ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಯಣ, ಯದ ಲವನು ಶ್ರೀರಾಮನ ಬಳಿಗೆ ಹೋಗಿ ನಮಸ್ಕರಿಸಿದನು. ಸೂರ್ಯನು ಬಂದಿರುವನೆಂಬ ವರ್ತಮಾನವನ್ನು ಕೇಳಿ ಶ್ರೀ ರಾಮನು ಎದ್ದು ಬಂದು ಆತನಿಗೆ ನಮಸ್ಕಾರ ಮಾಡಿ, ಕೈಹಿಡಿದು ಸಭಾಮಂಟಪಕ್ಕೆ ಕರೆದುಕೊಂಡು ಹೋದನು. ಅಲ್ಲಿ ಸೂರ್ಯನನ್ನು ಅರ್ತ್ಯಪಾದ್ಯಾದಿಗಳಿಂದ ಪೂಜಿಸಿ, 'ನೀನು ನಮ್ಮ ವಂಶದ ಮೂಲಪುರುಷನಾಗಿರುವ, ಬಾಲಕನಾದ ಲವನು ಮಾಡಿದ ಅಪರಾಧವನ್ನು ಕ್ಷಮಿಸು ಎಂದು ಶ್ರೀರಾಮನು ಪ್ರಾರ್ಥನೆ ಮಾಡಿದನು ಈ ಮಾತುಗಳನ್ನು ಕೇಳಿ, ಸೂರ್ಯ ನು “ನಿನ್ನ ನಾಭಿಕಮಲದಲ್ಲಿ ಬ್ರಹ್ಮ ಹುಟ್ಟಿದನು. ಅವನಿಂದ ಮರೀಚಿ, ಮರೀಚಿ ಯಿಂದ ಕಶ್ಯಪ, ಕಶ್ಯಪರಿಂದ ನಾನು ಈ ರೀತಿ ಉತ್ಪನ್ನರಾಗಿರುವವ, ಅಂದರೆ ನಾನು ನಿನ್ನ ಮೊಮ್ಮಗನಾಗಬೇಕು. ಈ ದಯಾನಿಧಿ, ನನ್ನ ಮಗನಾದ ಯರು ನ ಅಪರಾಧವನ್ನು ಕ್ಷಮಿಸು ಎಂದು ಹೇಳಿ ಯಮನನ್ನು ಶ್ರೀ ರಾಮನಿಗೆ ಶರಣ ಗರನನ್ನಾಗಿ ಮಾಡಿಸಿದನು. ಶ್ರೀ ರಾಮನು 'ಎಲೈ ಯಮುನೆ, ನಾನು ಭೂಲೋಕ ದಲ್ಲಿ ರಾಜ್ಯ ಸಂರಕ್ಷಣೆ ಮಾಡುತ್ತಿರುವನು. ನೀನು ಯಾವಾಗಲೂ ಆಯುಸ್ಸು ತುಣ ಮುಗಿದವರನ್ನೇ ಯಮಲೋಕಕ್ಕೆ ಕರೆಸಿಕೊ ಎಂದು ಆಜ್ಞಾಪಿಸಿದನು, ಬಳಿಕ ಎಲ್ಲರೂ ಶ್ರೀರಾಮನ ಅಪ್ಪಣೆಯನ್ನು ಪಡೆದು ತೆರಳಿದರು. ಮುಂದೆ ಸು ಮಂತ್ರನಿಗೆ ಮರಣಕಾಲವು ಪ್ರಾಪ್ತವಾಗಲು, ಆತನು ಸ್ನಾನಮಡಿ, ಶ್ರೀ ಕಾವು ಮೂತಿಯನ್ನು ನೋಡುತ್ತ ಪ್ರಾಣತ್ಯಾಗ ಮಾಡಿದನು. ಆತನ ಹೆಂಡತಿಯು ಸಹಗಮನ ಮಡಿದಳು. ಶ್ರೀ ರಾಮನು ಸುಮಂತನೆಂಬ ಆತನ ಮಗನ ಕಡೆ ಯಿಂದ ಉತ್ತರಕ್ರಿಯೆಗಳನ್ನೆಲ್ಲ ನೆರವೇರಿಸಿದನು, ಲಕ್ಷಣನು ಶ್ರೀ ದುನ ಆಜ್ಞೆ ಯಂತ«ಯಾವ ಪ್ರಾಣಿ ಅಲ್ಪಾಯುಷ್ಯದಿಂದ ಮರಣಹೊಂದಿದರೂ ನಮಗೆ ತಿಳಿಸಿ ಬೇಕು ಹುಬುದ್ಧಿಯಿಂದ ಧರ್ಮಾಚರಣೆ ಮಾಡಬೇಕು” ಎಂದು ಸಮಸ್ತ ಪ್ರಜೆಗಳಿಗೆ ಪ್ರಸಿದ್ದಿ ಪಡಿಸಿದನು. ಶ್ರೀರಾಮನು ಯಾವಾಗಲೂ ತನ್ನ ಪ್ರಜೆಗಳಿಗೆ ದುರ್ಗುಣಗಳನ್ನೆಲ್ಲ ಬಿಟ್ಟು ಸದ್ದು ಣಗಳನ್ನು ಸ್ವೀಕರಿಸಿರಿ” ಎಂದು ಉಪದೇಶಿಸುತ್ತಿ ದ್ದನು. ಈ ರೀತಿಯಾಗಿ ಮನು ಅನೇಕ ಪುಣ್ಯಕರ್ಮಗಳನ್ನು ಮಾಡಿ, ತನ್ನ ನಡವಳಿಕೆಗಳಿಂದ ಲೋಕಕ್ಕೆ ಸದ್ಗುಣಗಳನ್ನು ಬೋಧಿಸುತ್ತ ನೀತಿಸಮೇd ನಗಿ ಪರಮಾನಂದದಿಂದ ರಾಜ್ಯಪಾಲನೆ ಮಾಡಿದನು. ಕಣ್ಯಕಾಂಡ ಉತ್ತರಾರ್ಧ ಸ್ಪಮಃ ಮಂಗಳಂ ಕೋಸಲೇಂದ್ರಿಯ ಮಹನೀಯು ಗುಣಾತ್ಮನೇ! ಚಕ್ರವರ್ತಿತನೂಜಯ ಸಾರ್ವಭೌಮಯ ನoಗto 1 :