ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ದುರಾಶಾವಾಶಸನ್ನದ್ಧಃ ಕಾಮಕ್ರೋಧಾಕುಲಾಶಯಃ ||೧೬|| ಸಮರ್ಥ ಭೋಗರ್ವಾ ಯೋಗೀ ಸುಖೀ ಸರ್ವಾರ್ಥಸಿದ್ದಿರ್ಮಾ | ಬನ್ನು ರ್ಮಾ ನೀತಿರ್ಮಾ ವಾಗ್ನಿ ಶ್ರೀಮಾತು ನಿಬರ್ಹಣ8 | ನಾಶಿತೋಯಂ ಮಯಾ ಶತ್ರು ನಾಶಯೇನ್ಯಾನರೀನಪಿ ||೧|| ಕುಲೀನಸ್ಸರ್ವಸಂಪನ್ನೋ ಮಯಾಪೀದಂ ಸುಸಾಧಿತವ | ಮನೋರಧಮಿಂ ಪ್ರಶ್ನೆ ಕರಿಷ್ಯ ಕಾರಯೇಖಿಲಮ್ ||೧೯|| ಏವಂ ಸ ಬಹುಧಾ ಚೆನ್ನಾವ್ಯಾಕುಲಾತ್ಮಾ ದ್ವಿಜಃ ಸದಾ || ಕುಟುಮೃ ಪೋಷಣಾಸಕ್ಕೆಜೆಸ್ಸನ್ನಾಸ ಮೋಹಿತಃ |೨೦|| ಏವಂ ಬಹು ಗತೇ ಕಾಲೇ ಜರಾವ್ಯಾ ಧ್ಯಾದಿಭಿದೀFಜಃ | ಜೀರ್ಣೋಪಿ ಧಿಕ್ತೋಪ್ಯಾರ್ ನಾಶಾಂ ಮುಞ್ಞತಿ ದೀನಧೀಃ |೨೧|| ತತೋ ಯದೃಚ್ಛಯಾ ವಿಪ್ರೊ ಕದಾಚಿದ್ದವ್ಯಲೋಭತಃ ನೈಮಿಷಂ ಪುಷ್ಯ ತತಮುನಿಸಜ್ಞಾನಿಕಂ ಯಯೌ ||೨೦|| ಆಗ ಅವನು ದುರಾಶೆಯೆಂಬ ಪಾಶಗಳಿಂದ ಬದ್ದನಾಗಿ, ಕಾಮ ಕ್ರೋಧಗಳಿಂದ ವ್ಯಾಕು ಲವಾಡ ಆಶಯವುಳ್ಳವನಾಗಿ, ತನ್ನ ಮನಸ್ಸಿನಲ್ಲಿ ಈರೀತಿಯಾಗಿ ಯೋಚಿಸುತ್ತಿದ್ದನು ಸಮರ್ಧ ನಾಗಿಯ ನೀತಿವಂತನಾಗಿಯ ಉಪಾಯ ಕುಶಲನಾಗಿಯೂ ಸುಖಶಾಲಿಯಾಗಿಯ ಸರಾ ರ್ಧಸಿದ್ದಿ ಯುಕ್ತನಾಗಿಯ ಬಂಧುಯುಕ್ತನಾಗಿಯ ನೀತಿಶಾಲಿಯಾಗಿಯೂ ಶ್ರೀಮಂತನಾ ಗಿಯ ಶತ್ರುಸಂಹಾರಕನಾಗಿಯೂ ಇದ್ದ ಆ ಶತ್ರುವು, ಈಗ ನನ್ನಿಂದ ನಾಶಪಡಿಸಲ್ಪಟ್ಟನು, ಉಳಿದಿರುವ ಇತರ ಶತ್ರುಗಳನ್ನೂ ನಾಶಪಡಿಸುವೆನು. ನಾನು ಈಗ ಸದ್ರಂಶಪ್ರಸೂತನೂ ಸರ ಸಂಪತ್ಸಮೃದ್ಧನೂ ಆಗಿರುವೆನು ಇದುವರೆಗೆ ನಾನು ಇಷ್ಟು ಕಾರ್ಯಗಳನ್ನು ಸಾಧಿಸಿರುವೆನು, ಮುಂದೆ ಇಂತಿಂತಹ ಮನೋರಥವನ್ನು ಪಡೆಯಬೇಕಾಗಿರುವುದು ನಾನು ಸಮಸ್ತವನ್ನೂ ಮಾಡುತಲೂ ಇತರರಿಂದ ಮಾಡಿಸುತಲೂ ಇರುವೆನು ||೧೭-೧೯|| ಇತ್ಯಾದಿರೀತಿಯಾಗಿ ನಾನಾವಿಧವಾದ ಚಿಂತೆಗಳಿಂದ ವ್ಯಾಕುಲನಾದ ಆ ಬ್ರಾಹ್ಮಣನು, ಸದಾ ಕುಟಂಬಪೋಷಣೆಯಲ್ಲಿ ಆಸಕ್ತವಾದ ಹೃದಯವುಳ್ಳವನಾಗಿರುತಿದ್ದನು ||೨೦|| ಹೀಗೆ ಬಹುಕಾಲ ಕಳೆಯಲಾಗಿ, ಆ ಬ್ರಾಹ್ಮಣನು, ಜರೆ ವ್ಯಾಧಿ ಮೊದಲಾದುವುಗಳಿಂದ ಜೀರ್ಣನಾಗಿದ್ದರೂ, ದೊಡ್ಡವರು ತನ್ನನ್ನು ಎಷ್ಟು ಧಿಕ್ಕರಿಸುತ್ತಿದ್ದರೂ, ಮಹಾದೀನಹೃದಯನಾಗಿ ತನ್ನ ಆಶೆಯನ್ನು ಮಾತ್ರ ಬಿಡಲಾರದವನಾಗಿದ್ದನು ||೨೧|| ಆಮೇಲೆ ಆ ಬ್ರಾಹ್ಮಣನು ಒಂದು ಸಮಯದಲ್ಲಿ ದ್ರವ್ಯಲೋಭದಿಂದ ಆಕಸ್ಮಿಕವಾಗಿ ನೈಮಿ ಪಾರಣ್ಯಕ್ಕೆ ಹೋಗಿ, ಅಲ್ಲಿದ್ದ ಮಹರ್ಷಿಗಳ ಸಮಾಪವನ್ನು ಸೇರಿದನು ||೨೨||