೧oಳ ಶ್ರೀ ತತ್ವ ಸಂಗ್ರಹ ರಾಮಾಯಣಂ ಸರ್ಗ ತರ್ಪಯೇಚ ವಿಶೇಷೇಣ ದಶಾಂಕಂ ಶುದ್ದವಾರಿಣಾ | ಪುಷ್ಪಾಕ್ಷತಾದಿಯುಕ್ತನ ಜಲೇ ಸಂಪೂಜ್ಯ ಪೂರ್ವವತ್ ||೬|| ಕೃತಾ ಪಡಬ್ಧಂ ಧೃತಾಥ ಮೂಲಮಣ ಮyವಿತ್ | ಶ್ರೀರಾಮಪಾದುಕಾಂ ತರ್ಪಯಾಮಿತ್ಯುಚ್ಚಾರ್ಯ ತರ್ಪಯೇತ್ ||೧|| ಸಮಾಪ್ಯ ತರ್ಪಣಂ (ಸ್ಥಃ ಗೃಹ್ಯತಃ ಸವಿತೇನಲೇ | ರಾಮಂ ಧ್ಯಾತ್ಸಾ ಸಮಭ್ಯಚ ತಜ್ಜೆ ಹಾಯಾಂ ಹುನೇದ್ದ ವಿಃ ||೨|| ತತೋ ಬಿಲ್ಪ ದಳ್ಳಿಃ ಪುಷ್ಪ ಪತ್ತೆರಪಿ ಹುತಾಶನೇ | ಪೂರ್ವೋಕ್ತನ ಪ್ರಕಾರೇಣ ರಾಮಮಾವಾಹ್ಯ ಪೂಜಯೇತ್ ||೩|| ಮಧುರತ್ರಯಸಂಯುಕ್ತಿ ಪರ್ವಾ ಪಾಯಸೇನ ವಾ | ತಲೈರ್ವಾನ್ಯ ತರೈರೇಷಾಂ ಜುಹುಯಾನ್ಮೂಲಮನ್ಮತಃ |೬೪|| ಹುನೇತ್ ಪ್ರಧಾನಹೋಮಾನೇ ತಗ್ನಾವರದೇವತಾಃ || ಹೋಮಶೇಷಂ ಸಮಾಖ್ಯಾ ಥ ಪಾರ್ವದೇಲ್ಲೊ ಬರಿಂ ಹರೇತ್ ||೩೫|| ಆ ಬಳಿಕ, ಜಲದಲ್ಲಿ ಶ್ರೀರಾಮಚಂದ್ರನನ್ನು ಪೂಜಿಸಿ, ಗಂಧ ಪುಷ್ಪ ಅಕ್ಷತೆ ಮೊದಲಾದು ವುಗಳಿಂದ ಮಿಶ್ರಿತವಾದ ಶುದ್ಧ ಜಲದಿಂದ, ಜಪದಲ್ಲಿ ಹತ್ತನೆಯೊಂದು ಭಾಗದಷ್ಟು ತರ್ಪಣಮಾಡ ತಕ್ಕುದು ||೬೦|| ತರ್ಪಣಮಾಡುವಾಗ, ಮೊದಲು ಷಡಂಗನ್ಯಾಸಮಾಡಿ, ಬಳಿಕ ಮೂಲಮಂತ್ರದಿಂದ ಧಾರಣಮಾಡಿ, ಆಮೇಲೆ “ ಶ್ರೀರಾಮಪಾದುಕಾಂ ತರ್ಪಯಾಮಿ ' ಎಂದು ಹೇಳಿಕೊಂಡು ತರ್ಪಣಮಾಡತಕ್ಕುದು ||೧|| ಹೀಗೆ ತರ್ಪಣವನ್ನು ಮುಗಿಯಿಸಿಕೊಂಡು, ಸ್ವಸ್ಥ ಮಾನಸನಾಗಿ, ಸ್ವಗೃಹ್ಯಸೂತ್ರೋಕ್ತ ವಿಧಿಯಿಂದ ಅಗ್ನಿಯನ್ನು ಸ್ಥಾಪನೆಮಾಡಿ, ಅದರಲ್ಲಿ ಶ್ರೀರಾಮನನ್ನು ಧ್ಯಾನಿಸಿ, ಆ ಅಗ್ನಿಯ ಜಿ.ಯಲ್ಲಿ ಹವಿಸ್ಸನ್ನು ಹೋಮಮಾಡಬೇಕು ||೬೨|| ಆ ಬಳಿಕ, ಪೂರೋಕಪ್ರಕಾರವಾಗಿ ಅಗ್ನಿಯಲ್ಲಿ ಶ್ರೀರಾಮನನ್ನು ಆವಾಹನೆಮಾಡಿ, ಬಿಲ್ವ ದಳಗಳಿಂದಕೂ ಪುಷ್ಪಗಳಿಂದಲೂ ಪೂಜಿಸತಕ್ಕುದು ||೩|| ಕ್ಷೀರ ಮಧು ಶರ್ಕರೆಗಳಿಂದ ಮಿಶ್ರಿತವಾದ ಪದ್ಮಗಳಿಂದಾಗಲಿ, ಪಾಯಸದಿಂದಾಗಲಿ, ತಿಲಗಳಿಂದಾಗಲಿ, ಇವುಗಳಲ್ಲಿ ಯಾವುದರಿಂದಲಾದರೂ-ಶ್ರೀರಾಮಮಲಮಂತ್ರದಿಂದ ಹೋಮ ಮಾಡತಕ್ಕುದು ||೬೪|| ಹೀಗೆ ಪ್ರಧಾನಹೋಮವಾದಮೇಲೆ, ಆವರಣದೇವತೆಗಳಿಗೆ ಹೋಮವನ್ನೂ ಅಗ್ನಿಷ್ಟ ಕೃದ್ರೋಮವನ್ನೂ ಮಾಡತಕ್ಕುದು , ಆಮೇಲೆ ಹೋಮಶೇಷವನ್ನು ಮುಗಿಸಿ, ಪಾರಿಷದ್ಯರಿ ಗೆಲ್ಲ ಬಲಿಯನ್ನು ಹಾಕಬೇಕು ||೬೫||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೩೦
ಗೋಚರ