ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ಅರಣ್ಯಕಾಂಡಃ ಚತುರ್ದಕಸಹಸುಕಾಂ ಪಧಾನಾನಾಂ ತು ರಕ್ಷಸಮ್ | ಏಕೈಕಸ್ಯ ಸಹಸನ ತಾವ ಏಶಿತಾಶಿನಾಮ್ ||೨೬|| ಖರಕ್ಷ ತಿಶಿರಾವ ದೂಷಂವ ರಾಕ್ಷಸಃ || ಸರ್ವೆ ರಾಮಂ ಯಯುಃ ಶೀಘ್ರು ನಾನಾಪಹರಣೋತಾಃ ೦೭ || ಶ್ರುತ್ವಾ ಕೋಲಾಹಲಂ ತೇಷಾಂ ರಾಮಃ ಸೌಮಿತಿಮಬ್ರವೀತ್ ||ov || ಶ್ರಯತೇ ವಿಪುಲಃ ಶಬ್ದಃ ನನಮಾಯಾ ರಾಕ್ಷಸಾಃ | ಭವಿಷ್ಯತಿ ಮಹದ್ಯುದ್ದಂ ನೂನಮದ್ಯ ಮಯಾ ಸಹ | ಹನ್ನು ಮಿಚಾ ಮ್ಯಹಂ ಸರ್ವಾ೯ ರಾಕ್ಷರ್ಸಾ ಘೋರರೂಪಿಣ8 ||೨೯|| ಶ್ರೀಲಕ್ಷ್ಮಣ ಉವಾತ " ಮಮಜ್ಞಾ ದೀಯತಾಂ ದೇವ ಪುಸ್ತಶತ್ರುವಿಮರ್ದನೇ : ಭವದಾಸ್ಥಾಮನುಷ್ಯ ಸಂಹರಿಪ್ಯಾಮಿ ಶಾತರ್ವಾ ||೩೦ ಶಿರಾಮ ಉವಾಚ ಖರಂ ತಿ ತಿರಸಂ ಚೈವ ದೂಷಣಂ ಚೈವ ರಾಕ್ಷಸಮ್ | ಅಜರ್ಯ್ಯಾ ವಿದ್ಧಿ ರ್ತಾ ವೀರ ಸೇನೆ ರಪಿ ಸುರಾಸುರೈಃ ||೩೧|| ಈ ಹದಿನಾಲ್ಕು ಸಾವಿರ ಮಂದಿಯ ಪ್ರಧಾನಭೂತರಾದ ರಾಕ್ಷಸರು. ಇವರೆಲ್ಲರಿಗೂ ಒಬ್ಬೊಬ್ಬನ ಕೈ ಕೆಳಗೆ ಹದಿನಾಲ್ಕು ಸಾವಿರ ಮಂದಿ ರಾಕ್ಷಸರು ಇದ್ದರು |೨೬|| ಇದಲ್ಲದೆ, ಖರ ತ್ರಿಶಿರಸ್ಸು ದಷಣ ಮುಂತಾದ ಮಹಾವೀರರಾದ ರಾಕ್ಷಸರೆಲ್ಲರೂ ಕೂಡ, ನಾನಾವಿಧವಾದ ಆಯುಧಗಳನ್ನು ಎತ್ತಿ ಹಿಡಿದುಕೊಂಡು ರಾಮನನ್ನು ಎದುರಿಸಿ ಹೊರಟರು ||೨೭|| ಆ ಸಮಯದಲ್ಲಿ, ಯುದ್ವಾರ್ಧವಾಗಿ ಬರುತ್ತಿರುವ ರಾಕ್ಷಸರ ಕೋಲಾಹಲವನ್ನು ಕೇಳಿ, ಶ್ರೀರಾಮನು ಲಕ್ಷ್ಮಣನನ್ನು ಕುರಿತು ವತ್ಸ ! ಲಕ್ಷ್ಮಣ | ಅದೋ ಅಲ್ಲಿ ಅತಿವಿಸ್ತಾರವಾದ ಶಬ್ದವು ಕೇಳಿಬರುವುದು, ಈಗ ನಿಶ್ಚಿತವಾಗಿ ರಾಕ್ಷಸರು ಬರುತಿರುವರು ಫೆರಾಕಾರರಾದ ಆ ರಾಕ್ಷಸರನ್ನೆಲ್ಲ ನಾನೇ ಕೊಲ್ಲಬೇಕೆಂದು ಇಚ್ಛಿಸುವೆನು ' ಎಂದು ಹೇಳಿದನು || ೨೮-೨೯|| ಇದನ್ನು ಕೇಳಿ ಲಕ್ಷ್ಮಣನು ವಿಜ್ಞಾಪಿಸುವನು - ಸ್ವಾಮಿ! ಈಗ ಬಂದಿರುವ ಶತ್ರುಗಳನ್ನು ಸಂಹರಿಸುವವಿಷಯದಲ್ಲಿ ನನಗೆ ಅಪ್ಪಣೆ ಕೊಡು ವನಾಗು. ನಿನ್ನ ಅಪ್ಪಣೆಯನ್ನು ಹೊಂದಿ, ನಾನೇ ಈ ಸಮಸ್ತ ಶತ್ರುಗಳನ್ನೂ ಸಂಹರಿಸುವೆನು || ಆಗ ಶ್ರೀರಾಮನು ಉತ್ತರಹೇಳುವನು - ಅಯ್ಯಾ ವೀರನೆ ಖರ ತ್ರಿಶಿರಸ್ಸು ದೂಷಣರೆಂಬ ಈ ಮರುಮಂದಿಯೂ ಸಾಮಾನ್ಯ ರಂದು ತಿಳಿಯಬೇಡ , ಇಂದ್ರನೊಡಗೂಡಿದ ದೇವತೆಗಳೂ ಸಮಸ್ತರಾದ ರಾಕ್ಷಸರೂ ಅವರನ್ನು ಜಯಿಸಲು ಸಮರ್ಥರಾಗುವುದಿಲ್ಲ ಎಂದು ತಿಳಿಯುವನಾಗು ||೩೧||