೧೪] ಮಂದರಕಾಂಡ ಜಾತಾನಶೇರ್ಪಾ ಹಿತ್ವ ಮೃರ್ಗಾ ಸ್ತ್ರೀಯಾಕೆ ಪರಾಹಪಿ | ವೀಕ್ಷಾ ಪ್ಯಹಂ ಚ ತದ್ವತ್ ಸ್ಯಾಂ ಇತಿ ವೇದಾತ್ರ ಕೊಪಿ ನ ||೨೭|| ಸಂಸಾರವೃದ್ಧಯೇ ಯರ್ತ್ನ ಕುರ್ವನ್ನು ಸದಾ ಬಹು | ತಾಮಲಬ್ ವ ತನ್ನಾಶಂ ದೃಪ್ಪಾ ಪಿ ಯತೇ ಪುನಃ |೫|| ಕೋ ವಾ ವಾತಿ ದಾರಿದ್ರ) ತ್ರಿಯಂ ಕೋ ವಾ ನ ವಾಣುತಿ | ಯತ್ಪಾದಯತ್ನತೋ ವಾಸಿ ಭವಿತವ್ಯಂ ಭವೇದ್ದು, ನಮ್ ||೫|| ಯದ್ಘಾವಿ ತದ್ಭವತ್ಯೇವ ಯದಭಾವಿ ನ ತದ್ಭವೇತ್ | ಇತಿ ನಿತ್ಯ ಯೇ ಸನ್ತಿ ತೇಷಾಂ ಸೌಖ್ಯಂ ನ ಚಾನ್ಯಥಾ ||೩೦| ಯಶ್ಚಾಜ್ಯೋ ಯಶ್ಚ ಸರ್ವಜ್ಞಃ ತಯೋರೇವ ಸುಖಂ ಭವೇತ್ | ಅಜ್ಜರ್ಸ್ಪ ಸರ್ವವಿನ್ನನ್ನೋ ಯಸ್ಸ ದುಃಖೈಕಭಾಜನವ' ||೧|| S ಪ್ರಪಂಚದಲ್ಲಿ ತಮ್ಮವರೂ ಇತರರೂ ಕೂಡ ಎಷ್ಟೋ ಜನರು ಈ ಸಂಸಾರದಲ್ಲಿ ಹುಟ್ಟಿ ಸಮಸ್ತವನ್ನೂ ಬಿಟ್ಟು ಬಿಟ್ಟು ಮೃತರಾಗಿರುವುದನ್ನು ಪ್ರತಿಕ್ಷಣವೂ ನೋಡುತ್ತಿದ್ದರೂ, ನಾನೂ ಇವರಂತೆಯೇ ಆಗುವೆನೆಂದು-ಈ ಪ್ರಪಂಚದಲ್ಲಿ ಯಾವನೊಬ್ಬನೂ ಯೋಚಿಸದಿರುವನಲ್ಲ ! ||೫೭! ಈ ಸಂಸಾರದಲ್ಲಿ ನಾನಾವಿಧವಾದ ಅಭಿವೃದ್ಧಿಯನ್ನು ಪಡೆಯಬೇಕೆಂದು ಸರದಾ ಬಹುವಿಧವಾಗಿ ಪ್ರಯತ್ನಗಳನ್ನು ಮಾಡುತ-ತನ್ನ ಉದ್ದೇಶಾನುಗುಣವಾದ ಅಭಿವೃದ್ಧಿ ಯವು ದನ್ನೂ ಪಡೆಯದೆಯೇ ತನ್ನ ಪ್ರಯತ್ನವೆಲ್ಲ ವ್ಯರ್ಧವಾಗುವುದನ್ನು ನೋಡುತಿದ್ದರೂ, ಪುನಃಪುನಃ ಅದಕ್ಕಾಗಿಯೇ ಮನುಜನು ಪ್ರಯತ್ನ ಪಡುತ್ತಿರುವನಲ್ಲ ! ||೫|| ಈ ಲೋಕದಲ್ಲಿ ದಾರಿದ್ರವನ್ನು ಯಾವನು ತಾನೆ ಅಪೇಕ್ಷಿಸುವನು ? ಯಾರು ತಾನೆ ಸಂಪ ತನ್ನು ಅಪೇಕ್ಷಿಸುವುದಿಲ್ಲ ? ಹೀಗೆ ದಾರಿದ್ರವನ್ನು ದ್ವೇಷಿಸುವುದೂ, ಸಂಪತ್ತನ್ನು ಇಚ್ಚಿಸು ವುದೂ ಕೂಡ, ಸತ್ವಲೋಕಸಾಧಾರಣವಾಗಿರುವುವು. ಆದರೆ, ಈ ವಿಷಯದಲ್ಲಿ ಪ್ರರುಷರು ಪ್ರಯತ್ನ ಪಟ್ಟರೂ-ಅಧವಾ ಅವರು ಪ್ರಯತ್ನ ಪಡದಿದ್ದರೂ ಕೂಡ, ಆಗಬೇಕಾದುದು ಆಗಿಯೇ ಹೋಗುವುದು , ಇದು ನಿಶ್ಚಯವು ||೫೯|| ಆದುದರಿಂದ, ಯಾವುದು ಆಗತಕ್ಕುದೋ-ಅದು ಆಗಿಯೇ ಹೋಗುವುದು , ಯಾವುದು ಆಗುತಕ್ಕುದಲ್ಲವೋ ಅದು ಆಗುವುದೇ ಇಲ್ಲ,' ಎಂದು ನಿಶ್ಚಯಮಾಡಿಕೊಂಡು ಯಾರು ಸ್ವಸ್ಥರಾಗಿರುವರೋ, ಅವರಿಗೇ ಸೌಖ್ಯವು , ಅನ್ಯಥಾ ಸೌಖ್ಯಲಾಭವಾಗುವುದಿಲ್ಲ ||೬೦|| ಈ ಲೋಕದಲ್ಲಿ, ಯಾವನು ಸುತರಾಂ ಅಜ್ಜನೊ-ಯಾವನು ಸಂಪೂರ್ಣವಾಗಿ ಪ್ರಾಜ್ಞ ನೋ-ಇವರಿಬ್ಬರಿಗೆ ಮಾತ್ರವೇ ಸುಖವಾಪ್ತಿಯಾಗುವುದು. ಯಾವನು ಸ್ವಯಂ ಅಜ್ಞನಾಗಿ ತಾನು ಸರಜ್ಞನೆಂದು ತಿಳಿದುಕೊಂಡಿರುವನೋ, ಅವನು ಕೇವಲ ದುಃಖಭಾಜನನಾಗುವನು ||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೪೫
ಗೋಚರ