ಸುಂದರಕಾಂಡಃ ಧಿ ರಿಪುಃ ಸಮರ್ಧೆ ಹೀನೋ ವಾ ನೋಪೇಕೊ ರಾಜಧರ್ಮಣು ||೧೦|| ಇತ್ಯುಕ್ಯಾ ರಾವಣ8 ಕ್ರೋಧಾತ್ ಕಿಬ್ಬರ್ರಾ ನಾಮ ರಾಕ್ಷಸಾಃ | ವ್ಯಾಧಿದೇಶ ಮಹಾತೇಜಾಃ ನಿಗ್ರಹಾರ್ಧಂ ಹನೂಮತಃ |೧೩|| ತೇಷಾಮಶೀತಿಸಾಹಸ ಕಿರಾಣಾಂ ತರ ನಾಮ್ | ನಿರ್ಯ ಭವನಾತ್ ತಸ್ಮಾತ್ ಕೂಟಮುದ್ಧರಪಾಣಿನಾ ||೧೪! ತೇ ಕವಿಂ ತಂ ಸಮಾಸಾದ್ಯ ತೋರಣೇ ಸಮವಸ್ಥಿತಮ್ | ಪರಿವಾರ್ಯ ಹನೂಮನ್ನಂ ಸಹಸಾ ತಸ್ಸು ರಗ್ರತಃ" ow! ಹನೂಮಾನಪಿ ತೇಜಸ್ವೀ ಶ್ರೀರ್ವಾ ಪರ್ವತಸನ್ನಿವಃ | ಕ್ಷಿತಾನಾವಿಧ್ಯ ಲಾಲಂ ನನಾದ ಚ ಮಹಾಸ್ಸನಃ ||೧೬|| ಜಯತ್ಯತಿಬಿ ರಾಮೋ ಲಕ್ಷ್ಮಣಶ್ಚ ಮಹಾಬಲಃ | ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಲಿತಃ ||೧೭|| ದಾಸೋಹಂ ಕೋಸಲೇನ್ ಸ್ಯ ರಾಮಸ್ವಾಷ್ಟಕರ್ಮಣಃ | ಹನೂಮಾ೦ಛತ್ರುಸೈನ್ಯಾನಾಂ ನಿಹಾ ಮಾರುತಾತ್ಮಜಃ ||೧೪|| ದುರ್ಬಲನೇ ಆಗಿರಲಿ , ರಾಜಧರ್ಮಾನುವರ್ತಿಯಾದವನು ಅವನನ್ನು ಎಂದಿಗೂ ಉಪೇಕ್ಷಿಸ ಕೂಡದು ' ಎಂದು ಹೇಳಿದನು ||೧೧-೧೨|| ಹೀಗೆಂದು ಪ್ರಹಸ್ತನೊಡನೆ ಹೇಳಿ, ಮಹಾತೇಜಸ್ಸಮನ್ವಿತನಾದ ರಾವಣನು, ಹನುಮಂತ ನನ್ನು ನಿಗ್ರಹಿಸುವುದಕ್ಕೋಸ್ಕರ, ಕಿಂಕರರೆಂದು ಪ್ರಸಿದ್ಧರಾದ ರಾಕ್ಷಸರನ್ನು ನಿಯಮಿಸಿದನು || ಆಗ ಮಹಾಬಲಸಂಪನ್ನರಾದ ಎಂಬತ್ತು ಸಾಎರಮಂದಿ ಆ ಕಿಂಕರರೆಂಬ ರಾಕ್ಷಸರು, ಕೈಯಲ್ಲಿ ಗಿರಿಶಿಖರಗಳನ್ನೂ ಮುದ್ರಗಳನ್ನೂ ಹಿಡಿದುಕೊಂಡು, ಆ ಅರಮನೆಯಿಂದ ಹೊರಟರು|| ಬಳಿಕ ಆ ಕಿಂಕರರು, ಅಶೋಕವನದಲ್ಲಿ ಚೈತ್ಯಪ್ರಾಸಾದದ ಹೂರಬಾಗಿಲಿನ ಮೇಲೆ ಕುಳಿ ತುಕೊಂಡಿದ್ದ ಹನುಮಂತನನ್ನು ತಟ್ಟನೆ ಮುತ್ತಿಕೊಂಡು, ಮುಂದುಗಡೆ ನಿಂತವರಾದರು ||೧೫|| ಆಮೇಲೆ, ಪರ್ವತಾಕಾರನಾಗಿರುವ ಮಹಾತೇಜಸ್ವಿ ಯಾದ ಹನುಮಂತನೂ ಕೂಡ, ನೆಲದ ಮೇಲೆ ತನ್ನ ಬಾಲವನ್ನು ಅಪ್ಪಳಿಸಿ, ಗಟ್ಟಿಯಾಗಿ ಸಿಂಹನಾದಮಾಡಿ ಹೀಗೆ ಉದ್ಭವಿಸಿದನು! ಮಹಾಬಲನಾದ ಶ್ರೀರಾಮನು ಜಯಶಾಲಿಯಾಗಿರುವನು, ಮಹಾಬಲನಾದ ಅವನ ತಮ್ಮ ಲಕ್ಷಣನೂ ಜಯಶಾಲಿಯಾಗಿರುವನು, ಇಂತಹ ರಾಮನಿಂದ ಪರಿಪಾಲಿತನಾಗಿ ನನ್ನ ಒಡೆಯನಾದ ಸುಗ್ರೀವನು ಜಯಶಾಲಿಯಾಗಿರುವನು ||೧೭|| ನಾನು ಅಕ್ಲಿಷ್ಟಕಾರಿಯಾಗಿರುವ ಕೋಸಲದೇಶಾಧಿಪತಿಯಾದ ಶ್ರೀರಾಮನ ದಾಸನು ನನ್ನ ಹೆಸರು ಹನುಮಂತನೆಂದು, ನಾನು ವಾಯುದೇವನ ಪುತ್ರನು ಶತ್ರುಸೈನ್ಯಗಳನ್ನೆಲ್ಲ ನಾನು ನಾಶಪಡಿಸತಕ್ಕವನು ||೧೮|
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೭೧
ಗೋಚರ