ಸುಂದರಕಾಂಡಃ ಕೃಉಧೋ ದುಷ್ಟರಾಕ್ಷಸೊ ಮದ್ರಾಕ್ಯಂ ವೋ ಹಿತಂ ಭವೇತ್ | ನ ಭೀಷಯಧ್ವಂ ಸುದತೀಂ ನಮಸ್ಸುರುತ ಜಾನಕೀ || ಪ್ರಣಿಪಾತಪ್ರಸನ್ನಾ ಹಿ ಮೈಥಿಲೀ ಜನಕಾತ್ಮಜಾ | ಅಲಮೇಷಾ ಪರಿತ್ರಾತುಂ ರಾಕ್ಷಸೊ ಮಹತೋ ಭಯಾತ್ |೭| ಸ್ಪಷ್ಟೋ ಹೃದ್ಯ ಮಯಾ ದೃಷ್ಟೊ ದಾರುಣೋ ರೋಮಹರ್ಷಣ8 ರಾಕ್ಷಸಾನಾಮಭಾವಾಯ ಭತುರಸ್ಕಾಜಯಾಯ ಚ ||vi ಏವಮುಕ್ಕಾಜಟಯಾ ರಾಕ್ಷಸ್ಯ... ಕ್ರೋಧನರ್ಟಿತಾಃ | ಸರ್ವಾಏವಾಬ್ರುರ್ವ ಭೀತಾಃ ತ್ರಿಜಟಾಂ ತಾಮಿದಂ ವಚಃ | ಆಧಯಸ್ಸ ತ್ವಯಾ ದೃಷ್ಟಃ ಸ್ಪಷ್ಟೊ-ಯಂ ಕೀದೃಶೋ ನಿಶಿ ||೯|| ಶ್ರುತ್ವಾ ತದ್ರಾಕ್ಷಸೀವಾಕ್ಯಂ ತ್ರಿಜಟಾ ಪ್ರತ್ಯುವಾಚ ತಾಃ ||೧೦|| ಗಜದನ್ನಮಯೀಂ ದಿವ್ಯಾಂ ಶಿಬಿಕಾಮನ್ನರಿಕ್ಷಗಾನ' | ಯುಕ್ಕಾಂ ಹಂಸಸಹಸ್ರೇಣ ಸ್ವಯಮಾಸ್ಟಾಯ ರಾಘವಃ | ಶುಕ್ತಮಾಲ್ಯಾನ್ಸರಧರಃ ಲಕ್ಷಣೇನ ಸಮನ್ವಿತಃ ||೧೧|| -- - - ಎಲ್ ದುಷ್ಟ ರಾಕ್ಷಸಿಯರಾ ! ನಾನು ಹೇಳುವುದನ್ನು ಕೇಳಿ ನನ್ನ ಮಾತು ನಿಮಗೆ ಹಿತವಾಗುವುದು ಸುಮುಖಿಯಾದ ಜಾನಕಿಯನ್ನು ಹದರಿಸಬೇಡಿ, ಇವಳಿಗೆ ನಮಸ್ಕಾರ ಮಾಡಿರಿ ||೬|| ಎಲ್ ರಾಕ್ಷಸಿಯರು ! ಈ ಜನಕರಾಜಪುತ್ರಿಯಾದ ಸೀತೆಯು, ಕೇವು ನಮಸ್ಕಾರ ಮಾತ್ರದಿಂದಲೇ ನಮ್ಮಲ್ಲಿ ಪ್ರಸನ್ನಳಾಗುವಳು ಇವನು ಈಗ ನಮಗೆ ಪ್ರಸ್ತವಾಗಿರುವ ಭಯ ವನ್ನು ತಪ್ಪಿಸಿ ರಕ್ಷಿಸುವುದಕ್ಕೆ ಸಮರ್ಧಳಾಗಿರುವಳು ||೭|| ಈಗ ನಮ್ಮ ರಾಕ್ಷಸರಿಗೆಲ್ಲ ನಾಶಸೂಚಕವಾಗಿಯೂ ಇರತಿಗ ವಿಜಯಸೂಚಕವಾ ಗಿಯ ಇರುವ ಅತಿ ಘೋರವಾದ ಸ್ವಪ್ನ ವ್ರು ನನ್ನಿಂದ ಕಾಣಲ್ಪಟ್ಟಿತು , ಅದನ್ನು ಸ್ಮರಿಸಿಕೊಂ ಡರೇ ಮೈಯಲ್ಲಿ ರೋಮಾಂಚವಾಗುವುದು ||೮|| ಹೀಗೆಂದು ತ್ರಿಜಟೆಯಿಂದ ಹಳಲ್ಪಟ್ಟ ಆ ರಾಕ್ಷಸಿಯರೆಲ್ಲರೂ, ಸ್ವಭಾವತಃ ಕೋಪಶಾಲಿ ನಿಯರಾಗಿದ್ದರೂ, ತ್ರಿಜಟೆಯ ಮಾತನ್ನು ಕೇಳಿ ಬಹಳ ಭಯಪಟ್ಟು, ಅವಳನ್ನು ಕುರಿತು * ಎಲ್ ತ್ರಿಜಟೆ ! ಈ ರಾತ್ರಿ ನೀನು ನೋಡಿದ ಆ ಸ್ವಪ್ನ ವೆಂತಹುದು ? ಹೇಳು ' ಎಂದು ಕೇಳಿದಳು ಬಳಿಕ ಅವರ ಮಾತನ್ನು ಕೇಳಿ, ತ್ರಿಜಟೆಯು ಅವರಿಗೆ ಹೀಗೆ ಪ್ರತ್ಯುತ್ತರಹೇಳಿದಳು ||೯-೧೦|| ಎಲ್ ರಾಕ್ಷಸಿಯರಾ ! ನಾನು ಕಂಡ ಸ್ವಪ್ನವನ್ನು ಕೇಳಿ ಆನಯ ದಂತದಲ್ಲಿ ಮಾಡ ಲ್ಪಟ್ಟು ಸಾವಿರ ಹಂಸಪಕ್ಷಿಗಳಿಂದ ಯುಕ್ತವಾಗಿರುವ ಒಂದು ದಿವ್ಯವಾದ ಪಾಲಕಿಯು ಅಂತರಿ ಕ್ಷದಲ್ಲಿ ಸಂಚರಿಸುತ್ತಿದ್ದಿತು ಇತಹ ಪಾಲಕಿಯಲ್ಲಿ, ಶ್ರೀರಾಮನು ಶುಭ್ರವಾದ ಮಾಲಿಕೆಗಳನ್ನೂ ವಸ್ತ್ರಗಳನ್ನೂ ಧರಿಸಿಕೊಂಡು ಲಕ್ಷಣಯುಕ್ತನಾಗಿ ಕುಳಿತಿದ್ದನು ||೧೧||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೫೧
ಗೋಚರ