ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಸಂಗ್ರಹ ರಾಮಾಯಣಂ ( ಸರ್ಗ ತಿಕಾಲಮೇಕಕಾಲಂ ವಾ ಯಃ ಕುರ್ಯಾದೇವನನ್ನಹವಮ್ | ವರ್ಷಮಾಣ ರಾಜಾ ಸ್ಯಾತ್ ಅನ್ನೇ ಮುಕ್ತಿಮವಾಪ್ನುಯಾತ್ ||೩೪|| ಆರಾಧನಾಸಮರ್ಥತೆ ದದ್ಯಾದರ್ಶನಸಾಧನಮ್ | ಯೋ ದಾತುಂ ನೈವ ಕಕ್ರೋತಿ ಕುರ್ಯಾದರ್ಚನದರ್ಶನಮ್ ||೩೫| ನೈಕಂ ಚ ಯಸ್ಯ ವಿದ್ಯೆತ ಸೋಥೋ ಯಾತಿ ನ ಸಂಶಯಃ | ತಸ್ತುತ್ ಸರ್ವಪ್ರಯತ್ನವ ಕುರ್ಯಾದಾಮಾರ್ಚನಂ ಬುಧಃ ||೩೬! ಏವಮುಕ್ಕಂ ಮಹಾದೇವಿ ರಾಮಚವ್ಹಾರ್ಚನಂ ಶುಭಮ್ | ಮಯಾ ಸಮಾಸತಃ ಸರ್ವಂ ಕಿಂ ಭೂಯಃ ಶೋತುಮಿಸಿ ||೩೭|| ಇತಿ ಶಿವದರಣ್ಯ ಕಾಣೋ ಶ್ರೀರಾಮಪೂಜಾವಿಧಾನಕಥನಂ ನಾಮ ಪಞ್ಚಮಃ ಸರ್ಗ,

  1. ಕು ಕೊಂಡಿರುವರೋ, ಅವರಿಗೆ ಯಾವ ದುಷ್ಕೃತವೂ ಇರುವುದಿಲ್ಲ, ದುಷ್ಯತಗಳಿಂದ ಉಂಟಾಗುವ ವಿಪತ್ತುಗಳೂ ಬರುವುದಿಲ್ಲ ||೩೩||

ಯಾವ ಪುರುಷನು, ಈ ಪೂರೋಕರೀತಿಯಾಗಿ ಶ್ರೀರಾಮನ ಪೂಜೆಯನ್ನು ಪ್ರತಿದಿನವೂ ತ್ರಿಕಾಲದಲ್ಲಿಯಾಗಲಿ ಅಥವಾ ಒಂದೇ ಕಾಲದಲ್ಲಿಯಾಗಲಿ ಭಕ್ತಿಯಿಂದ ಮಾಡುವನೋ, ಅವನು ಒಂದು ವರ್ಷಕಾಲದೊಳಗಾಗಿ ರಾಜಪದವಿಯನ್ನು ಹೊಂದುವನ್ನು ಈ ದೇಹವನ್ನು ಬಿಟ್ಟನಂ ತರ ಮೋಕ್ಷವನ್ನು ಪಡೆಯುವನು ||೩೪|| ಹೀಗೆ ಆರಾಧನೆಯನ್ನು ಮಾಡುವುದರಲ್ಲಿ ಸಾಮರಸಾಲದಿದ್ದರೆ, ಅರ್ಚನೆಗೆ ಬೇಕಾಗುವ ಉಪಕರಣಗಳನ್ನು ರಾಮರ್ಚನೆಮಾಡತಕ್ಕವರಿಗೆ ದಾನಮಾಡಬೇಕು ಯಾವನು ಹೀಗೆ ದಾನ ಮಾಡುವುದಕ್ಕೂ ಸುತರಾಂ ಶಕ್ತಿಯಿಲ್ಲದವನಾಗಿರುವನೋ, ಅವನು ಇತರರಿಂದ ಮಾಡಲ್ಪಡುವ ಪೂಜೆಯನ್ನು ಭಕ್ತಿಯಿಂದ ದರ್ಶನಮಾಡಬೇಕು ||೩೦|| ಈ ಮೂರರಲ್ಲಿ ಒಂದಾದರೂ ಯಾವನಿಗಿರುವುದಿಲ್ಲವೋ, ಅವನು ಅಧೋಲೋಕವನ್ನು ಹೊಂದುವನು, ಇದರಲ್ಲಿ ಸಂಶಯವಿಲ್ಲ ಅದು ಕಾರಣ, ಪ್ರಾಜ್ಞನಾದವನು ಸತ್ವಪ್ರಯತ್ನ ದಿಂದ ಶ್ರೀರಾಮನ ಪೂಜೆಯನ್ನು ಮಾಡಬೇಕು ||೩೬|| ಎಲ್‌ ಪಾಶ್ವತಿ ! ಇದೋ ಈರೀತಿಯಾಗಿ ಶುಭಕರವಾದ ಶ್ರೀರಾಮ ಪೂಜಾವಿಧಿಯನ್ನೆಲ್ಲ ನಾನು ನಿನಗೆ ಸಂಕ್ಷೇಪವಾಗಿ ಹೇಳಿರುವೆನು ಈಗ ನೀನು ಮತ್ತೇನನ್ನು ಕೇಳಬೇಕೆಂದು ಇಚ್ಚಿ ಸುವೆ ? ||೩೭|| ಇದು ಅರಣ್ಯ ಕಾಂಡದಲ್ಲಿ ಶ್ರೀರಾಮಪೂಜಾವಿಧಿಕಧನವೆಂಬ ಅಯ್ದನೆಯ ಸರ್ಗವು