-
ಶ್ರೀ ತತ್ವ ಸಂಗ್ರಹ ರಾಮಾಯಣ (ಸರು ಮಹಾವೀರಸ ವಾತಸ್ಯ ಸ್ಥಲ್ಯಂ ತಶಯೋಜನಮ್ | ವಸ್ತಮಾತ್ರಂ ಕ್ಷೇಕದೇಶೀ ವೇಷ್ಟಿತಂ ಮೃತಸಂಪ್ಪು ತಮಮ್ ||೧೧|| ಪುನಸ್ತದವೃಧೇ ವಾಲಂ ಪುನಶ್ಚಕು ವೇಷ್ಟನಮ್ | ತದೋನ್ನತಂ ತತೋ ವಾಲಂ ಅನೇಯಸ್ಯ ಧೀಮತಃ ||೧೨|| ಶತಯೋಜನಪರ್ಯನಂ ವಾಲಮಾನೇನ್ಮಹಾತ್ಮನಃ | ಯಾವಪ್ಪಸ್ತಂ ಪುರೀಮಧ್ಯೆ ತಾರಾಲಂ ಸುವೇಷ್ಟಿ ತುಮ್ |೧೩| ಯಾವದ್ಯಾವದ್ರಜಾಲಂ ತಾವತ್ತಾವದವರ್ಧಕ ! ಲಾಬ್ಲೂ ಲಂ ವಾಯುಪುತ್ರಸ್ಯ ತದದ್ದು ತಮಿನಾಭವತ್ ||೧೫| ಏಕೈಕವಾಸಸಃ ಸರ್ವೆ ಜ್ಞಾತಿಸಾಮನಮದ್ರಿಣಃ | ತೇಷಾಮಸ್ಯೆ ಕಮೆಕೆಂ ಚ ವಸ್ತ್ರಂ ಸರ್ವಂ ನಿವೇದಿತಮ್ | ರಾವಣೋಪೈಕವನ್ನೇಣ ಹರ್ಸ ವೀಧೀಮು ನಿರ್ಗತಃ ||೧೫|| ಮೃತಂ ತೈಲಂ ಸ್ನೇಹವಾತ್ರ ಸರ್ವಂ ತತ್ರ ನಿಯೋಜಿತಮ್ ||೧೬|| ಆಯತಂ ಯೋಜನಶತಂ ತತ್ ಸ್ಕೂಲಂ ದಶಯೋಜನಮ್ | ದುರಾರೋಹಂ ದುರ್ವಿಷಹಂ ವಾಲಮಾನೇನ್ಮಹಾತ್ಮನಃ |೧೭|| ಆ ಮಹಾಪೀರನ ಬಾಲವು ಹತ್ತು ಗಾವುದದಷ್ಟು ದಪ್ಪವಾಗಿಬಿಟ್ಟಿತು ಅದರ ಯಾವುದೋ ಒಂದು ಭಾಗದಲ್ಲಿ ತುಪ್ಪದಲ್ಲಿ ಅದ್ದಿದ ಬಟ್ಟೆಯನ್ನು ಸ್ವಲ್ಪ ಸುತ್ತಿದ ಹಾಗಾಯ್ತು ||೧೧|| ಆಗ ಮತ್ತೆ ಆ ಬಾಲವು ಬೆಳೆಯಿತು, ಮತ್ತೆ ಅದಕ್ಕೆ ಬಟ್ಟೆಯನ್ನು ಸುತ್ತಿದರು. ಆಮೇಲೆ ಆ ಆಂಜನೇಯನ ಬಾಲವು ಉದ್ದವಾಗಲಪಕ್ರಮಿಸಿತು ||೧೨|| ಆ ಮಹಾನುಭಾವನ ಬಾಲವು ನೂರುಗಾವುದದುದ್ದವಾಗಿ ಬೆಳೆಯಿತು ಆ ಲಂಕಾಪಟ್ಟಣ ದೊಳಗೆ ಎಷ್ಟು ಒಳ್ಳೆಯಿದ್ದಿತೋ, ಅದನ್ನೂ ಅವನ ಬಾಲವನ್ನು ಸುತ್ತುವುದಕ್ಕೆ ಸಾಕಾಗದೆ ಹೋಯ್ತು ||೧೩|| ಆಗ ಎಷ್ಟೆಷ್ಟು ಒಟ್ಟೆಗಳನ್ನು ತಂದು ರಾಶಿಹಾಕಿದರೂ, ಅಷ್ಟಕ್ಕೂ ಆ ವಾಯು ಪುತ್ರನ ಬಾಲವು ಬೆಳೆಯುತಹೋಯ್ತು ಅದು ಅಲ್ಲಿರತಕ್ಕವರಿಗೆಲ್ಲ ಆಶ್ಚರವಾಗಿ ಕಾಣಿಸಿತು ||೧೪|| ಆ ಲಂಕಾಪಟ್ಟಣದಲ್ಲಿದ್ದ ಸಮಸ್ತರಾದ ಜ್ಞಾತಿಗಳೂ ಸಾಮಂತರಾಜರೂ ಮಂತ್ರಿಗಳೂ ಒಂದೊಂದೇ ಬಟ್ಟೆಯನ್ನುಟ್ಟು ಕೊಂಡಿದ್ದರು ಅವರ ಇನ್ನೂಂದೊಂದು ಬಟ್ಟೆಯನ್ನೆಲ್ಲ ಹನುಮಂತನ ಬಾಲಕ್ಕೆ ಸುತ್ತುವುದಕ್ಕೋಸ್ಕರ ಕೊಟ್ಟು ಬಿಟ್ಟರು ಕೊನೆಗೆ ರಾವಣನೂ ಕೂಡ ಒಂದೇ ಬಟ್ಟೆ ಯನ್ನುಟ್ಟು ಕೊಂಡು ಬೀದಿಗೆ ಬಂದನು ಲಂಕಾಪಟ್ಟಣದಲ್ಲಿದ್ದ ತುಪ್ಪ, ಎಣ್ಣೆ, ಕೊನೆಗೆ ಜಿಡ್ಡಿರುವ ಪದಾರ್ಧವಾವುದಾದರೂ ಸರಿಯ, ಎಲ್ಲವನ್ನೂ ತಂದುತಂದು ಹನುಮಂತನ ಬಾಲದಮೇಲೆ ಸುರಿಯುತ್ತಿದ್ದರು ||೧೫-೧೬|| ಹೀಗೆ ನೂರು ಗಾವುದದುದ್ದವೂ ಹತ್ತು ಗಾವುದ ದಪ್ಪವೂ ಉಳ್ಳುದಾದ ಆ ಮಹಾನು ಭಾವನ ಬಾಲವು, ಯಾರಿಂದಲೂ ಹತ್ತಲ್ಪಡುವುದಕ್ಕಾಗಲಿ ಸಹಿಸಲ್ಪಡುವುದಕ್ಕಾಗಿ ಅಸಾಧ್ಯವಾ ಗುವಂತೆ ಬೆಳೆದುಬಿಟ್ಟಿತು ||೧೭||