ಸುಂದರಕಾಂಡಃ ೧೭ ವಿಷ್ಣುಭಕ್ಷ್ಯನುಪಾನೇನ ಯೋಜಯಿತ್ವಾ ತದೌಪದಮ್ | ತಮೇವ ಬ್ರಹ್ಮ ತರ್ಸ್ಮ ತಂ ಸಂಸಾರೀ ನ ಕರ್ಹಿಚರ್ |೩vf. ಈ ರೀತಿಯಾಗಿ ಅವಶಿಷ್ಟವಾದ ದಿವ್ಯಜ್ಞಾನಾಮೃತರಸವನ್ನು ವಿಷ್ಣುಭಕ್ತಿಯೆಂಬ ಅನು ಪಾನದೊಡನೆ ಸೇರಿಸಿ-ಆ ಗುರುವಿನಿಂದ ಅಯ್ಯಾ ! ಬ್ರಾಹ್ಮಣ ! ನೀನು ಆ ಪರಬ್ರಹವೆಯ ; ಲಕ್ಷಣಾವೃತ್ತಿಯೆಂದು ಹಸರು ಹೀಗೆಯೇ ತತ್ ತ್ವಮಸಿ' ಎಂಬ ಮಹಾವಾಕ್ಯದಲ್ಲಿಯೂ ಶಕ್ತಿವೃತ್ತಿಯಿಂದ ಬೋಧಿತವಾಗುವ ಅರ್ಧವು ಅನುಪಸನ್ನವಾಗುವಕಾರಣ ಲಕ್ಷಣಾವೃತ್ತಿಯ ನ್ಯಾಶ್ರಯಿಸಬೇಕಾಗುವುದು ಇದಕ್ಕಾಗಿ ಈಗ ಇನ್ನೂ ಒಂದು ಉದಾಹರಣೆಯನ್ನು ತೋರಿಸ ಬೇಕಾಗಿರುವುದು ನಾವು ಹಿಂದೆ ಯಾವುದೋ ಒಂದುದಿವಸ ಯಾವುದೋ ಒಂದು ಕಡೆಯಲ್ಲಿ ನೋಡಿದ್ದ ಒಬ್ಬ ಮನುಷ್ಯನನ್ನು ಈಗ ನೋಡಿ, ಅವನೇ ಈ ರಾಮನೆಂದು ಹೇಳುವವಲ್ಲವೆ! ಹಿಂದೆ ನೋಡಿದ ದೇಶ ಕಾಲ ಯುಕ್ತನಾಗಿರುವ ರಾಮನೂ, ಈಗ ನೋಡುವ ದೇಶ ಕಾಲ ಯಕ್ಕೆ ನಾಗಿರುವ ರಾಮನೂ ಒಬ್ಬನೇಯೆಂದಲ್ಲವೆ ಅರ್ಧವಾಗುವುದು ! ಈ ವಾಕ್ಯದಲ್ಲಿ ವಿಶೇಷಣಾಂತ ವೆಂದೂ ವಿಶೇಷ್ಯಾಂಶವೆಂದೂ ಎರಡುಭಾಗವಿರುವುದು ಹಿಂದೆ ನೋಡಿದ ದೇಶ ಕಾಲ ಯುಕ್ತ ನಂಬುದೂ ಈಗ ನೋಡುವ ದೇಶ ಕಾಲ ಯುಕ್ತನಂಬುದೂ ವಿಶೇಷಣಾಂಶಗಳು, ರಾಮನೆಂಬುದು ವಿಶೇಷ್ಯಾ೦ಶವು ಹಿಂದಣ ದೇಶ ಕಾಲಗಳೂ ಈಗಣ ದೇಶ ಕಾಲಗಳೂ ಬೇರೆಬೇರೆಯಾಗಿರುವ ಕಾರಣ, ಆಗಣ ದೇಶ ಕಾಲಗಳು ಈಗ ನಾವು ನೋಡುತ್ತಿರುವ ರಾಮನಲ್ಲಿರುವುದಿಲ್ಲವಾದುದರಿಂದ, ಆ ರಾಮನೂ ಈ ರಾಮನೂ ಬೇರೆಬೇರೆಯಾಗಿರಬೇಕಾಗುವುದು ಹೀಗೆ ಶಕ್ಕಾರ್ಧಕ್ಕೆ ಅನುವ ಪತ್ತಿಯುಂಟಾಗುವುದರಿಂದ, ಇಲ್ಲಿ ಲಕ್ಷಣಾವೃತ್ತಿಯನ್ನಾ ಶ್ರಯಿಸಬೇಕಾಗುವುದು ಹೀಗೆ ಲಕ್ಷಣಾವೃತ್ತಿಯನ್ನಾಶ್ರಯಿಸಿದಾಗ, ದೇಶ ಕಾಲ ಯುಕ್ತನಂಬ ವಿಶೇಷಣಾಂಶವನ್ನು ಬಿಟ್ಟು, ಬನ್ನು ಅರ್ಧಹಳಬೇಕಾಗುವುದುಆಗ ರಾಮನಂಬ ಅರ್ಧವೂಂದು ಮಾತ್ರವೇ ಉಳಿಯುವ ಕಾರಣ ಅನುಪಪ ಪರಿಹಾರವಾಗಿ, ವಾಕ್ಯಾರ್ಥಜ್ಞಾನವುಂಟಾಗುವುದು. ಹೀಗೆ ವಿಶೇಷಣಾಂಶ ಸತ್ಯಾಗಮಾಡುವುದಕ್ಕೆ ಭಾರತ್ಯಾಗ ಲಕ್ಷ್ಮಣೆಯೆಂದು ಶಾಸ್ತ್ರ ಸಂಕೇತವ. * ತತ್ ತ್ವಮಸಿ' ಎಂಬ ಮಹಾವಾಕ್ಯಕ್ಕೆ ಅರ್ಧವನ್ನು ತಿಳಿದು ಕೊಳ್ಳಬೇಕಾದರೂ, ಈ ಭಾಗತ್ಯಾಗ ಲಕ್ಷ್ಮಣೆಯನ್ನಾ ಶ್ರಯಿಸಬೇಕಾಗುವುದು ಹೇಗೆಂದರೆ, ಇಲ್ಲಿ ೯ ತತ್ ತ್ವಂ ಅಸಿ' ಎಂದು ಮರುಪದಗಳಿರು ವುವು ತಮಗುಣಪ್ರಧಾನವಾದ ಮಾಯೋಪಾಧಿಯಿಂದ ಜಗತ್ತಿಗೆ ಉಪಾದಾನಕಾರಣವಾ ಗಿಯ-ಶುದ್ಧ ಸತ್ವ ಪ್ರಧಾನವಾದ ಮಾಯೋಪಾಧಿಯಿಂದ ಜಗತ್ತಿಗೆ ನಿಮಿತ್ತ ಕಾರಣವಾಗಿಯ ಇರುವ ಬ್ರಹ್ಮವಸ್ತುವು * ತತ್ ' ಎಂಬ ಪದದಿಂದ ಬೋಧಿತವಾಗುವುದು ಮಲಿನಸತ್ವ ಪ್ರಧಾನ ವಾಗಿ ಕಾಮ ಕರಾದಿ ದೂಷಿತವಾಗಿರುವ ಅವಿದ್ಯೋಪಾಧಿಯನ್ನು ಸ್ವೀಕರಿಸಿದ ಆ ಬ್ರಹ್ಮವು * ತ್ವಂ' ಎಂಬ ಶಬ್ದದಿಂದ ಹೇಳಲ್ಪಡುವುದು ಹೀಗೆ ತಮೋಗುಣಪ್ರಧಾನ ಮಾಯೋಪಾಧಿ ಯುಕ್ತವಾಗಿ ಶುದ್ಧ ಸತ್ವಪ್ರಧಾನವಾಯೋಪಾಧಿಯುಕ್ತವಾಗಿಯೂ ಇರುವ ಬ್ರಹ್ಮ ವಸ್ತುವೇ, ಮಲಿನಸತ್ವಪ್ರಧಾನಾವಿದ್ಯೋಪಾಧಿಯುಕ್ತವಾಗಿರುವ ಬ್ರಹ್ಮವಸ್ತುವಾಗಿರುವುದೆಂದು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೬೯
ಗೋಚರ