೧೪] ಸುಂದರಕಾಂಡ ೧೧೩ ೧೧೩ ಆಥ ಶ್ರೀಮತ್ಸುನ್ನರಕಾಸ್ಟ್ ಚತುರ್ದಶಃ ಸರ್ಗಃ ಶ್ರೀಪಾರ್ವತ್ಯುವಾಚ ಉತ್ತಃ ಶ್ರುತಾ ಮಹಾದೇವ ಕ್ರಿಯೋಪಾಸ್ತಿ ರ್ಹರೇ ಸ್ಪುಟವ" | ಅಧುನಾ ಭಾವನೋಪಾಸ್ಲಿಂ ಪ್ರೋತುಮಿಚ್ಛಾಮಿ ತತಃ ||೧|| ಸಂಸಾರಶುಷ್ಕವಿಪಿನೇ ತಾಪತ್ರಯದವಾಗ್ನಿನಾ | ತಪ್ಪೋ ಜೆಬೇವಿಪುಃ ಕೋ ವಾ ನೇಚೈದ್ರಾಮಕಥಾಸುಧಾ ||೨| ಶ್ರೀಶಿವಉವಾಚ ನಾತಿಸಕೋ ನ ಚಾಸಕೊ ಯದಾ ಸ್ವಾತ' ಸಂಸ್ಕೃತ ನರಃ | ತದಾ ಪ್ರೋಕ್ತಾ ಕಿಯೋಪಾಸ್ತಿಃ ನಿಸ್ಪೃಹಸ್ಯೆವ ಭಾವನಾ ||೩|| ಜ್ಞಾನಸ್ಯ ಭಾವನೋಪಾಸ್ತೇ ನ ಭೇದೋಪಿ ಕಿಂ ತು ತತ್ | ಪೂರ್ಣರೂಪೇಣ ರಾಮಸ್ಯ ಭಾವನಾಮಾತ್ರವಲ್ಲ ನೇ ||8|| ಸುಂದರಕಾಂಡದಲ್ಲಿ ಹದಿನಾಲ್ಕನೆಯ ಸರ್ಗವು ಈ . ಶ್ರೀ ಪಾಶ್ವತಿಯು ಪರಮೇಶ್ವರನನ್ನು ಪ್ರಾರ್ಥಿಸುವಳು ಎಲೆ ಮಹಾದೇವನ ! ನಾನು ತಮ್ಮ ಮುಖದಿಂದ ಶ್ರೀಹರಿಯ ಕ್ರಿಯೋಪಾಸನಾವಿಧಿ ಯನ್ನು ಕೇಳಿ ತಿಳಿದುಕೊಂಡೆನು , ಈಗ ಭಾವನೋಪಾಸನೆಯ ವಿಧಿಯನ್ನು ಯಥಾವತ್ತಾಗಿ ಕೇಳಬೇಕೆಂದು ಇಚ್ಚಿಸುತಿರುವೆನು ||೧|| ಈ ಸಂಸಾರವೆಂಬ ಶುಷ್ಕ ವಾದ ಅರಣ್ಯದಲ್ಲಿ ತಾಪತ್ರಯವೆಂಬ ಕಾಡುಗಿನಿಂದ ಸಂತಪ್ಪ ನಾದ ಯಾವನು ತಾನೆ, ತಾನು ಬದುಕುವುದಕ್ಕಾಗಿ ಶ್ರೀರಾಮನ ಕಥಯೆಂಬ ಅಮೃತವನ್ನು ಅಪೇಕ್ಷಿಸದಿರುವನು ? ||೨|| ಶ್ರೀ ಪರಮೇಶ್ವರನು ಉತ್ತರ ಹೇಳುವನು - ಎಲೌ ಪ್ರಿಯ | ಯಾವ ಪುರುಷನು ಸಂಸಾರದಲ್ಲಿ ಅತ್ಯಂತವಾಗಿ ಸಕ್ಕನಲ್ಲ ದಯ ಸಂಪೂರ್ಣವಾಗಿ ಅದನ್ನು ಬಿಡದೆಯ ಇರುವನೋ, ಅವನಿಗೇ ಕ್ರಿಯೋಪಾಸನೆಯು ವಿಹಿತವಾಗಿ ರುವುದು , ಭಾವನೋಪಾಸನೆಯಾದರೋ, ಸುತರಾಂ ಸಂಸಾರಾಸಕ್ತಿಶೂನ್ಯನಾದವನಿಗೆ ಮಾತ್ರವೇ ವಿಹಿತವಾದುದು ||೩|| ಜ್ಞಾನವೆಂಬುದಕ್ಕೂ ಭಾವನೋಪಾಸನೆಯಂಬುದಕ್ಕೂ ಸ್ವಲ್ಪವೂ ಭೇದವೇ , ಆದರೆ, ಎಲೌ ಪಾಶ್ವತಿ ! ಪರಿಪೂರ್ಣರೂಪದಿಂದ ಶ್ರೀರಾಮನನ್ನು ಧ್ಯಾನಿಸುವುದೇ ಭಾವನೋ ಪಾಸನೆಯನ್ನಿಸುವುದು ||೪|| 15
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೩೫
ಗೋಚರ