ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦ ಶ್ರೀ ಗೀ ತಾ ರ್ಥ ಸಾ ರೇ. ವಿಜ್ಞಾನದಿಂದ ಹರಮಾತ್ಮನನ್ನು ತಿಳಿದು ಸುಖದುಃಖಗಳನ್ನು ಬಿಡು ವುನು ” (ಕರ ೧|| ೨| ೧oll) ಇತ್ಯಾದಿ ವಾಕ್ಯಗಳಲ್ಲಿ II ಪರಮಾತ್ಮ ನನ್ನು ತಿಳಿದು ” ಎಂಬದಾಗಿ ವಿಧಿಸಲ್ಪಟ್ಟಿರುವ ಪರವಿದ್ಯೆಯ ಅಂಗ ವಾಗಿ < ಆತ್ಮ ವಿಜ್ಞಾನದಿಂದ ” ಎಂಬದಾಗಿ ಜೀವಾತ್ಮ ಜ್ಞಾನವನ್ನು ವಿಧಿಸಿ, ಜ್ಞಾತವಾಗಿರುವ ಆತ್ಮನು ಉತ್ಪತಿಕೂನ್ಯನಾದುದರಿಂದ ಹು ಟ್ಟುವುದಿಲ್ಲವು, ನಿತ್ಯನಾದುದರಿಂದ ಮೃತಿಹೊಂದುವುದಿಲ್ಲವು. (ಕಠ| ೧| ೨|| ೧v) ಇತ್ಯಾದ್ಯರ್ಥವುಳ್ಳ ವಾಕ್ಯಗಳಿಂದ ಜೀವಾತ್ಮ ಸ್ವರೂಪ ಧನವನ್ನು ಕೂಡ ಮಾಡಿ CC ಅಣುವುಗಿಂತಲೂ ಅಣುವಾಗಿ ಮಹ ತಿಗಿಂತಲೂ ಮಹತ್ತಾಗಿರುವ ” (ಕಠ| ೧|ploo) ಎಂಬ ವಾಕ್ಯದ ಮೊದಲು ಅಪ್ರಾಕೃತ ಸ್ವಾಸಾಧಾರಣ ದಿವ್ಯಮಂಗಳ ವಿಗ್ರಹ ಯು ಕನಾಗಿರುವ ಪರಮಾತ್ಮನನ್ನು ತಿಳಿದವನಿಗೆ ಶೋಕವಿಲ್ಲವು. (ಕರ | ೧|೨|೨) ಕೇವಲವಾದ ಕ ವಣ ಮನನ ನಿದಿಧ್ಯಾಸನಗಳಿಂದ ಈ ಆತ್ಮನು ಹೊಂದಲ್ಪಡಲಾರನು, ಆ ಪರಮಾತ್ಮನ ಪ್ರೀತಿಯನ್ನು ಹೊಂದಿದರೆ ಅವನನ್ನು ಹೊಂದಬಹುದು. ಆದುದರಿಂದ ಪರಮಾತ್ಮ ನಲ್ಲಿ ನಿರತಿಶಯವಾದ ಪ್ರೀತಿಯನ್ನು ಮಾಡಿ ಉಪಾಸನಮಾಡಿದರೆ ಅವ ನಅನುಗ್ರಹದಿಂದ ನಿತ್ಯ ವಿಭೂತಿಯಲ್ಲಿ ನಿತ್ಯಾನಂದ ಸ್ವರೂಪವಾ ಗಿರುವ ನಿತ್ಯಮಂಗಳ ವಿಗ್ರಹ ಯುಕ್ತವಾದ ದಿವ್ಯಾತ್ಮಸ್ವರೂಪವನ್ನು ಕಂಡು ಸಂತೋಷಿಸಬಹುದೆಂಬ ತಾತ್ಸರಗರ್ಭಿತವಾದ (ಕಠ|೧ ೨| ೨೩l) ಇತ್ಯಾದಿ ವಾಕ್ಯದಿಂದ ಪರಸ್ಪರೂಪವನ್ನು ಮತ್ತೂ ಅವನ ಉಪಾಸನ ಪ್ರಕಾರವನ್ನ, ಮತ್ತು ಆ ಉವಾಸನವು ಭಕ್ತಿರೂಪ ಮಾಗಿರಬೇಕೆಂಬುವುದನ್ನೂ ಪತಿವಾದಿಸಿ ಯಾವನು ಒಳ್ಳೆಜ್ಞಾನ ದಿಂದ ಮನಸ್ಸನ್ನು ಸ್ವಾಧೀನಪಡಿಸಿ ಕೊಂಡಿರುವನೊಅವನು ಸಂಸಾ ರಮಾರ್ಗಕ್ಕೆ ಪಾರವಾದ ವಿಷ್ಣು ಸ್ಥಾನವನ್ನು ಹೊಂದುವನು, (ಕಠ | ೧|| ೩| F1) ಎಂಬದಾಗಿ ಪರಮಪದವಾ ಪ್ರಿಯೇ ಇಂತಹಪರವಿದ್ಯೆಗೆ ಫಲವೆಂಬದಾಗಿ ಉಪಸಂಹಾರ ಮಾಡಲ್ಪಟ್ಟಿತು. ಇನ್ನು ಮೇಲೆ ನಾಲ್ಕು ಅಧ್ಯಾಯಗಳಿಂದ ಆ ಜೀವಾತ್ಮ ಸಾಕ್ಷಾತ್ಕಾರವು ಅದಕ್ಕೆ ತಕ್ಕ ಉವಾ ಯಾದಿಗಳೂ ವಿವರಿಸಲ್ಪಡುವುದು,