ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وه W ಅರಣ್ಯಕಾಂಡಃ ಹೃದಯಸ್ಥ ತೇ ಛನ್ನೊ ವಿಜ್ಞಾತಸ್ತಪಸಾ ಮಯಾ | ಅತಕ್ಷ ತಾಮಹಂ ಬೂಮಿ ಗಚ್ಚ ಪವಮಿತಿ ||೩೧|| ಸಹಿ ರನ್ನೋ ವನೋದ್ದೇಶ'ಮೈಥಿಲ್ಯಾ ತತ್ರ ರಂಸಸೇ | ಸ ದೇಶಃ ಶ್ಲಾಘನೀಯಶ್ಚ ನಾತಿದೂರೇ ಚ ರಾಘವ ||೩|| ಭವಾನವಿ ಸದಾ ರಕ್ಷ ರಕ್ತ ಪರಿರಕ್ಷಣೇ | ಅಪಿ ಚಾತ) ವರ್ಸ ರಾಮ ತಾಪರ್ಸಾ ವಾಲಖಿಷ್ಯನಿ ||೩೩|| ಅಗಸ್ಯೆನೈವನುಸ್ಸು ರಾಮಃ ಸೌಮಿತ್ರಿ ಣಾ ಸಹ , ಸತ್ಯಾನನ್ನಯಾಮಾಸ ತನ್ನಂ ಸತ್ಯವಾದಿನ ೩೪।। ತೌ ತು ತೇನಾಭ್ಯನುಜ್ಞಾತ ಕೃತಪದಾಭಿವನ್ನೌ | ತದಾಶಮಾತ್ ಪಞ್ಚವಟೀಂ ಜನ್ಮತುಃ ಸಹ ನೀತಯಾ ||೩೫ । ಇತಿ ಶ್ರೀಮದರ ಕಾಣ್ಣೆ ಅಗಸ್ಯಕೃತರಾಮತಕಧನಂ ನಾಮ ಸಪ್ತಮಃ ಸರ್ಗಃ

  1. ಕ ನಿನ್ನ ಮನಸ್ಸಿನಲ್ಲಿರುವ ಅಭಿಪ್ರಾಯವನ್ನೂ ಕೂಡ ನಾನು ನನ್ನ ತಪಶ್ಯಕ್ತಿಯಿಂದ ತಿಳಿದು ಕೊಂಡೆನು ಈಗ ಎಲ್ಲಿ ವಾಸಮಾಡಲೆಂದು ನೀನು ನನ್ನನ್ನು ಕೇಳಲು ಒಂದಿರುವಯಲ್ಲ ವೆ! ನೀನು ಪಂಚವಟಿಗೆ ಹೋಗೆಂದು ನಾನು ನಿನಗೆ ಹೇಳುವನು ||೩೧||

ಎಲೈ ರಾಘವನೆ' ಆ ಪಂಚವಟೀ ವನಪ್ರದೇಶವು ಅತಿರಮ್ಯವಾಗಿರುವುದು, ಅಲ್ಲಿ ನೀನು ಸೀತೆಯೊಡನೆ ಸುಖವಾಗಿ ಎಹರಿಸಿಕೊಂಡಿರುವೆ ಆ ಪ್ರದೇಶವು, ಕೇವಲಶ್ರಾವ್ಯವಾಗಿರುವುದಲ್ಲದೆ ಇಲ್ಲಿಗೆ ಸಮೀಪವಾಗಿಯೂ ಇರುವುದು || ೩೨|| ನೀನು ಈಗ ಪತ್ನಿಯುಕ್ತನಾಗಿರುವುದರಿಂದ, ಅಸಹಾಯನಾಗಿ ದೂರದಲ್ಲಿರುವುದಕ್ಕಿಂ ತಲೂ ನಮ್ಮ ಆಶ್ರಮಕ್ಕೆ ಸಮೀಪದಲ್ಲಿರುವುದು ಉತ್ತಮವಲ್ಲವೆ' ಇದೂ ಅಲ್ಲದೆ, ನೀನು ಸತ್ಯ ರನ್ನೂ ಸಂರಕ್ಷಿಸುವುದರಲ್ಲಿ ಸಮರ್ಧನಾಗಿರುವ ಕಾರಣ, ನಮ್ಮ ಆಶ್ರಮದ ಹತ್ತಿರದಲ್ಲಿಯೇ ಇದ್ದು ಗೊಂಡು ತಪಸ್ವಿಗಳನ್ನು ಸಂರಕ್ಷಿಸಬಹುದಾಗಿರುವುದು ||೩೪|| - ಹೀಗೆಂದು ಅಗಸ್ಯಮುನಿಯಿಂದ ಹೇಳಲ್ಪಟ್ಟ ಶ್ರೀರಾಮನು, ಯಧಾರ್ಧವಾದಿಯಾದ ಆ ಮುನಿಯನ್ನು ಲಕ್ಷ್ಮಣನೊಡನೆ ಪೂಜಿಸಿ, ಬಳಿಕ ಅವರ ಅನುಜ್ಞೆಯನ್ನು ಕೇಳಿಕೊಂಡನು ||೩೪|| ಅನಂತರ, ಆಗಮುನಿಯಿಂದ ಅನುಚ್ಛಕೊಡಲ್ಪಟ್ಟ ರಾಮಲಕ್ಷ್ಮಣರು ಅವನಿಗೆ ನಮ ಸ್ಕಾರಮಾಡಿ, ಸೀತೆಯೊಡನೆ ಅವನ ಆಶ್ರಮದಿಂದ ಪಂಚವಟಿಯನ್ನು ಕುರಿತು ಹೂರಟರು ||೩೫|| ಇದು ಅರಣ್ಯಕಾಂಡದಲ್ಲಿ ಅಗಸ್ತ್ರಕೃತರಾಮ ಶತ್ವ ಕಥನವೆಂಬ ಏಳನೆಯ ಸರ್ಗವು,