ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೯೨ ಶ್ರೀಮದ್ಭಾಗವತವು [ಅಧ್ಯಾ ೮. ಎಂದು ಪ್ರೇಮಪರಸ್ಸರವಾಗಿ ಆ ಬಾಲವನ್ನ ಕರದು ತೊಡೆಯಮೇಲೆ ಕು ಳ್ಳಿರಿಸಿಕೊಂಡು ಮೊದಲಿನಂತೆ ಆ ಕೃಷ್ಣನನ್ನು ತನ್ನ ಮುದ್ದು ಮಗನೆಂಬ ಮೋಹದಿಂದ ಆಗಾಗ ಮುತ್ತಿಕ್ಕಿ ಲಾಲಿಸುತ್ತಿದ್ದಳು. ಓ ಪರೀಕ್ಷಿದ್ರಾಜಾ! ಆ ಯಶೋದೆಯ ಭಾಗ್ಯಕ್ಕಿಂತಲೂ ಭಾಗ್ಯವಂಟಿ' ಮೂರು ವೇದಳಿಂದಲೂ, ಉಪನಿಷತ್ತುಗಳಿಂದಲೂ, ಜ್ಞಾನಯೋಗಕರಯೋಗಗಳಿಂದ ಸಹಕರಿಸ ಲ್ಪಟ್ಟ ಭಕ್ತಿಯೋಗದಿಂದಲೂ, ಪಂಚರಾತ್ರಸಂಹಿಕೆಗಳಿಂದಲೂ ಯಾ ವನ ಮಾಹಾತ್ಮವು ಅನವರತವೂ ಕೊಂಡಾಡಲ್ಪಡುವುದೋ, ಅಂತಹ ಪರಮಪುರುಷನನ್ನೇ ತನ್ನ ಮುದ್ದು ಮಗನನ್ನಾಗಿ ಲಾಲಿಸುತ್ತಿದ್ದ ಆಕೆ ಯಲ್ಲವೇ ಪರಮಧಳು.” ಎಂದನು ! ಆಗ ಪರೀಕ್ಷಿದ್ರಾಜನು “ಓ ಮಹರ್ಷಿ ? ನಂದಸಿಗೆ ಈ ವಿಧ ವಾದ 'ಭಾಗ್ಯವುಂಟಾಗುವುದಕ್ಕೆ ಕಾರಣವೇನು ? ಕಾದ್ಭಗವಂ ತನಿಗೆ ಸ್ತನ್ಯಪಾನವನ್ನು ಮಾಡಿಸತಕ್ಕ ಮಹಾಭಾಗ್ಯವು ಆ ಯಶೋದೆಗೆ ಲಭಿಸಬೇಕಾದರೆ, ಆಕೆಯು ಪೂರೈಜನ್ಮದಲ್ಲಿ ಎಷ್ಟು ಪುಣ್ಯವನ್ನು ಮಾಡಿರ ಬೇಕು? ಆ ಪರಮಾತ್ಮನ ಬಾಲಕ್ರೀಡೆಗಳನ್ನು ಕಿವಿಯಿಂದ ಕೇಳಿದರೂ, ಬಾಯಿಂದ ಹೇಳಿದರೂ, ಜನರಿಗೆ ಜನ್ಮಾಂತರಪಾಪಗಳಲ್ಲವೂ ಸೀಗುವುವು. ನಾರದನೇ ಮೊದಲಾದ ಮಹಾಜ್ಞಾನಿಗಳೂ ಕೂಡ ಯಾವನ ಗುಣಗಳ ನ್ನು ಸದಾ ಕೀರ್ತಿಸುತ್ತಿರುವರೋ, ಅಂತಹ ಪರಮಪುರುಷನನ್ನೇ ದೇ ವಕೀವಸುದೇವರು ತಮ್ಮ ಗರದಲ್ಲಿ ಪಡೆದರೂ, ಆ ಕೃಷ್ಣನನ್ನು ಕೈಯಿಂದ ಲಾಲಿಸತಕ್ಕ ಭಾಗ್ಯವೂ, ಅವನ ಬಾಲಕ್ರೀಡೆಗಳನ್ನು ಕಣ್ಣಾ ಕ ನೋಡಿ ಆನಂದಿಸತಕ್ಕ ಫಣ್ಯವೂ ಅವರಿಗೆಮಾತ್ರ ಇಲ್ಲದಿದ್ದುದಕ್ಕೆ ಕಾರ ಣವೇನು.” ಎಂದನು. ಅದಕ್ಕಾ ಶುಕನು. ರಾಜೇಂದ್ರಾ ಕೇಳು (“ಪೂತ್ವದಲ್ಲಿ ಅಷ್ಟವಸುಗಳಲ್ಲಿ ಪ್ರಧಾನನಾದ ದೊಣನೆಂಬವನಿಗೆ ಧರೆಯೆಂಬ ಪತ್ರಿ ಯಿತು. ಬ್ರಹ್ಮದೇವನು ಅವರಿಬ್ಬರನ್ನೂ ಭೂಮಿಯಲ್ಲಿ ಹುಟ್ಟುವಂತೆ ಆಜ್ಞೆ ಮಾಡಿದನು. ಆಗ ಅವರಿಬ್ಬರೂ, ತಾವು ಭೂಮಿಯಲ್ಲಿ ಹುಟ್ಟಿದಾಗ ಖರೇಶ್ವರನಾದ ಶ್ರೀಹರಿಯಲ್ಲಿ ತಮಗೆ ದೃಢವಾದ ಭಕ್ತಿಯುಂಟಾಗುವಂ ತೆ ಅನುಗ್ರಹಿಸಬೇಕೆಂದು ಕೇಳಿಕೊಂಡರು, ಬ್ರಹ್ಮನು ಹಾಗೆಯೇ ಆಗ