ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿವಾಹಕಾಂಕ. SL - -- ವನ್ನು ಧರಿಸಿ ಅಲ್ಲಿಗೆ ಬಂದು ಮುನಿಗಳ ಆಜ್ಞೆಯಂತೆ ಆಕಸ್ಮಿಯರನ್ನು ನಿರ್ಬಂಧ ದಿಂದ ತನ್ನ ದಾಸನಕ್ಕೆ ಕರೆದೊಯ್ದು , ಗಂಧರ್ವರು, ನಾಗರು, ಇವರ ರಿಗೂ ಅಲ್ಲಿಗೆ ಹೋಗಲು ಸಾಮರ್ಥ್ಯವಿಲ್ಲ. ಆ ಮುನಿಯು ತನ್ನ ತಪಃಪ್ರಭಾವ ದಿಂದ ಉತ್ತಮಲೋಕವನ್ನು ಹೊಂದಿದನು. ಕನ್ನೆಯರು ಮಾತ್ರ ಇದುವರೆಗೂ ಅಲ್ಲೇ ಇರುವರು. ಅವರು ಈ ರೀತಿಯಾಗಿ ಪ್ರತಿದಿವಸವೂ ಗಾಯನ ಮಾಡು ವರು” ಎಂದು ಹೇಳಿದರು, ಈ ಮಾತುಗಳನ್ನು ಕೇಳಿ ಶ್ರೀ ರಾಮನು (ಎಲೈ ಲಕ್ಷಣನೇ, ನನ್ನ ಧನುಸ್ಸ ನ್ನು ತೆಗೆದುಕೊಂಡು ಬಾ, ಈಗಲೇ ಆ ಜಲದೇವತೆಯ ಮಂದಿರವನ್ನು ಸುಟ್ಟು ಆ ಕನೈಯರನ್ನು ಬಂಧನದಿಂದ ತಪ್ಪಿಸುವೆನು' ಎಂದು, ಲಕ್ಷ್ಮಣನು ತಂದುಕೊಟ್ಟ ಧನುಸ್ಸನ್ನು ಸ್ವೀಕರಿಸಿ ಪರ್ವಿಯನ್ನು ಟಿಂಕರಿಸಿ, ಬಾಣವನ್ನು ಧನುಸ್ಸಿಗೆ ಸೇರಿ ಸಿದನು. ಆಗ ಭೂಮಿಯ ನಡುಗಿತು. ಜಲದೇವತೆಯು ಗಾಬರಿಗೊಂಡು ತನ್ನ ನಿಜಸ್ವರೂಪವನ್ನು ಧರಿಸಿ ಶ್ರೀ ರಾಮನಿಗೆ ಶರಣಾಗತಳಾಗಿ ರಾಮಚಂದ್ರಾ, ಕ್ಷ ಮಿಸು, ಕ್ಷಮಿಸು ನಾನು ಆ ಹನ್ನೆರಡುಜನ ಕನೈಯರನ್ನೂ ಬಂಧನದಿಂದ ಬಿಡು ವೆನು' ಎಂದು ಪ್ರಾರ್ಥಿಸಿದಳು. ಮತ್ತು ಶ್ರೀ ರಾಮ, ಲಕ್ಷಣ, ಸೀತಾ, ಅಗ ರು ಇವರೆಲ್ಲರಿಗು ನಾನಾವಿಧವಾದ ಪೂಜಾದ್ರವ್ಯಗಳಿಂದ ಸನ್ಮಾನ ಮಾಡಿ, ಜಲದೇವತೆಯ ಶ್ರೀ ರಾಮನಿಂದ ಅಭಯ ವಚನವನ್ನು ಪಡೆದು ಅಂತರ್ಹಿತ ಳಾದಳು ಅಷ್ಟರಲ್ಲಿ ಆ ಕನ್ಯಯರ ತಂದೆಗಣದ ನಾಗ-ಗಂಧರ್ವರು ಶ್ರೀ ರಾಮನ ಬ ಳಿಗೆ ಬಂದು, ರಾಮಚಂದ್ರನನ್ನು ಸ್ತುತಿಸಿ, ಬಂಧನದಿಂದ ಮುಕ್ತರಾದ ತಮ್ಮ ಪುತ್ರಿ ಯರನ್ನು ಕಶ, ಲವ, ಇವರೇ ಮೊದಲಾದ ಮಕ್ಕಳಿಗೆ ವಿವಾಹಮಾಡಿಕೊಳ್ಳುವ ತ ಪ್ರಾರ್ಥಿಸಿದರು. ಶ್ರೀರಾಮನು ಅಗರ ಸಮ್ಮತಿಯನ್ನು ಕೇಳಿದನು. ಆಗ ಕ್ಯರು ಕಮಭದ್ರನೇ, ನಿನ್ನ ನಿರ್ಯಾಣಾನಂತರ ಕುಶನು ಕುಮುದ್ವತಿ ಎಂಬ ಕ "ಯನ್ನು ವಿವಾಹ ಮಾಡಿಕೊಳ್ಳುವನಿರುವನು. ಆದ್ದರಿಂದ ಅವನನ್ನು ಬಿಟ್ಟು ಮಿಕ್ಕ ಏಳುಮಂದಿ ಮಕ್ಕಳಿಗೆ ಈ ನಾಗಕನ್ಯಯರನ್ನು ಕೊಟ್ಟು ವಿವಾಹಮಾಡು. ಯೂಪಕೇತು, ಲವ, ಕುಳ ಇವರ ಹೊರತಾಗಿ ಮಿಕ್ಕ ಐದುಜನ ಕುಮಾರರು ಈ ಐದುಜನ ಗಂಧರ್ವಕಸ್ಯೆಯರ ಪಾಣಿಗ್ರಹಣ ಮಾಡಲಿ, ಯಕೇತುವು ಇನ್ನು ಕೆಲವಕಾಲಗಳ ಮೇಲೆ ರಾಕ್ಷಸನಿಧಿಯಿಂದ ಒಬ್ಬ ಕನೈಯನ್ನು ವಿವಾಹಮಾಡಿ ಕೊಳ್ಳುವನಿರುವನು ಎಂದು ಹೇಳಿದರು. ಇದನ್ನು ಕೇಳಿ ಶ್ರೀ ರಾಮನು, ಕನ್ಯ