ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

O ಸಂಗ್ರಹ ರಾಮಾಯಣಂ [ಸರ್ಗ ಯದಿ ಹೋಮೇ ನ ಶಕ್ತಿಃ ಸ್ಯಾತ್ ಪೂಜಾಯಾಂ ತರ್ಪಣೇ ತಥಾ | ತಾವತ್ಸಂಖ್ಯ ಜವಾಟ್ಸಪಭೋಜನಾದ್ರಾ ಸಮಗ್ರತಾ ||೩೦|| ಯದ್ಯದಜ್ಞಂ ವಿಡೀಯೇತ ತತ್ತ್ವಜ್ಞಾದಿಗು ಜಪಃ | ಕರ್ತವ್ಯ ಸಾಜ್ ಸಿದ್ಧ,ರ್ಥಂ ತದಶನ ಭಕ್ತಿತಃ ||೭೩|| ಏವಂ ಕೃತೇ ಮನ್ನಸಿದ್ಧಿ, ಭವಿಷ್ಯತಿ ನ ಸಂಶಯಃ | ನಿರ್ದೇ ಮನ್ನರಾಜೇತ್ರ ಪ್ರಯೋಗಾಃ ಸನ್ನಿ ಭೂರಿಶಃ ||೩೪| ಕಿಂ ತು ಪ್ರಯೋಗಕರ್ತಣಾಂ ಪರಲೋಕೋ ನ ವಿದ್ಯತೇ | ಪ್ರಯೋಗಸಿದ್ಧಿರೇ ಪಾಂ ಫಲಮನ್ಯನ್ನ ವಿದ್ಯತೇ ||೭೫|| ನಿಷ್ಕಾಮಾನಾಂ ಚ ಭಕ್ತಾನಾಂ ಜಪಹೋಮಾದಿಕರ್ಮಸು | ಮುಕ್ತಿರೇವ ಫಲಂ ತೇಷಾಂ ಇಹ ಕಿಂಚಿನ್ನ ವಿದ್ಯತೇ ||೭|| ವಿರ್ದ್ಯಾ ಬ್ರಹ್ಮಾಸ್ತಮಾದಾಯ ಮತಕಾದೌ ನ ಮೋಚಯೇತ್ | ನಾಯಂ ಮುಕ್ತಿ ಪ್ರದೋ ಮನ್ನೊ ಮಾರಣಾದ್ಯ ನಿಯುಜ್ಯತಾಮ್ |೩೭|| ಹೀಗೆ ವಿಹಿತವಾದ ಹೋಮವನ್ನೂ ಪೂಜೆಯನ್ನೂ ತರ್ಪಣವನ್ನೂ ಮಾಡುವುದಕ್ಕೆ ಶಕ್ತಿ ಯಿಲ್ಲ ಪಕ್ಷದಲ್ಲಿ, ಮುಂದೆ ಹೇಳುವಷ್ಟು ಸಂಖ್ಯೆಯಾಗುವಂತೆ ಜಪವನ್ನಾಗಲಿ-ಬ್ರಾಹ್ಮಣಭೋಜ ನವನ್ನಾಗಿ ಮಾಡಿದರೆ- ಪುರಶ್ಚರಣೆಯು ಸಾಂಗವಾಗುವುದು ||೭೨|| ಯಾವಯಾವ ಅಂಗವು ಹೀನವಾಗುವುದೋ, ಅದದು ಪರಿಪೂರ್ಣವಾಗುವುದಕ್ಕಾಗಿ, ಅಂಗ ಗಳನ್ನು ಕ್ರಮವಾಗಿ ಪೂರ್ತಿಮಾಡಲು ಶಕ್ತಿಯಿಲ್ಲದವನು, ಭಕ್ತಿಯಿಂದ ಆ ಅಂಗಸಂಖ್ಯೆಗೆರಡ ರಷ್ಟು ಜಪವನ್ನು ಮಾಡತಕ್ಕದು ||೭|| ಹೀಗೆ ಮಾಡಿದರೆ ಮಂತ್ರವು ಸಿದ್ಧಿಸುವುದು , ಇದರಲ್ಲಿ ಸಂಶಯವಿಲ್ಲ ಈ ಮಂತ್ರರಾಜವು ಸಿದ್ದಿಸಲಾಗಿ, ಇದರಲ್ಲಿಯೇ ವಶ್ಯ ಆಕರ್ಷಣ ಮುಂತಾದ ಪ್ರಯೋಗಗಳು ಅನೇಕವಾಗಿ ಉಂಟಾ ಗುವುವು. ಆದರೆ, ಈ ಪ್ರಯೋಗಗಳನ್ನು ಮಾಡತಕ್ಕವರಿಗೆ ಪರಲೋಕವು ತಪ್ಪಿ ಹೋಗುವುದು ಇವರಿಗೆ ಈ ಪ್ರಯೋಗಸಿದ್ಧಿಯೊಂದೇ ಹೊರತು ಮತ್ತಾವ ಫಲವೂ ಇಲ್ಲ ||೭೪-೭೫|| ನಿಷ್ಕಾಮರಾಗಿ ಪುರಶ್ಚರಣೆಮಾಡತಕ್ಕ ಭಕ್ತರಿಗೆ, ಜಪ ಹೋಮ ಮುಂತಾದ ಕರ ಗಳಿಂದ ಮುಕಿಯೇ ಸಿದ್ದಿಸುವುದು , ಅವರಿಗೆ ಈ ಲೋಕದಲ್ಲಿ ಯಾವುದೊಂದು ಫಲವೂ ಇಲ್ಲ ||೭೬|| ಲೋಕದಲ್ಲಿ ಪ್ರಾಜ್ಞನಾದವನು ಬ್ರಹ್ಮಾಸ್ತ್ರವನ್ನು ಸಂಪಾದಿಸಿಕೊಂಡು ಸೊಳ್ಳೆ ಮುಂತಾದು ವುಗಳ ಮೇಲೆ ಬಿಡಲಾರನಲ್ಲವೆ ! ಇದರಂತೆಯೇ, ಮುಕ್ತಿಯನ್ನು ಕೊಡತಕ್ಕುದಾಗಿರುವ ಈ ಶ್ರೀ ರಾಮಮಂತ್ರವನ್ನು ಮಾರಣಾದಿಪ್ರಯೋಗಗಳಲ್ಲಿ ವಿನಿಯೋಗಿಸಬಾರದು ||೭೭||