kಎಂದರಕಾಂಡ ೬೧ ಸಾಧುರ್ವಾ ಯದಿ ವಾಸಾಧುಃ ಪರೈರೇಫ ಸಮರ್ಪಿತಃ | ಬ್ರುರ್ವ ಪರಾರ್ಥ೦ ಪರರ್ವಾ ನ ದೂತೋ ವಧಮರ್ಹತಿ ||೫|| ತಸ್ಯಾನುಜನ್ಯಾಧಿಕಧರ್ಮತತಂ ವಿಭೀಷಣಸ್ತೋತ್ರಮವಾಕ್ಯ ಮಿಸ್ಟಮ್ | ಜಗ್ರಾಹ ಬುದ್ಧಾ ಸುರಲೋಕಶತ್ರು ಮಹಾಬಲೋ ರಾಕ್ಷಸರಾಜಮುಖ್ಯಃ | ರಾವಉವಾಚ ಸಮ್ಯಗುಕ್ತಂ ಹಿ ಭವತಾ ದೂತವಧ್ಯಾ ವಿಗರ್ಹಿತಾ | ಅವಶ್ಯಂ ತು ವಧಾದನ್ಯಃ ಕ್ರಿಯತಾಮಸ್ಯ ನಿಗ್ರಹಃ |೬|| ಕವೀನಾಂ ಕಿಲ ಲಾಲಂ ಇಷ್ಟಂ ಭವತಿ ಭೂಷಣಮ್ | ತದಸ್ಯ ದೀಪ್ಯತಾಂ ಶೀಘ್ರ ತೇನ ದಗ್ಗೆ ನ ಗಚ್ಚ ತು |• || ಆಜ್ಞಾಪಯದ್ರಾಕ್ಷಸೇನ್ ಪುರಂ ಸರ್ವಂ ಚ ಸತ್ವ ರವಮ್ | ಲಾದ್ರೂ ಲೇನ ಪ್ರದೀಪ್‌ನ ರಭಿಃ ಪರಿಣೀಯತಾಮ್ ||೯|| ಕಪಿವಾಲಿಂ ಸಮಾದಾಯ ವಸ್ತೀಣವೇಷ್ಟಯತ್ ಖಲಃ | ಸಂವೇಷ್ಟನಾನೇ ಲಾಸ್ಟೋಲೇ ವ್ಯವರ್ಧತ ಮಹಾಕವಿಃ ||೧೦|| ಇವನು ಸಾಧುವೇ ಆಗಿರಲಿ, ಅಥವಾ ಅಸಾಧುವೇ ಆಗಲಿ, ಇವನು ಇತರರಿಂದ ಪ್ರೇರಿತ ನಾಗಿ ಇಲ್ಲಿಗೆ ಬಂದಿರುವನು ಹೀಗೆ ಪರರಿಂದ ಪ್ರೇರಿತನಾಗಿ ಅವರ ವಿಷಯವನ್ನು ಹೇಳತಕ್ಕವ ನಾಗಿರುವ ಈ ದೂತನು ವಧೆಗೆ ಅರ್ಹನಲ್ಲ ||೫|| ಈರೀತಿಯಾಗಿ ಧರ ತತ್ವ ವಿಶಿಷ್ಟವಾಗಿರುವಂತ ತನ್ನ ತಮ್ಮನಿಂದ ಹೇಳಲ್ಪಟ್ಟ ಮಾತನ್ನು, ದೇವಲೋಕಕ್ಕೆ ಶತ್ರುವೂ ಮಹಾಬಲನೂ ಆದ ರಾಕ್ಷಸೇಶ್ವರನು, ತನ್ನ ಮನಸ್ಸಿಗೆ ಇಷ್ಟವಾಗಿ ಒಪ್ಪಿಕೊಂಡನು ||೬|| ಅನಂತರ ಈರೀತಿಯಾಗಿ ಹೇಳಿದನು - ವತ್ತ ! ವಿಭೀಷಣ | ನೀನು ಹೇಳಿದ ಮಾತು ಬಹು ಚೆನ್ನಾಗಿರುವುದು ದೂತವಧವು ನಿಂದಿತವೇ ಅಹುದು ಇವನಿಗೆ ಅವಶ್ಯವಾಗಿ ವಧೆಯನ್ನು ಬಿಟ್ಟು ಮತ್ತಾವುದಾದರೊಂದು ಶಿಕ್ಷೆಯು ಮಾಡಲ್ಪಡಲಿ ||೭|| ನೀನು ಹೇಳಿದ ಅಂಗವೈರೂಪ್ಯವನ್ನೇ ಇವನಿಗೆ ಮಾಡೋಣ ಕಪಿಗಳಿಗೆ ಸ್ವಭಾವತಃ ಬಾಲವು ಅತಿಪ್ರಿಯವಾಗಿಯ ಅಲಂಕಾರವಾಗಿಯೂ ಇರುವುದಲ್ಲವೆ ! ಈಗ ಈ ಕಪಿಗೆ ಅಂತಹ ಬಾಲ ವನ್ನು ಸುಟ್ಟು ಬಿಡೋಣ ಬಳಿಕ ಬಾಲವನ್ನು ಸುಟ್ಟುಕೊಂಡು ಇಲ್ಲಿಂದ ಇವನು ಹೋಗಲಿ ||೮| ಹೀಗೆಂದು ವಿಭೀಷಣನಿಗೆ ಹೇಳಿ, ಅನಂತರ ಆ ರಾಕ್ಷಸೇಶ್ವರನು “ ಈ ಕಪಿಗೆ ಬಾಲವನ್ನು ಹೊತ್ತಿಸಿ ನಮ್ಮ ರಾಕ್ಷಸರು ಇದನ್ನು ಬೇಗನೆ ಊರಲ್ಲೆಲ್ಲ ಮೆರವಣಿಗೆ ಮಾಡಿಸುವರಾಗಲಿ' ಎಂದು ಆಜ್ಞಾಪಿಸಿದನು |FIl
- ಈರೀತಿಯಾಗಿ ಆಜ್ಞಾಪಿಸಿ, ಬಳಿಕ ಆ ನೀಚನಾದ ರಾವಣನು ಹನುಮಂತನ ಬಾಲವನ್ನು ಹಿಡಿದುಕೊಂಡು ಬಟ್ಟೆಯಿಂದ ಸುತ್ತಿಸಿದನು ಹೀಗೆ ತನ್ನ ಬಾಲಕ್ಕೆ ಬಟ್ಟೆಯನ್ನು ಸುತ್ತಿಸುವುದ ಕುಪಕ್ರಮಿಸಲಾಗಿ, ಹನುಮಂತನು ಬೆಳಯುವುದಕ್ಕುಪಕ್ರಮಿಸಿದನು ||೧೦||