ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Gok ಶ್ರೀಮದಾನಂದ ರಾಮಾಯಣ, ರ್ಣದ ಪಾತ್ರೆಯನ್ನಿತ್ತು ಲೋಪಾಮುದ್ರೆಯ ಭೋಜನ ದೂಡುವ ವರೆಗೂ ಎ ಷ್ಟು ಸಾವಿರ ಜನರು ಬಂದರೂ ಈ ಪಾತ್ರೆಯಲ್ಲಿ ಭಕ್ಷ್ಯ-ಭೋಜ್ಯಗಳು ಸಿದ್ಧವಾ ಗಿರಲಿ' ಎಂದು ವರವನ್ನು ಕೊಟ್ಟು ತಾನು ಅಂತರ್ಹಿತಳಾದಳು. ಅನಂತರ ಶ್ರೀ ರಾಮನ ಸಮಷ್ಠ ಪರಿಜನರನ್ನೂ ಅಗರು ಉಚಿತ ದರ್ಯಾದೆಗಳಿಂದ ಸಂ ತೋಷಗೊಳಿಸಿದರು. ಲೋಪಾಮುದ್ರಾದೇವಿಯು ಸೀತಾರಾಮರೇ ಮೊದಲಾದ ಸಮಸ್ತ ಅತಿಥಿಗಳ ಭೋಜನವಾದನಂತರ ಪತಿಯ ಅಪ್ಪಣೆಯನ್ನು ಪಡೆದು ಭೂ ಜನ ಮಾಡುತ್ತಿದ್ದಳು. ಹೀಗೆ ಅನೇಕ ದಿವಸಗಳ ವರೆಗೆ ಶ್ರೀ ಕಾಳಚಂದ್ರನು ಆ ವನದಲ್ಲಿ ವಿನೋದದಿಂದ ಇದ್ದು, ಒಂದು ದಿವಸ ಅಗರೂಡನೆ ವಿಮಾನದಲ್ಲಿ ಕುಳಿತು ಆಕಾಶದೂರ್ಗದಿಂದ ಸಂಚಾರ ಮಾಡುತ್ತ ಪಂಚಾಕ್ಷರವೆಂಬ ಒಂದು ಸ ರೂವರವನ್ನು ನೋಡಿದನು. ರಮಣೀಯವಾದ ಆ ಸರಸ್ಸಿನ ಬಳಿಯಲ್ಲಿ ಶ್ರೀ ರಾಮನು ಪರಿವಾರ ಸಮೇ ತಪಾಗಿ ಒಂದು ದಿವಸ ವಾಸಮಾಡಿದನು. ಆ ದಿವಸ ರಾತ್ರಿ ಸೀತಾಸಮೇತ ನಂದ ಶ್ರೀ ರಾಮನು ಮಂಚದ ಮೇಲೆ ಕುಳಿತಿರಲು, ಅತಿಮನಹರವಾದ ಗ ಯನ ಧ್ವನಿಯು ಕೇಳಬಂತು, ಜನಗಳು ಯಾರೂ ಕಾಣಿಸಲಿಲ್ಲ, ಅಪೂರ್ವವಾದ ಈ ಗಾಯನವನ್ನು ಕೇಳಿ ಆಶ್ಚರ್ಯಗೊಂಡು ಶ್ರೀ ರಾಮನು ಅಗಸ್ಕೃರನ್ನು ಕುರಿತುಈ ಧ್ವನಿಯು ಯಾರದಿರಬಹುದು' ಎಂದು ಕೇಳಿದನು. ಆಗ ಮಹಷಿಗಳು (18ಾ ಮಚಂದ್ರನೇ, ಕೇಳು, ಪೂರ್ವದಲ್ಲಿ ಗಂಧರ್ವರಾಜನ ಐದು ಜನ ಪುತ್ರಿಯರು ಈ ಸರೋವರದಲ್ಲಿ ಜಲಕ್ರೀಡೆಗಾಗಿ ಬಂದಿದ್ದರು. ಅದೇ ಸಮಯದಲ್ಲಿ ಏಳುಜನ ನಾಗಕನ್ಯಯರು ಅಕಾಗಿ ಇಲ್ಲಿಗೇ ಬಂದರು. ಆಕಸ್ಯೆಯರಿಗೆ ಪರಸ್ಪರ ಪ್ರೇಮಬೆಳೆಯಿತು. ಮುಂದೆ ಅವರೆಲ್ಲರೂ ಇಲ್ಲಿಗೆ ಪ್ರತಿದಿವಸ ಬರುತ್ತಿದ್ದರು, ಇಲ್ಲಿ ಒಬ್ಬ ಮುನಿಯು ತಪಸ್ಸು ಮಾಡುತ್ತ ಕುಳಿತಿದ್ದನು. ಆತನಿಗೆ ಇವರಿಂದ ತೊಂದರೆಗಳು ಆಗಾಗ್ಗೆ ಸಂಭವಿಸುತ್ತಿದ್ದವು. ಆದಕಾರಣ ತಪಸ್ವಿಯು “ನೀವು ಇನ್ನು ಮೇಲೆ ಇಲ್ಲಿಗೆ ಬರಬೇಡಿರಿ' ಎಂದು ಆ ಕನೈಯರಿಗೆ ಹೇಳಿಕೊಂಡನು. ಆದರೂ ದೇವೆಂದ್ರನ ಬೋಧನೆಯಿಂದ ಋಷಿಯ ಮಾತನ್ನು ಲಕ್ಷಕ್ಕೆ ತರದೆ ಆಕೆ ಸಯರು ಎಂದಿನಂತೆ ಬರಲಾರಂಭಿಸಿದರು. ಬಳಿಕ ತಪೋನಿಧಿಯು ಇವರಿಗೆ ಎ ಷ್ಟು ಹೇಳಿದರೂ ಬರುವದನ್ನೇನು ಬಿಡುವದಿಲ್ಲ. ಇನ್ನು ಶಾಪಕೊಡಬೇಕಾಗಿ vಣುವದು, ಶಿಸಕೊಟ್ಟರೆ ನನ್ನ ತಪಸ್ಸು ನಾಶವಾಗುವದು' ಎಂದು ಹೋ ಚಿಸಿ, ಜಲದೇವತೆಯನ್ನು ಕರೆದು, ಕೂಡಲೆ ಜಲದೇವತೆಯು ನಿಜಸ್ವರೂಪ