11V [ಸಗ ಶ್ರೀ ತತ್ವ ಸಂಗ್ರಹ ರಾಮಾಯಣಂ ನ ಭಾವೋಪಾಸನಂ ಭದ್ರ ಶ್ರವಣಾದಿತ್ರಯಂ ವಿನಾ || ನವನೀತಮಿವ ಕ್ಷೀರತಾಪದಧ್ಯಾದಿಕ೦ ವಿನಾ ||೫|| ವದ ಸರ್ವೆ ವೇದಾನ್ತಾ ಸ್ವಾತ್ಮಾನಮಿಹ ನಿಶ್ಚಯಃ | ತತ್ ಕುರ್ಯಾಚ್ಛ ವಣಂ ತೇನ ಸ್ವಾತ್ಮಾಸಂಭಾವನಾಕ್ಷಯಃ ||೬|| ಶ್ರವಣಾನ್ನಿತಂ ವಸ್ತುಜನನಂ ಯುಕ್ತಿಭಿಃ ಸದಾ | ಮನನಂ ತೇನ ದೇಹಾತ್ಮ ಧೀಜಗತೃತ್ಯತಾಕ್ಷಯಃ |೭|| ರಾಮೋಹಮಿತಿ ಧೀವೃತ್ತಿಧಾರಾ ಧ್ಯಾನಮಿತೀರ್ಯತೇ | ನೃತ್ಯ ವರಾನನ್ನರಿತಂ ತೇನ ಸಾದ್ಯಾ ಸನಾಕ್ಷಯಃ ||೯|| ಏವಂ ಸಂಸಿದ್ಧ ಬೋಧಸ್ಯ ರಾಮಭಕ್ತಸ್ಯ ಭಾಮಿನಿ | ಭಾವರೂಪೋಪಾಸನಂ ಯತ್ ಪೊಕ್ಕಂ ವಕ್ಷೆ ನಿಬೋಧ ತತ್ ||೯|| ಹಿತ್ತಾ ದೇಹಾತ್ಮತಾಭಾವಂ ಚಿದಾತ್ಮತ್ಯಾಭಿಮಾನತಃ | ದ್ವೀಜ ಮಾದೌ ಪಾಸ್ತವ್ಯಂ ಗುರುವಾಕ್ಕೆರ್ಮುಮುಕ್ಷುಕಣ jn೦|| ಎಲ್ ಭದ್ರೆ ! ಹಾಲುಕಾಯಿಸುವುದು ಮೊಸರುಕಡೆಯುವುದು ಮುಂತಾದುದನ್ನೆಲ್ಲ ಬಿಟ್ಟರೆ ಬೆಣ್ಣೆ ಹೇಗೆ ಸಿಕ್ಕುವುದಿಲ್ಲವೋ, ಹಾಗೆ ಶ್ರವಣ ಮನನ ನಿದಿಧ್ಯಾಸನಗಳನ್ನು ಬಿಟ್ಟರೆ ಭಾವನೋಪಾಸನೆ ಲಭ್ಯವಾಗುವುದಿಲ್ಲ ||೫|| ಸಮಸ್ತ ವೇದಾಂತವಚನಗಳೂ ಆತ್ಮಸ್ವರೂಪವನ್ನೇ ಬೋಧಿಸುತ್ತಿರುವುವು , ಇದು ನಿಶ್ಚ ಯವು , ಅದು ಕಾರಣ, ಪ್ರಧಮತಃ ವೇದಾಂತವಾಕ್ಯಶ್ರವಣಮಾಡಬೇಕು ಇದರಿಂದ, ಆತ್ಮನು ಇಲ್ಲವೆಂಬ ಭಾವನೆ ಕ್ಷಯಿಸುವದು ||೬|| - ಹೀಗೆ ಶ್ರವಣದಿಂದ ನಿಶ್ಚಿತವಾದ ಅರ್ಧವನ್ನು ಸದಾ ಯುಕ್ತಿ (ಕಾಧ್ಯಕಾರಣಭಾವ ವಿವೇಚನ)ಗಳಿಂದ ಚಿಂತಿಸುತ್ತಿರುವುದೇ ಮನನವೆನ್ನಿಸುವುದು, ಇದರಿಂದ, ದೇಹವೇ ಆತ್ಮವೆಂಬ ಭಾವನೆಯ-ಜಗತ್ತು ಸತ್ಯವೆಂಬ ಭಾವನೆಯ ಕ್ಷಯಿಸುವುವು ||೭||
- ರಾಮೋಹಂ ' (ನಾನು ರಾಮನು) ಎಂಬುದಾಗಿ ಧಾರಾಕಾರವಾಗಿ ಬುದ್ದಿ ವೃತ್ತಿ ಯುಂಟಾಗಿ-ಇದಕ್ಕೆ ಮಧ್ಯದಲ್ಲಿ ಇತರವಿಧವಾದ ವೃತ್ತಿಗಳು ಉದಯಿಸದೆ ರಾಮೋಹಂ ? ಎಂಬ ವೃತ್ತಿಯೇ ಸ್ಥಿರವಾಗಿದ್ದರೆ, ಇದು ಧ್ಯಾನವೆಂದು ಹೇಳಲ್ಪಡುವುದು , ಇದರಿಂದ ವಾಸ ನೆಯು ಕ್ಷಯಿಸುವುದು ||೮||
ಎಲೌ ಪಾಶ್ವತಿ ! ಹೀಗೆ ಪ್ರಬೋಧಸ್ಥಿತಿಯುಂಟಾದವನಾಗಿ ರಾಮಭಕ್ತನು ಮಾಡತಕ್ಕ ಭಾವನಾರೂಪವಾದ ಉಪಾಸನೆಯಾವುದುಂಟೋ, ಅದನ್ನು ಈಗ ಹೇಳುವೆನು ||೯|| ಮೋಕ್ಷಕಾಮನಾದವನು, ಪ್ರಧಮತಃ ಸದ್ಗುರುವನ್ನು ಆಶ್ರಯಿಸಿ, ಅವನ ಉಪದೇಶದಿಂದ ದೇಹಾಭಾವನೆಯನ್ನು ಬಿಡಬೇಕುಬಳಿಕ, ಚಿತ್ತಿನಲ್ಲಿ ಆತ್ಮತ್ವಭಾವನೆಯಂಬ ಬ್ರಾಹ್ಮಣ್ಯ ವನ್ನು ಪಡೆಯಬೇಕು ಆಮೇಲೆ ತನ್ನ ಭಾಗ್ಯವಿಶೇಷವಂಒ ಉದಯಾಚಲದಲ್ಲಿ ಗುರುವಿನ ಅನು