[ಸರ್ಗ ಧಿ ಶ್ರೀ ತತ್ವ ಸಂಗ್ರಹ ರಾಮಾಯಣಂ ಸೀತಾದರ್ಶನವೃತ್ತಾಂ ಆನುಪೂರ್ವಣ ಮಾರುತೇಃ | ರಕ್ಷೆಯುದ್ದಾದಿಕಂ ತತ್ರ ಶುತ್ತಾ ವಿಸ್ಮಯಮಗತಾಃ ||೫|| ತತೋ ಹನುಮತಾ ಸಾಕಂ ಸೀತಾದರ್ಶನಮಿತಾಃ | ಸುಗ್ರೀವನನವಾಜಗುಃ ಕೃತಕಾರ್ಯಾವಲೀಮುಖಾಃ |೬|| ರಸಾಚೂತಪನಸದಾಕಾ ದೀನಾಂ ಫಲಾನ್ಯಪಿ | ಖರ್ಜೂರಕದಳೀನಾಂ ಚ ಜಗ್ಗಾ-ತಿರಸವನ್ತಿ ಚ ||೬|| ಪೀತಾ ಮಧ್ವನಿ ಸಂಪೂರ್ಣ ಅಧ್ಯಕ್ರಮನಿಪೀಡಿತಾಃ | ವನಮಾರ್ಲಾ ನಿಹತ್ಯೆವ ಪ್ರತಿಬನ್ನಂ ನಿವತ ಚ || ಹಸ್ತಗಾಹ್ಯಫಲಾನ್ಯಾಶು ಭಕ್ಷಯಿತ್ಪಾಥ ವಾನರಾಃ | ಯಾಚಕೇಳ್ಕೊಪಿ ಮಧುರಂ ವಿಪ್ರೇಭ್ಯಃ ಪ್ರದದುಃ ಫಲಮ್ ||೯|| ಫಲಂ ಮಧು ಚ ಸಂಪೂರ್ಣ೦ ಭುಕ್ಕಾ ವಾನರಸೈನಿಕಾಃ | ತುಪ್ಪಾ ಪುಷ್ಠಾಸ್ತತೋ ಭೂತ್ವಾ ವಿಜಹುರ್ವನಮಧ್ಯಗಾಃ ||೧೦|| - - - ಆಮೇಲೆ ಮೊದಲಿಂದ ಕ್ರಮವಾಗಿ ಸೀತಾದರ್ಶನವೃತ್ತಾಂತವನ್ನೂ ರಾಕ್ಷಸಯುದ್ಧ ಮೊದ ೮ಾದುದನ್ನೂ ಅವನ ಮುಖದಿಂದ ಕೇಳಿ, ಅವರೆಲ್ಲರೂ ಬಹಳವಾಗಿ ಆಶ್ಚಯ್ಯಪಟ್ಟರು ||೫|| ಅನಂತರ, ಕೃತಕಾರರಾದ ಆ ವಾನರರೆಲ್ಲರೂ, ಸೀತೆಯ ದರ್ಶನವಾದುದರಿಂದ ಸಂತೋಷ ಯುಕ್ತರಾಗಿ, ಹನುಮಂತನೊಡನೆ ಅಲ್ಲಿಂದ ಹೊರಟು, ದಾರಿಯಲ್ಲಿ ಸಿಕ್ಕಿದ ಸುಗ್ರೀವನ ಮಧು ವನಕ್ಕೆ ಬಂದರು |೬|| ಮಾರ್ಗಾಯಸದಿಂದ ಅತಿಯಾಗಿ ಬಳಲಿಹೋಗಿದ್ದ ಆ ವಾನರರು, ಅಲ್ಲಿ ಅತಿ ರಸಭರಿತವಾ ರುವ ಮಾವು ಹಲಸು ದ್ರಾಕ್ಷೆ ಮುಂತಾದ ಫಲಗಳನ್ನೂ, ಖರ್ಜೂರ ಬಾಳೆ ಮುಂತಾದ ಹಣ್ಣು ಗಳನ್ನೂ ಯಥೇಚ್ಛವಾಗಿ ತಿಂದು, ಸಂಪೂರ್ಣವಾಗಿ ಮಧುವನ್ನು ಕುಡಿದು, ತಮ್ಮನ್ನು ತಡೆಯು ವುದಕ್ಕೆ ಬಂದ ತೋಟದ ಕಾವಲುಗಾರರನ್ನೆಲ್ಲ ಹೊಡೆದು, ಸ್ವಲ್ಪವೂ ತಡೆಯೇ ಇಲ್ಲದೆ, ಕೈಯೆ ಆದರೆ ಸಿಕ್ಕುತಿದ್ದ ಹಣ್ಣುಗಳನ್ನೆಲ್ಲ ಬೇಗಬೇಗನೆ ತಿಂದು, ಯಾಚಕರಾಗಿ ಬಂದಂತಹ ಬ್ರಾಹ್ಮಣ ರಿಗೂ ಬೇಕಾದಷ್ಟು ಮಧುರವಾದ ಫಲಗಳನ್ನೂ ಕೊಟ್ಟು ಬಿಟ್ಟರು ||೭-೯|| ಹೀಗೆ ಆ ವಾನರಸೈನಿಕರು ಫಲವನ್ನೂ ಮಧುವನ್ನೂ ಸಂಪೂರ್ಣವಾಗಿ ಉಪಭೋಗಿಸಿ, ಬಳಿಕ ಆನಂದಾತಿಶಯವನ್ನೂ ಕಾಯ ಪುಷ್ಟಿಯನ್ನೂ ಪಡೆದವರಾಗಿ, ಆ ಮಧುವನದ ಮಧ್ಯದಲ್ಲಿ ಆಟವಾಡುತ್ತಿದ್ದರು ||೧೦{!
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೦೪
ಗೋಚರ