ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ಶ್ರೀ ತತ್ವ ಸಂಗ್ರಹ ಕಾಮಾಯಣಂ [ಸರ್ಗ ಶ್ರುತ್ವಾ ಮುನೀನಾಂ ತದ್ರಾಕ್ಯಂ ಸದಾರಾಣಂ ವದೌಜಸಾಮ್ | ಕರ್ಣ್‌ ಏಧಾಯ ಧರ್ಮಾತ್ಮಾ ರಾಮೋ ವಚನಮಬ್ರವೀತ್ ||೩೧|| ಶೃಣುಧ್ವಂ ವಚನಂ ಮೇದ್ಯ ಮುನಯಃ ಸಂಶಿತವತಾಃ | ಜಾತಿಭ್ರಂಶಕರಂ ವಾಕ್ಯಂ ಭವಬ್ಬಿ ಸಮುದೀರಿತಮ್ ॥೩-೨। ಜೈಂಹ್ಯಂ ಚ ಪಂಸಿ ಮೇಥುನ್ಯಂ ಜಾತಿಭ್ರಂಶಕರಂ ವಿದುಃ | ನಿಶ್ಚಿತಂ ಧರ್ಮಶಾಸ್ತ್ರವು ಬುದ್ಧಿಪೂರ್ವಂ ಕೃತಂ ಯದಿ ||೩|| ಮುನಯಊಚುಃ. ಯದುಕಂ ಭವತಾ ನಾಥ ಜಾತಿಭ್ರಂ ಭವೇದಿತಿ | ತಪ್ಪಚ, ಸತ್ಯಮೇವಾಸ್ತು ರಾಮೋ ದಿರ್ನಾಭಿಭಾಪತೇ ||೩೪|| ಜಾತೇಳಿ ಪರಿಗ್ರಹೋ ದೇವ ಭವತಃ ಪರಮಾತ್ಮನಃ | ಬನ್ದ ನಿವೃತ್ತೇ ತೇನೈವ ಜಾತಿಬದ್ಧಃ ಕಥಂ ಭವೇತ್ ||೩೫| ನಾಮರೂಪದಿಬಾನಾಂ ಹನನೇ ಯತ್ನಮಾಸ್ಥಿತಾಃ | ವಯಂ ರಾಮ ಮಹಾಬಾಹೋ ಕಾ ಭೀತಿ; ಕಿವಿಜನನಮ್ ॥೩೬ || ಹೀಗೆ ಪತ್ನಿ ಯರೊಡಗೂಡಿ ಪ್ರಾರ್ಥಿಸುತ್ತಿರುವ ಮಹಾ ತೇಜಸ್ಸಂಪನ್ನರಾದ ಋಷಿಗಳ ಆ ಮಾತನ್ನು ಕೇಳಿ, ಧರಾತ್ಮನಾದ ರಾಮನು, ಕಿವಿಗಳನ್ನು ಮುಚ್ಚಿಕೊಂಡು ಹೀಗೆ ಹೇಳಿದನು ||೩೧|| ಮಹಾನಿಯಮ ಸಂಪನ್ನರಾಗಿರುವ ಮುನಿಗಳಿರಾ ! ನೀವು ನನ್ನ ವಿಜ್ಞಾಪನೆಯನ್ನು ಲಾಲಿಸಬೇಕು ನಿಮ್ಮಿಂದ ಹೇಳಲ್ಪಟ್ಟಿರುವ ಈ ಮಾತು, ಜಾತಿಭ್ರಂಶವನ್ನುಂಟುಮಾಡ ತಕ್ಕುದು ||೩೨|| ವಕ್ರತನವೂ ಪ್ರರುಷರಲ್ಲಿ ಸಮಾಗಮವೂ ಜಾತಿಭ್ರಂಶಕರವೆಂದು ಧರ್ಮಶಾಸ್ತ್ರಗಳಲ್ಲಿ ನಿಶ್ಚಯಿಸಲ್ಪಟ್ಟಿರುವುವೆಂಬುದಾಗಿ ಧರಜ್ಞರೆಲ್ಲರೂ ತಿಳಿದಿರುವರು || ೩ || ಇದನ್ನು ಕೇಳಿ ಋಷಿಗಳು ವಿಜ್ಞಾಪಿಸುವರು - ಸ್ವಾಮಿ ಜಾತಿಭ್ರಂಶವಾಗುವುದೆಂದು ಈಗ ನಿನ್ನಿಂದ ಯಾವ ಮಾತು ಹೇಳಲ್ಪಟ್ಟಿತೋ ಅದು ಸತ್ಯವಾಗಿಯೇ ಇರಲಿ ರಾಮನೆಂದಿಗೂ ಎರಡು ಮಾತಾಡುವುದಿಲ್ಲವಲ್ಲವೆ ! ||೩೪|| ಎಲೈ ಸ್ವಾಮಿಯೆ ! ಪರಮಾತ್ಮನಾದ ನಿನಗೆ ಸಕಲಬಂಧಗಳೂ ನಿವೃತ್ತವಾಗಿರುವಾಗ, ಈ ಜಾತಿಯ ಪರಿಗ್ರಹವೆಂಬುದೂ-ಇದರ ಬಂಧವೆಂಬುದೂ ಹೇಗೆ ಸಂಭವಿಸುವುವು? 11೩೫|| ಎಲೈ ಮಹಾಭುಜನಾದ ರಾಮನೆ ! ನಾವುಗಳು ನಾಮರೂಪಾದಿ ಬಂಧಗಳನ್ನು ವಿಶೇಷ ಮಾಡುವುದರಲ್ಲಿ ಸರ್ವದಾ ಪ್ರಯತ್ನ ಶೀಲರಾಗಿರುವೆವು ಹೀಗಿರುವಾಗ, ,ಈ ಜಾತಿಭ್ರಂಶವೆಂಬ ಭಯವಾವುದು ? ಇದನ್ನು ಕುರಿತು ಆಲೋಚಿಸುವುದೇನು ? ||೩೬||