ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಸುಂದರಕಾಂಡಃ ೧೪೩ ಬೇವನೋಪಾಯಯತ್ನಾಂಶ್ಚ ತ್ಯಜೇದ್ಯೋಹಂ ಚ ಸರ್ವತಃ || ವಾನಾಂ ಕೂಟಸಾಕ್ಷಿತಂ ಮಾನಿತಾಂ ಚಾನ್ಯವಿಘ್ನುತಾಮ್ ||೧೭|| ಅಶುಚಿತ್ಪಮನಾಚಾರಂ ಚಾಪಲ್ಯಂ ಶಿಕ್ಷಣಿಕ್ಷಯೋಃ || ತುಚ್ಛಕೃತ್ಯೇಷ್ಟಮನಾಕ್ಷಂ ತ್ಯಾಜ್ಯಂ ಜ್ಞಾನೌಪಧಾರ್ಥಿನಾ |av|| ನ ನಿನ್ನೆ ಜೇವನಂ ಸ್ಪಸ್ಯ ನ ಮೃತ್ಯುಮಪಿ ಸಂಸ್ತುವೇತ್ | ಕಾಲಾಕಾಲ್ಡ್ ಭವೇನ್ನಿತ್ಯಂ ಉದಾಸೀನತಯಾ ಚರೇತ್ ||೧೯|| ತ್ಯಾಜ್ಯಾಶ್ರವಾದ್ಯಾತ್ಮ ಬುದ್ದಿ ಅಸೂಯಾ ಚ ಮನೋರಥಾಃ | ವಾಣಿಜ್ಯಂ ದುಷ್ಟಸಜ್ಜಂ ಚ ತತೇವಾಂ ಚ ಪರಿತ್ಯಜೇತ್ ||೨೦|| ತ್ಯಜೇದ್ದು ರನ್ನವೇಕಾನ್ನಂ ಚಿನ್ತಾಂ ವೈರಂ ಮದವುಜಮ್ | ಬಹುನೋಕ್ಕನ ಕಿಂ ವಿಪ್ರ ಯದ್ಯದ್ದುಷ್ಟಂ ತು ತತ್ ತ್ಯಜೇತ್ |೨೧|| ಪಿತೃವಾತ್ಸಗುರುಪಾದೇವಾರ್ದೀ ಸರ್ವದಾ ಯಜೇತ್ | ಸರ್ವಭೂತೇಷು ಚಾದ್ದೇಷ್ಟಾ ಸಮದುಃಖಸುಖೀ ವಶೀ |೨೦|| 4 ಜೀವನೋಪಾಯಕ್ಕಾಗಿ ಪ್ರಯತ್ನಗಳನ್ನೂ, ಯಾರ ವಿಷಯದಲ್ಲಿಯಾದರೂ ದ್ರೋಹ ವನ್ನೂ, ವಂಚನೆಯನ್ನೂ, ಕೂಟಸಾಕ್ಷ್ಯವನ್ನೂ, ಅಭಿಮಾನವನ್ನೂ, ಇತರರಿಗೆ ವಿಘ್ನಾಚರಣೆ ಯನ್ನೂ ತ್ಯಜಿಸಬೇಕು ||೧೭|| ಅಶುಚಿತ್ವವನ್ನೂ, ಅನಾಚಾರವನ್ನೂ, ಇಂದ್ರಿಯಚಾಪಲ್ಯವನ್ನೂ, ನಿಂದಿತಕಗಳಲ್ಲಿ ಲಜ್ಞಾರಾಹಿತ್ಯವನ್ನೂ ಕೂಡ, ಜ್ಞಾನೌಷಧಾಪೇಕ್ಷಿಯಾದವನು ಬಿಟ್ಟು ಬಿಡಬೇಕು ||೧೮|| ತಾನು ಬದುಕಿರುವಿಕೆಯನ್ನು ನಿಂದಿಸಲೂಬಾರದು, ಮರಣವನ್ನು ಶ್ಲಾಘಿಸಲೂಬಾರದು, ಸರ್ವದಾ ಕಾಲನಿರೀಕ್ಷಣೆಮಾಡಿಕೊಂಡಿರುತ, ಸತ್ರ ಉದಾಸೀನಬುದ್ದಿ ಯಿಂದ ವರ್ತಿಸಬೇಕು || ವರ್ಣಾಶ್ರಮಾದಿಗಳಲ್ಲಿ ಆತ್ಮ ಬುದ್ದಿಯ, ಅಸೂಯಯ, ನಾನಾವಿಧ ಮನೋರಥ ಗಳೂ ಬಿಡಲ್ಪಡಬೇಕು ವಾಣಿಜ್ಯವನ್ನೂ, ದುಷ್ಟ ಸಹವಾಸವನ್ನೂ, ದುಷ್ಟರ ಸೇವೆಯನ್ನೂ ತ್ಯಜಿಸಬೇಕು ||೨೦|| ದುಷ್ಟ ವಾದ ಅನ್ನವನ್ನೂ, ನಿತ್ಯವೂ ಒಬ್ಬನ ಮನೆಯಲ್ಲಿಯ ಊಟಮಾಡುವಿಕೆಯನ್ನೂ, ಚಿಂತೆಯನ್ನೂ, ವೈರವನ್ನೂ, ಅಷ್ಟ ಮದವರ್ಗವನ್ನೂ ಬಿಡಬೇಕು. ಅಯ್ಯಾ ! ಬ್ರಾಹ್ಮಣ ! ಬಹಳ ಹೇಳುವುದರಿಂದ ಫಲವೇನು ? ಮುಖ್ಯವಾಗಿ ಯಾವಯಾವುದು ದುಷ್ಟವೋ ಅದನ್ನೆಲ್ಲ ಪರಿತ್ಯಜಿಸಬೇಕು ||೨| ತಾಯಿ ತಂದೆ ಗುರು ಜ್ಞಾನಿ ದೇವರು ಮುಂತಾದವರನ್ನು ನಿತ್ಯವೂ ಪೂಜಿಸಬೇಕು. ಯಾವ ಪ್ರಾಣಿಯಲ್ಲಿಯ ದ್ವೇಷಮಾಡಬಾರದು , ಸುಖದುಃಖಗಳಲ್ಲಿ ಸಮಚಿತ್ತನಾಗಿ ಜಿತೇಂ ಪ್ರಿಯನಾಗಿರಬೇಕು ||೨೨||