೧೮ ಶ್ರೀಮದ್ಭಾಗವತವು [ಅಧ್ಯಾ. ೧೦. ಕೆಂಬ ಅನುಗ್ರಹಬುದ್ದಿಯು ಹುಟ್ಟಿತು. ಆಗ ನಾರದನು ತನ್ನಲ್ಲಿ ತಾನು. * ಆಹಾ ! ಲೋಕದಲ್ಲಿ ಮನುಷ್ಯನಿಗೆ ಇಷ್ಟವಸುಗಳು ಲಭಿಸಿದಾಗ, ಮನಸ್ಸಿನಲ್ಲಿ ಹೆಮ್ಮೆಯುಂಟಾಗುವುದು ಸಹಜವು. ಆದರೆ ಕಾಲ, ರೂಪ, ವಯಸ್ಸು, ವಿದ್ಯೆ ಇವುಗಳಿಂದುಂಟಾಗತಕ್ಕ 'ಮದವು ಇತ್ಯ ಮದದಂತೆ ಬುಕ್ಕಿಯನ್ನು ಕೆಡಿಸಲಾರದು. ಐಶ್ವವ್ಯಮದವು ರಜೋಗುಣ ವನ್ನು ಹೆಚ್ಚಿಸಿ, ಅದರಿಂದ ಕಾಮಕ್ರೋಧಾದಿಗಳನ್ನು ಮಾಡುವುದು! ಈ ಐದ್ಯಮದವು, ಜೂಜು, ಮದ್ಯಪಾನ,ಸಂಗಮ, ಮಂತಾದ ವ್ಯಸ ನಗಳೆಲ್ಲವನ್ನೂ ಹೆಚ್ಚಿಸುವುದು. ವಿಶ್ವದ್ಯಮದವಿದ್ದವರಿಗೆ ತಮ್ಮ ದೇಹ ಕ್ಕ ಜರಾಮಣಗಳೇ ಇಲ್ಲವೆಂಬ ಬುದ್ಧಿಯೂ ಹುಟ್ಟುವುದು. ಆ ಐಶ್ವದ್ಯಮ ದಪಿದ್ದವರು, ಇಂದ್ರಿಯಗಳನ್ನು ಜಯಿಸಲಾರದೆ ಇತರಭೂತಗಳನ್ನು ಹಿಂ ಸಿಸುವರು. ಶರೀರವೆಂಬುದು ಒಳಗಿನ ಪ್ರಾಣವಿರುವವರೆಗೆ ದೇವನ ನುಷಾದಿ ಬೇಧಗಳಿಂದ ಕರೆಯಲ್ಪಡುತ್ತಿದ್ದರೂ, ಆ ಜೀವಿತಕಾಲವು ಕಳೆದ ಮೇಲೆ ಕ್ರಿಮಿಯೆನಿಸಿಕೊಳ್ಳುವುದು. ದಹಿಸಿದಾಗ ಬೂದಿಯೆನಿಸಿಕೊಳ್ಳು ವುದು. ನಾಯಿನರಿಗಳಿಗೆ ಆಹಾರವಾಗಿ ಮಲರೋಪವಾಗುವುದು. ಇಂತ ಹ ತುಚ್ಛದೇಹವನ್ನು ಪೋಷಿಸುವುದಕ್ಕಾಗಿ, ಇತರಭೂತಗಳಿಗೆ ದ್ರೋಹ ವನ್ನು ಮಾಡುವುದರಿಂದ ನರಕವಲ್ಲದೆ ಬೇರೆಯಲ್ಲ. ಹೀಗೆ ನರಕಕಾರಣವಾದ ಪ್ರಾಣಿಹಿಂಸೆಯನ್ನು ಮಾಡತಕ್ಕವರಿಗೆ ಯಾವವಿಧದಲ್ಲಿಯೂ ಶ್ರೇಯ ಸ್ಪಿಲ್ಲ. ದೇಹಾಭಿಮಾನವುಳ್ಳವರು ತಮ್ಮ ದೇಹಪೋಷಣೆಗಾಗಿ ಮಾಡ ತಕ್ಕ ಕಾರಗಳೆಲ್ಲವೂ ಅವರಿಗೆ ಕೇಡನ್ನೇ ತಂದಿಡುವುವು. ಕೊನೆಗೆ ಈ ದೇಹವು ಹೇಗಾದರೂ ಹೋಗಲಿ ! ಜೀವದಶೆಯಲ್ಲಿ ಅದು ನಮ್ಮ ಸ್ವಾಧೀನ ವಾಗಿರುವಾಗಲಾದರೂ ಅದನ್ನು ಸುಖವಾಗಿ ಪೋಷಿಸಬೇಡವೆ?” ಎಂದರೆ ಈ ದೇಹವೆಂಬುದು ಜೀವಿಸಿದಾಗಲೂ ನಮ್ಮ ದಲ್ಲ! ಸತ್ತ ಮೇಲೆಯೂ ನಮ್ಮದಲ್ಲ! ಸತ್ತವನ ದೇಹವು ಬೆಂಕಿಯಲ್ಲಿಯೋ, ನಾಯಿ ನರಿಗಳ ಬಾ ಯಲ್ಲಿಯೋ ಬಿಳುವಂತೆ, ಬದುಕಿರುವಾಗಲೂ ದೇಹವು ತನಗಧೀನ ದುದಲ್ಲ. ಅದನ್ನು ಇಂತವರ ಸ್ವತ್ತೆಂದು ಹೇಳುವುದಕ್ಕೆ ಸಾಧ್ಯವಿಲ್ಲ ! ಅನ್ನವನ್ನು ಕೊಟ್ಟು ಪೋಷಿಸಕ್ಕವನು! ಗರ್ಭಾಧಾನಮಾಡಿದ ತಂದೆ!
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೧೦
ಗೋಚರ