ಸುಂದರಕಾಂಡ ಪ್ರವಿಷ್ಟೋ ಹಿ ತೇ ವಕ್ತಂ ದಾಕ್ಷಾಯಣಿ ನಮೋಸ್ತು ತೇ || ಗಮಿಪೈ ಯತ್ರ ವೈದೇಹೀ ಸತ್ಯಜ್ಞಾಸು ವರಸ್ತವ ||೨೩|| ಇತ್ಯುಕ್ಯಾ ಹನೂರ್ಮಾ ವೀರಃ ಪ್ರಯಾತುಮುಪಚಕ್ರಮೇ ||೨೪|| ತತೋ ದೇವಾಃ ಸಗನ್ನರ್ವಾ ಯಕ್ಷರಾಕ್ಷಸರನ್ನಗಾಃ || ವಿಸ್ಮಯಂ ಪರಮಂ ಜಗ್ಗು ನಿರ್ವಿಘ್ನು ತು ಭವಿಷ್ಯತಿ ||೨೫|| ಸಮಸ್ಯತಾ ಮಾರುತಿನಾ ಶಿರಸಾಶೀಃ ಪ್ರಯುಷ್ಯ ಚ | ಜಯೇತ್ಯುಕ್ಯಾ ದೇವಮಾತಾ ಪ್ರಯಯಾವತಿಹರ್ಪಿತಾ |pa|| ಹನೂಮಾನಪಿ ತೇಜ ಶಮಶ್ವಾಸವಿವರ್ಜಿತಃ | ಪ್ರಯಯಾವತಿವೇಗೇನ ಸುರವಿಸ್ಮಯಕಾರಕಃ ||೧೭|| ನಿರಾಲಮೈನ ನಾರ್ಗೆ ಗಚ್ಚನಂ ಮಾರುತಾತ್ಮಜಮ್ | ಮೈನಾಕ ಪರ್ವತಸ್ತತ ನಾನಾಕೃದ್ಧಿ ಸಮನ್ವಿತಃ || ಅತಿಥಂ ಕರ್ತುಕಾಮರ್ಸ್ಸ ಉತ್ತಸಲ್ಲ ನಿನ್ನು ಚೋದಿತಃ |ov|| ಎಲ್ ದಕ್ಷ ಪುತ್ರಿಯಾದ ಸುರಸೆಯೆ ! ನಾನು ನಿನ್ನ ಮುಖದೊಳಗೆ ಪ್ರವೇಶಮಾಡಿದೆನಷ್ಟೆ! ನಿನಗೆ ನಮಸ್ಕಾರ ಮಾಡುವೆನು ಇನ್ನು ನಾನು ಸೀತಾದೇವಿಯಿರುವ ಕಡೆಗೆ ಹೊರಡುವೆನು, ನಿನಗೆ ಬ್ರಹ್ಮನು ಕೊಟ್ಟಿದ್ದ ವರವೂ ಸತ್ಯವಾಗಲಿ ||೨೩|| ಹೀಗೆಂದು ಹೇಳಿ, ಮಹಾವೀರನಾದ ಆ ಹನುಮಂತನು ಮುಂದಕ್ಕೆ ಪ್ರಯಾಣಮಾಡಲು ಉಪಕ್ರಮಿಸಿದನು ಆಮೇಲೆ, ಇದನ್ನು ಕಂಡು, ದೇವ ಗಂಧತ್ವ ಯಕ್ಷ ರಾಕ್ಷಸ ಸನ್ನ ಗರು ಅತಿಯಾಗಿ ವಿಸ್ಮಯವನ್ನು ಹೊಂದಿದರು , ಮುಂದ ಸಿಎ-ವಾಗುವುದೆಂದೂ ತಿಳಿದುಕೊಂ ಡರು ||೨೪-೨೫|| ಆಗ ಹನುಮಂತನಿಂದ ತಲೆಬಾಗಿ ನಮಸ್ಕರಿಸಲ್ಪಟ್ಟ ದೇವಮಾತೆಯಾದ ಸುರಸೆಯು, ಅವ ನಿಗೆ ಆಶೀದ್ವಾದವನ್ನು ಮಾಡಿ, ನಿನಗೆ ಜಯವಾಗಲೆಂದು ಹೇಳಿ, ಅತಿ ಹರ್ಷದಿಂದ ಹೊರಟು ಹೋದಳು ||೨೬|| ಆಮೇಲೆ ಮಹಾತೇಜಸ್ವಿಯಾದ ಹನುಮಂತನೂ ಕೂಡ, ಶ್ರಮಜನಿತವಾದ ಉಚ್ಚಾಸಾ ದಿಗಳೊಂದೂ ಇಲ್ಲದವನಾಗಿ ದೇವತೆಗಳಿಗೆಲ್ಲ ಅತಿಯಾಗಿ ವಿಸ್ಮಯವನ್ನು ಹುಟ್ಟಿಸುತ ಮಹಾ ವೇಗದಿಂದ ಹೊರಟುಬಿಟ್ಟನು ||೨೭|| ಬಳಿಕ, ಮಧ್ಯದಲ್ಲಿ ಸ್ವಲ್ಪವೂ ವಿಶ್ರಾಂತಿಸ್ಥಾನವಿಲ್ಲದ ಆಕಾಶಮಾರ್ಗದಲ್ಲಿ ಹೋಗುತಿ ರುವ ಆ ಹನುಮಂತನನ್ನು ಕಂಡು, ಸಮುದ್ರರಾಜನಿಂದ ಪ್ರೇರಿತನಾದ ಮೈನಾಕ ಪವ್ವತನು, ಹನು ಮಂತನಿಗೆ ಆತಿಧ್ಯವನ್ನು ಮಾಡಬೇಕೆಂದು ಇಚ್ಛಿಸಿದವನಾಗಿ, ಅನೇಕಶೃಂಗಪರಿವಾರಿತನಾಗಿ, ಸಮು ದ್ರದ ಒಳಗಡೆಯಿಂದ ಮಲಕ್ಕೆ ಎದ್ದನು ||೨೮|| - ಛವ"
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೨೭
ಗೋಚರ