೧೮o ಅಧ್ಯಾ, ೧೦ || ದಶಮಸ್ಕಂಧವ. ವಕ್ರತ್ರನಾಗಿಯೂ, ಶಾoತನಾಗಿಯೂ, ಯದುಪತಿಯಾಗಿಯೂ ಆವತ ರಿಸಿರುವ ಸಿನಗೆ ನಮಸ್ಕಾರವು. ಓ ನಿರತಿಶಯಾನಂದಪೂರ್ಣ ! ನಮ್ಮಿಬ್ಬ ರನ್ನ ನ್ನ ಬಸಾ ಮಯಾ ಸರನ್ನಾಗಿ ಪ್ರತಿಗ್ರಹಿಸಬೇಕು ! ನಿನ್ನ ಪಾದ ಭಕ್ತ ನಾದ ನಾರದಮಹರ್ಷಿಯ ಅನುಗ್ರಹದಿಂದಲೇ, ಈಗ ನಮಗೆ ನಿನ್ನನ್ನು ನೋಡುವ ಭಾಗ್ಯವು ಲಭಿಸಿತು. ಓ ದೇವಾ: ನಮ್ಮ ಎಕ್ಕು ನಿನ್ನ ಗುಣ ಕೀ ರ್ತ ಸಿದ್ಥಿಯ, 'ನಮ್ಮ ಕವಿಗಳು ನಿನ್ನ ಕಥಾ ಶ್ರವಣದಲ್ಲಿಯೂ, ನಮ್ಮ ಕೈಗಳು ನಿನ್ನ ಪಾದಸೇವೆಯಲ್ಲಿಯೂ, ನಮ್ಮ ಮನಸ್ಸು ನಿನ್ನ ಪಾದಸ್ಮರಣ ದಲ್ಲಿ, ನಮ್ಮ ತಿರಸ್ಸು ನಿನ್ನ ಪಾದಾ ಭಿಸೆಂದನದಲ್ಲಿಯೂ, ನಮ್ಮ ಕಣ್ಣು ಗಳು ನಿನ್ನ ಅಂಶಭೂತರಾದ ಸಜ್ಜನರ ದರ್ಶನದಲ್ಲಿಯೂ, ನಿತ್ಯಾಸಕ್ತವಾ ಗಿರುವಂತೆ ಅನುಗ್ರಹಿಸಬೇಕು.” ಎಂದರು, ಓ ಪರೀಕ್ಷಿದ್ರಾಜ• ! ಹೀಗೆ ಆ ಯಕ್ಷರಿಬ್ಬರೂ ಸ್ತುತಿಸುತ್ತಿರುವುದನ್ನು ಕೇಳಿ ಕೃಷ್ಣನು, ತಾನು ಆ ಒರ ಭಕಣ್ಣಿಗೆ ಕಟ್ಟಲ್ಪಟ್ಟಿದ್ಮಹಾಗೆಯೇ, ಅವರನ್ನು ಕುರಿತು ಮಂದಹಾಸಪೂವ್ವ ಕವಾಗಿ ಹೀಗೆಂದು ಹೇಳುವನು, «« ಓ ಯಕ್ಷ ! ಹಿಂದೆ ನೀವು ಐಶ್ವರದಿಂದ ಮಾಲಧರಾಗಿದ್ದಾಗ, ಕರುಣಾಳುವಾದ ನಾರದಮಹರ್ಷಿಯು, ನಿಮ್ಮನ್ನು ಅನುಗ್ರಹಿಸುವುದಕ್ಕಾಗಿಯೇ ಈ ಶಾಪವನ್ನು ಕೊಟ್ಟನು. ಇದನ್ನು ನಾನು ಮೊದಲೇ ಬಲ್ಲೆನು ನನ್ನ... ಮನಸ್ಸನ್ನು ನೆಲೆಗೊಳಿಸಿ, ಸಮಸ್ಯಭೂತಗಳ ಕ್ಲಿಯೂ ಸಮಬುದ್ಧಿಯಳ್ಳ ಸಾಧುಗಳಿಗೆ, ಸೂರೋದಯವಾದೊಡನೆ ಅ೦ ಧಕಾರವು ಹೇಗೋಹಾಗೆ, ನನ್ನ ದರ್ಶನವು ಲಭಿಸಿದಕೂಡಲೆ, ಸಂ ಸರಬಂಧವು ಬಿಟ್ಟು ಹೋಗುವುದು. ಇನ್ನು ನೀವು ನಿಮ್ಮ ಸ್ಮಾ ನಕ್ಕೆ ಹೋಗಬಹುದು. ನಿಮಗೆ ಯಾವಾಗಲೂ ನನ್ನ ಸ್ಮರಣೆಯಿರಲಿ ! ನಿ ಸ್ಮಿಬ್ಬರಿಗೂ ಈಗಾಗಲೇ ಸಂಸಾರೋತ್ತಾರಕವಾದ ಭಕ್ತಿಭಾವವು ಹು ಟ್ಟಿರುವುದು. ನನ್ನನ್ನು ಮರೆಯದೆ ಮನಸ್ಸಿನಲ್ಲಿಟ್ಟಿರಿ !” ಎಂದನು. ಹೀಗೆ ಕೃಷ್ಣನು ಹೇಳಿದೊಡನೆ, ಅವರಿಬ್ಬರೂ ಅವನಿಗೆ ಬಾರಿಬಾರಿಗೂ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ, ಅವನ ಅನುಮತಿಯನ್ನು ಪಡೆದು, ಉತ್ತರದಿಶಾ ಭಿಮಖವ ಗಿ ಹೊರಟರು. ಇದು ಹತ್ತನೆಯ ಅಧ್ಯಾಯವು. {1 3(°
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೧೫
ಗೋಚರ