೧೯೩ ಶ್ರೀಮದ್ಭಾಗವತವು [ಅಧ್ಯಾ, f. ಮುದ್ದು ಕೃಷ್ಣನ ಸಣ್ಣ ನಡುಪಿಗೆ ಸಾಲದಂತಾಯಿತು. ಆಗ ಯಶೋದೆಗೆ ಅತ್ಯಾತರವುಂಟಾಯಿತು! ಗೋಪಸ್ತಿಯರೆಲ್ಲರೂ ಆಶ್ಚರದಿಂದ ಬೆರ ಗಾಗಿ ನೋಡುತ್ತಿದ್ದು, ಹೇಗಾದರೂ ಆ ಕೃಷ್ಣನನ್ನು ಕಟ್ಟಿಹಾಕಬೇ ಕೆಂಬ ಉದ್ದೇಶದಿಂದ ಯಶೋದೆಯ, ಹಗ್ಗವನ್ನು ಹುಡುಕುವುದಕ್ಕಾಗಿ ತಿ ರುಗಿತಿರುಗಿ ಸಾಕಾಯಿತು.. C ಸಂಚಾರಕ್ರಮದಿಂದ ಅವಳ ಮೈಯೆಲ್ಲವೂ ಬೆವರಿತು ತಾಯಿಯು ಹೀಗೆ ಶ್ರಮಪಡುತ್ತಿರುವುದನ್ನು ನೋಡಿದ ಮೇಲೆ ಕೃಷ್ಣನಿಗೆ ಅವಳಲ್ಲಿ ಕಣೆ.,ಕೊನೆಗೆ ಅವಳ ಕೈಯಿಂದ ಕಟ್ಟಿ ಸಿಕೊಂಡನು. ಓ ಪರೀಕ್ಷಿಜಾ : ! ಬ್ರಹ್ಮ ರುರ್ದದೇವಗಣಗಳನ್ನೂ ಅವರು ಪಾಲಿಸತಕ್ಕ ಸಮಸ್ಯಪ್ರಪಂಚವನ್ನೂ ತನಗೆ ಅಧೀನವಾಗಿಟ್ಟು' ಕೊಂಡಿರುವ ಅಂತಹ ಸತ್ವ ಸ್ವತಂತ್ರನಾದ ಪರಮಪುರುಷನು. ತನ್ನ ಭಕ್ತರಿಗೆ ಮಾತ್ರ ತಾನು ಅಧೀನನೆಂಬುದನ್ನು ಈ ವಿಧವಾದ ನಿದರ್ಶನಗ ಳಿಂದ ತೋರಿಸುತ್ತಿರುವನು. ಓ ರಾಜೇಂವಾ' ಯಶೋದೆಯ ಭಾಗ್ಯಕ್ಕಿಂ ತಲೂ ಭಾಗ್ಯವಂಟಿ ? ಮೋಕ್ಷಪ್ರದನಾದ ಭಗವಂತನು ಯಶೋದೆಯಲ್ಲಿ ತೋರಿಸುತಿಮ್ಮ ಈ ವಿಧವಾದ ಅನುಗ್ರಹಕ್ಕೆ, ಸೃಷ್ಟಿಕರ್ತನಾದ ಬ್ರಹ್ಮ ನಾಗಲಿ, ಲಯಕರ್ತನಾದ ರುದ್ರನಾಗಲಿ, ಆ ಭಗವಂತನ ವಕ್ಷಸ್ಥಲದಲ್ಲಿ ಯೇ ಸತ್ಯವಾಸವನ್ನು ಮಾಡುವ ಲಕ್ಷೆಯಾಗಲಿ ಪಾತ್ರರಾಗಲಿಲ್ಲ! ಭಕ್ಕರಿ ಗೊಲಿಯುವಂತೆ ಆ ಭಗವಂತನು ಜ್ಞಾನಿಗಳಿಗೂ ಒಲಿಯತಕ್ಕವನಲ್ಲವೆಂ ದು ತಿಳಿ ! - ಯಶೋದೆಯು ಕೃಷ್ಣನನ್ನು ಆ ಒರಳಿಗೆ ಕಟ್ಟಿಹಾಕಿದಮೇಲೆ, ಗೃಹಕೃತ್ಯವನ್ನು ನೋಡುವುದಕ್ಕಾಗಿ ಹೊರಟುಹೋದಳು. ಇವಳು ಇತ್ತಲಾಗಿ ಗೃಹಕಾರಗಳನ್ನು ಗಮನಿಸುತ್ತಿದ್ದಾಗ, ಅತ್ತಲಾಗಿ ಕೃಷ್ಣನು ಆ ಒರಳುಕಲ್ಲನ್ನೂ ತನ್ನ ಹಿಂದೆ ಎಳೆದಾಡುತ್ತ, ಅಲ್ಲಲ್ಲಿ ಸುತ್ತುತ್ತಿದ್ದು ಮುಂ ದೆ ಎರಡು ಮತ್ತಿಯ ಮರಗಳನ್ನು ಕಂಡನು, ಓ ರಾಜೇಂದ್ರಾ ! ಪೂತ್ವದಲ್ಲಿ ಕುಬೇರನ ಮಕ್ಕಳಾದ ನಳಕೂಬರಮಣಿಗ್ರಿವರೆಂಬ ಯಕ್ಷರಿಬ್ಬರು, ಐಶ್ವ ರಮದಾಂಥರಾಗಿ,ನಾರದನ ಶಾಪದಿಂದ ಹೀಗೆ ವೃಕ್ಷರೂಪವನ್ನು ಹೊಂದಿ ದ್ಯರು. ಸತ್ವಜ್ಞನಾದ ಕೃಷ್ಣನು ಅದನ್ನು ತಿಳಿದು, ಅವರ ಶಾಪವಿಮೋ ಚಸಕ್ಕಾಗಿ ಸಂಕಲ್ಪಿಸಿಮುಂದೆ ಬಂದನು. ಇದು ಒಂಬತ್ತನೆಯ ಅಧ್ಯಾಯವು.
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೦೮
ಗೋಚರ