೧೪೮ fಸರ್ಗ ಶ್ರೀತತ್ವ ಸಂಗ್ರಹ ರಾಮಾಯಣಂ ಇತಿ ಜ್ಞಾನೌಷಧೇ ದತ್ ಶಿಪ್ರೊಪಾಸಾದ್ಯ ತತ್ ತದಾ | ಬ್ರಹ್ಮನಾಹಂ ನ ಸಂಸಾರೀತ್ಯೇವಂ ನಿಶ್ಚಿತರ್ವಾ ಪ್ರಿಯೇ ||೩೯|| ಏವಂ ಭೇದಭೂಮಾಪಾಯೇ ತನ್ಮೂಲಾಜ್ಞಾನಮಹ್ಯತಃ | ಸಕಾರ್ಯ್ಕಸ್ಸಹ ನಷ್ಟಂ ಸ್ಯಾತ್ ಸದ್ಯ ಸ್ಯಾಮ ಗತಃ ||8ok ನಿವಂ ಸಕೃತ್ ತತ್ತ್ವಂ ತದ್ದಾರ್ಡ್ಯಾಯ ಜೆರಂ ಗುರೋಃ | ಸ್ಥಿತಾ ಭೂ ಸೈದೌಷಧಂ ತತ್ ರೋಗನಾಶಾವಧಿ ಕ್ರಮಾತ್ ||೧|| ಔಪಧಾದೇವಮಭ್ಯಸಾತ್ ಶನೈಶ್ಯಾಮ್ಯ ದೃವಾಮಯಃ | ನ ತರಾರ್ವಾ ನ ನಿರ್ವಿಣೇ ಭವೇತ್ ಕರ್ಮಕ್ಷಯಾವಧಿ ||8||
---
ಸಂಸಾರಿಯೆಂದಿಗೂ ಅಲ್ಲ' ಎಂಬುದಾಗಿ ಜ್ಞಾನವಂಬ ಔಷಧವು ಕೊಡಲ್ಪಡಲಾಗಿ, ಆಗ ಶಿಷ್ಯನೂ ಕೂಡ ಅದನ್ನು ಆಸ್ವಾದಿಸಿ, ನಾನು ಸಾಕ್ಷಾತ್ ಪರಬ್ರಹ್ಮವೇಯಂದೂ-ಸಂಸಾರಿಯಲ್ಲವೆಂದೂ ನಿಶ್ಚಯಿಸಿಕೊಂಡನು || ೩೮-೩೯|| ಹೀಗೆ ಅವನಿಗೆ ಭೇದಭ್ರಮವು ಕಳೆದುಹೋಗಲಾಗಿ, ಅದಕ್ಕೆ ಮಲವಾದ ಅಜ್ಞಾನವೂ ಅದರಿಂದ ಉಂಟಾಗಿದ್ದ ಇತರ ದೋಷಗಳೂ ಕೂಡ ನಷ್ಟವಾದುವು , ಆ ವೊಡನೆಯ ಅವನ ಸಂಸಾರರೋಗವು ನಿವೃತ್ತವಾಯಿತು ||೪೦|| ಈರೀತಿಯಾಗಿ ಪ್ರರುಷನು ಒಂದುಸಲ ತತ್ವವನ್ನು ನಿಶ್ಚಯಿಸಿಕೊಂಡವನಾಗಿ, ಅದು ದೃಢ ವಾಗುವುದಕ್ಕೋಸ್ಕರ ಚಿರಕಾಲ ಗುರುಸನ್ನಿಧಿಯಲ್ಲಿದ್ದುಕೊಂಡು, ಸಂಸಾರರೋಗವು ವಿಶೇಷ ವಾಗಿ ನಾಶಹೊಂದುವವರೆಗೂ ಆ ಜ್ಞಾನೌಷಧವನ್ನು ಕ್ರಮವಾಗಿ ನಿತ್ಯವೂ ಪಾನಮಾಡುತಿರ ಬೇಕು ||೪|| ಹೀಗ ಈ ಔಷದವನ್ನು ಅಭ್ಯಾಸಮಾಡಿದರೆ, ಕ್ರಮವಾಗಿ ಸಂಸಾರರೋಗವು ಶಾಂತವಾ ಗುವುದು ಅನ್ನ ಕರ ಕ್ಷಯವಾಗುವವರೆಗೂ, ತ್ವರೆಪಡದೆಯ-ನಿಶ್ವೇದಪಡದೆಯ ಕ್ರಮವಾಗಿ ಔಷಧವನ್ನು ಸೇವಿಸಬೇಕು |೪೨|| --- - -- ---- --- - - ಹೇಳಿದಂತಾಯ್ತು ತಮೋಗುಣ ಶುದ್ಧ ಸತ್ವಗುಣ ಪ್ರಧಾನವಾದುದಕ್ಕೂ ಮಲಿನಸತ್ವ ಪ್ರಧಾನ ವಾದುದಕ್ಕೂ ಐಕ್ಯ ಹೇಳಿದರೆ ಅನುಸಪತ್ತಿಯುಂಟಾಗುವಕಾರಣ, ಇಲ್ಲಿ ಪೂರೋಕ್ತ ರೀತಿಯಾಗಿ ಭಗತ್ಯಾಗ ಅಕ್ಷಣೆಯನ್ನಾಶ್ರಯಿಸಿ ತಮೋಗುಣ ಶುದ್ಧ ಸತ್ವಗುಣಪ್ರಧಾನವೆಂಬ ವಿಶೇಷಣಾಂಶ ವನ್ನೂ ಮಲಿನಸ ಪ್ರಧಾನವೆಂಬ ವಿಶೇಷಣಾಂಶವನ್ನೂ ಬಿಟ್ಟು ಬಿಟ್ಟರೆ, ಆಮೇಲೆ • ಬ್ರಹ್ಮವಸ್ತು' ಎಂಬ ವಿಶೇಷ್ಯಾಂಶ ಮಾತ್ರವೇ ಅವಶಿಷ್ಟವಾಗಿ, ಅಖಂಡವಾಕ್ಯಾರ್ಥ ಜ್ಞಾನವು ಉಪಪನ್ನವಾಗು ವುದು ಹೀಗೆ ಮಹಾವಾಕ್ಯದ ಅರ್ಧವನ್ನು ಸೋಪಪತ್ರಿಕವಾಗಿ ದತ್ತಾತ್ರೇಯಮುನಿಯು ಆ ಬ್ರಾಹ್ಮಣನಿಗೆ ಉಪದೇಶಿಸಿದನೆಂದು ಭಾವವು - - - - - - - - -
- ~~