ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ ರಾವಣಾದ್ಬಲವನ್ನೊಮೀ ಖರಾದ್ಯಾರಾಕ್ಷಸಾಧವಾಃ | ವಾಶಿತಾಮುನಯಸ್ತಸ್ಮಾತ್ ಸಾಮ್ಮ ತಂ ಸುಖಮಾಸತೇ ||೩೧|| ಏತದ್ರಾಕ್ಷಸನಾರಾರ್ಥಮೇವ ತಂ ಯುಕ್ತಿತೋ ದ್ವಿಜೈತಿ | ರಾಮ ಗೋದಾತಟಂ ನೀತಃ ತನ್ನಾಶಃ ಕಾರಿತೋಧುನಾ ||೩೨|| ಕ್ಷಣಮಾತ್ರಾದ್ಯಾ ಮ ವಿಶ್ವಸೃಷ್ಟಿ ಸ್ಥಿತ್ಯನ ಕಾರಿಣಃ | ರಕ್ಷೆ ವಧೋಯಮೀಶಸ್ಯ ಲೀಲಯ್ಕೆವಾಶ್ರಮೇ ಕೃತಃ ||೩೩|| ಏಕೋ ದಧಾರ ಯೋ ವಿಶ” ಅನ್ನರ್ವಿಶಂ ಚ ತತ್ ತವ | ತತಸ್ಯಯಾ ಸ್ಪರ್ಧಿತುಂ *8 ಶಕ್ರೋ ಭವತಿ ರಾಘವ ||೩೪|| ದೇಸಿಪಿ ಖರಾದ್ಯಾಸಮೇವಾಪುಸ್ತೆ ಕಿಲ ಕ್ಷಣಾತ್ | ತಾವು ವಾನನ್ಯಯಾ ಭಕ್ತಾ ಭಜನ್ಯಃ ಕಿಂ ಪುನಃ ಪ್ರಭೋ |೩೫|| ಏವಂ ಚೇದರಿವರ್ಗೆಪಿ ರಾಮ ನಿರ್ಹತುಕೀ ದಯಾ ತರ್ಹಿ ತೇ ನಿಜಭಕ್ಕೆಮ ಕೀದೃಶೀ ನಾ ನ ವೇದ್ಮಹಮ್ ||೩೬|| ಸ್ವಾಮಿ | ರಾಮಚಂದ್ರ ! ರಾವಣನಿಗಿಂತಲೂ ಅತಿ ಬಲಶಾಲಿಗಳಾದ ಈ ಖರಪ್ರಮು ಖರಾದ ರಾಕ್ಷಸರು ನಿನ್ನಿಂದ ನಾಶಪಡಿಸಲ್ಪಟ್ಟ ಕಾರಣ, ಸಮಸ್ತ ಮುನಿಗಳೂ ಈಗ ಸುಖವಾಗಿ ರುವರು ||೩೧|| ರಾಮಭದ್ರ ' ಈ ೩'ರಾದಿರಾಕ್ಷಸರ ಸಂಹಾರಕ್ಕಾಗಿಯೇ ನಿನ್ನನ್ನು ಮಹರ್ಷಿಗಳು ಯುಕ್ತಿಯಿಂದ ಈ ಗೋದಾವರೀ ನದೀತೀರಕ್ಕೆ ಕರೆತಂದರು ಈಗ ನಿನ್ನಿಂದ ಆ ರಾಕ್ಷಸರ ನಾಶವು ಮಾಡಲ್ಪಟ್ಟಿತು || || ರಾಮಚಂದ್ರ ! ಒಂದು ಕ್ಷಣಮಾತ್ರದಲ್ಲಿ ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡ ತಕ್ಕ ಸತ್ವಲೋಕಪ್ರಭುವಾದ ನಿನಗೆ, ಈ ಆಶ್ರಮದಲ್ಲಿ ಮಾಡಿದ ರಾಕ್ಷ ಸನಾಶವು ಕೇವಲ ಲೀಲಾ ಮಾತ್ರವಾಗಿರುವುದು ||೩೩|| ರಾಘವ ' ಯಾವ ನೀನು ಈ ಸಮಸ್ತ ವಿಶ್ವವನ್ನೂ ಧರಿಸಿರುವೆಯೋ, 'ರಾವ ನಿನ್ನ ಅಂತರ್ಗತವಾಗಿ ಈ ಸಮಸ್ತ ವಿಶ್ವವೂ ಇರುವುದೋ, ಅಂತಹ ನಿನ್ನೊಡನೆ ಸ್ಪರ್ಧೆ ಮಾಡಲು ಯಾವನಿಗೆ ಶಕ್ತಿಯುಂಟು ? ||೩೪|| ಮಹಾಪ್ರಭೋ ! ನಿನ್ನಲ್ಲಿ ದ್ವೇಷಮಾಡತಕ್ಕವರಾಗಿದ್ರೂ ಕೂಡ, ಈ ಖರಾದಿರಾಕ್ಷಸರು ಕ್ಷಣಮಾತ್ರದಲ್ಲಿ ನಿನ್ನನ್ನೇ ಹೊಂದಿಬಿಟ್ಟರಲ್ಲವೆ ? ಹೀಗಿರುವಾಗ, ನಿನ್ನನ್ನೇ ಅನನ್ಯಾಶ್ರಯವಾದ ಭಕ್ತಿಯಿಂದ ಭಜಿಸತಕ್ಕವರ ವಿಷಯದಲ್ಲಿ ಹೇಳತಕ್ಕುದೇರುವುದು ” || ೩೫|| ಹೇರಾಮ ! ಶತ್ರುಗಳಲ್ಲಿಯೂ ಇಷ್ಟು ಮಟ್ಟಿಗೆ ಸಿಗುವಾಧಿಕವಾದ ಕೃಪೆಯನ್ನು ಮಾಡು ತಿರುವಾಗ, ನೀನು ನಿನ್ನ ಭಕ್ತರಲ್ಲಿ ಇನ್ನೆಷ್ಟು ಮಟ್ಟಿಗೆ ಕೃಪೆಯನ್ನು ತೋರಿಸುವೆಯೋ ನಾನ ರಿಯೆನು ||4||