಿಕೊಂಡನು ||೧೫|| ಆ ಬಳಿಕ, ಸುರಸೆಯು ಅದಕ್ಕೆ ರಡರಷ್ಟಗಲವಾಗಿ ತನ್ನ ಮುಖವನ್ನು ಅಗಲಿಸಿಕೊಂಡು